ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸಂಕಾನಟ್ಟಿಯ ಚಂದ್ರಿ' ನೋಡಲು ಹೋಗೋಣ ಬನ್ನಿ

By Vanitha
|
Google Oneindia Kannada News

ಬೆಂಗಳೂರು, ಜುಲೈ, 31 : ವಿಜಯನಗರ ಬಿಂಬ (ರಿ) ರಂಗ ಶಿಕ್ಷಣ ಕೇಂದ್ರ, ಹಿರಿಯರ ವಿಭಾಗದ ಮೂರನೇ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳು 20ನೇ ವರ್ಷದ ಸಂಭ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ದಲ್ಲಿ ಆಗಸ್ಟ್ 1 ರಂದು ಶನಿವಾರ ನಾಟಕ ಪ್ರದರ್ಶನ ಏರ್ಪಡಿಸಿದೆ.

ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸುತ್ತಿರುವ ಸಂಕಾನಟ್ಟಿಯ ಚಂದ್ರಿ ನಾಟಕ ಬರ್ಟೋಲ್ಟ್ ಬ್ರೆಕ್ಟ್ ಮೂಲದ್ದಾಗಿದ್ದು, ಕನ್ನಡಕ್ಕೆ ಅನುವಾದಿಸಿದವರು ರಂ. ಶಾ (ಆರ್.ಎಸ್ ಲೋಕಾಮರ್). ಇದನ್ನು ನಿರ್ದೇಶಿಸಿ ರಂಗರೂಪ ನೀಡಿದವರು ಎಸ್. ವಿ ಸುಷ್ಮಾ.

Sankanattiya chandri drama show in Bangalore Kalagrama on Saturday

ಈ ನಾಟಕಕ್ಕೆ ವಸ್ತ್ರ ವಿನ್ಯಾಸವು ಶೋಭಾ ವೆಂಕಟೇಶ್ , ರಂಗಸಜ್ಜಿಕೆ ವಿಶ್ವನಾಥ್ ಮಂಡಿ ಅವರಿಂದ ನಿರ್ವಹಿಸಲ್ಪಟ್ಟಿದ್ದು, ಈ ನಾಟಕಕ್ಕೆ ಡಾ. ಎಸ್. ವಿ ಕಶ್ಯಪ್ ಅವರು ಹಾಡುಗಳನ್ನು ನೀಡಿದ್ದು, ಈ ಹಾಡುಗಳಿಗೆ ಸುಶ್ರಾವ್ಯವಾದ ರಾಗ ಸಂಯೋಜನೆ ಮಾಡಿದವರು ರಾಜ್ ಗುರು ಹೊಸಕೋಟೆ.

ಇವರೆಲ್ಲರ ಸಹಭಾಗಿತ್ವದಲ್ಲಿ 2 ಪ್ರದರ್ಶನಗಳನ್ನು ಏರ್ಪಡಿಸಿದ್ದು, ನಾಟಕವು ಕಲಾಗ್ರಾಮ ಮಲ್ಲತ್ತಳ್ಳಿ ಯಲ್ಲಿ ಶನಿವಾರ 3.30 ಕ್ಕೆ ಹಾಗೂ ಸಂಜೆ 7.30ಕ್ಕೆ ನಡೆಯಲಿದೆ. ನಾಟಕ ಪ್ರದರ್ಶನದ ಟಿಕೆಟ್ ಬುಕ್ ಮೈ ಶೋನಲ್ಲಿ ಲಭ್ಯವಿದ್ದು, ಟಿಕೆಟ್ 50 ರೂಗಳನ್ನು ಹೊಂದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.vijayanagarabimba.com, 9844152967, 9845265967

English summary
Bangalore Vijayanagara Bimba,Rangashikshana Kendra,3rd year Diploma students presents Breckts "Sankanattiya Chandri" in Kannada The play is translated by R.S Lokamar and directed by S.V Sushma. The play will be stage Kalagrama Mattalli on 1 August 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X