ನನ್ನ ಈ ಸ್ಥಿತಿಗೆ ಯಡಿಯೂರಪ್ಪ ಕಾರಣ: ಕೆಎಸ್ ಈಶ್ವರಪ್ಪ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 17: ರಾಜ್ಯದಲ್ಲಿ ಎಲ್ಲಾ ಸಮುದಾಯದವರು ಸಮಾವೇಶ ಮಾಡಿದ್ದಾರೆ. ನಾನು ಕೂಡಾ ಕುರುಬರ ಸಮಾವೇಶ ಮಾಡಿದ್ದೇನೆ ಇದರಲ್ಲಿ ತಪ್ಪೇನು? ಬಿಎಸ್ ಯಡಿಯೂರಪ್ಪ ಅವರನ್ನು ಬಿಟ್ಟರೆ ಯಾರೂ ಕೂಡಾ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿರೋಧಿಸಿಲ್ಲ, ನನ್ನ ಈ ಸ್ಥಿತಿಗೆ ಯಡಿಯೂರಪ್ಪ ಕಾರಣ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.

ಹಿಂದುಳಿತ ವರ್ಗದ ಸಮಾವೇಶ ಮಾಡಿದರೆ ಎಲ್ಲರ ಬೆಂಬಲ ಸಿಗುವುದಿಲ್ಲ, ನಾವು ಬಿಜೆಪಿ ಬಾವುಟದ ಅಡಿಯಲ್ಲೇ ಈ ಸಮಾವೇಶ ನಡೆಸಿದ್ದೇವೆ. ಯಡಿಯೂರಪ್ಪ ಬಿಟ್ಟರೆ ಯಾರೂ ಈ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ಪಕ್ಷದ ಹಿರಿಯ ನಾಯಕರು ಬ್ರಿಗೇಡ್ ಬಗ್ಗೆ ಮಾತನಾಡಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ನೇರವಾಗಿ ವಾಗ್ದಾಳಿ ನಡೆಸಿದರು.[ಬಿಜೆಪಿ ಬಿಕ್ಕಟ್ಟು ತಾರಕಕ್ಕೆ, ರಾಯಣ್ಣ ಬ್ರಿಗೇಡ್ ನಲ್ಲಿ ಈಶ್ವರಪ್ಪ]

Sangolli Rayanna Brigade Crisis : KS Eshwarappa blames BS Yeddyurappa

ಬೆಳಗಾವಿಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವತಿಯಿಂದ ಬೃಹತ ಸಮಾವೇಶ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಬ್ರಿಗೇಡ್‌ನ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸೇರಿದಂತೆ ಸುಮಾರು 3 ಸಾವಿರ ಮಂದಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.

ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವುದು ನಮ್ಮ ಗುರಿ, ಬ್ರಿಗೇಡ್ ನಿಂದ ಬಿಜೆಪಿಗೆ ಯಾವುದೇ ಹಾನಿಯಾಗುವುದಿಲ್ಲ.ದಲಿತರು, ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಬೇಕಿದೆ ಎಂದು ಕೆಎಸ್ ಈಶ್ವರಪ್ಪ ಹೇಳಿದರು.

English summary
Former Minister KS Eshwarappa irked BJP President BS Yeddyurappa who is opposing Sangolli Rayanna Brigade. Despite a warning from the BJP State president, senior party leader K.S. Eshwarappa recently participated in the Sangolli Rayanna Brigade programme held at Belagavi.
Please Wait while comments are loading...