ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಣ್ಣ ಬ್ರಿಗೇಡ್: ಈಶ್ವರಪ್ಪ ತಮ್ಮ ಸ್ಥಾನ ಕಳೆದುಕೊಳ್ತಾರಾ?

By Ananthanag
|
Google Oneindia Kannada News

ಬೆಂಗಳೂರು, ಜನವರಿ 12: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ರಾಯಣ್ಣ ಬ್ರಿಗೇಡ್ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಭಾಗವಹಿಸುವಂತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ. ಅಲ್ಲದೆ ಸಂಜೆ ಬಿಜೆಪಿಯಿಂದ ಎಂಎಲ್ ಸಿಗಳ ಸಭೆಯನ್ನು ಕರೆದಿದ್ದು ಬಿಜೆಪಿ ಮುಖಂಡ ಈಶ್ವರಪ್ಪನವರಿಗೆ ಆಹ್ವಾನ ನೀಡಿಲ್ಲ ಸಭೆಯಲ್ಲಿ ಈಶ್ವರಪ್ಪನವರನ್ನು ವಿಧಾನಪರಿಷತ್ ಸ್ಥಾನದಿಂದ ಇಳಿಸುವ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರಾರಂಭದಿಂದಲೂ ಬಿಎಸ್ ವೈ, ಈಶ್ವರಪ್ಪ ಎಣ್ಣೆ-ಶೀಗೆಕಾಯಿಯಂತಿದ್ದು, ಪ್ರಸ್ತುತ ಬಿಎಸ್ ವೈ ರಾಯಣ್ಣ ಬ್ರಿಗೇಡ್ ಗೂ ಬಿಜೆಪಿಗೂ ಸಂಬಂಧವಿಲ್ಲ. ಬ್ರಿಗೇಡ್ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಭಾಗವಹಿಸುವಂತಿಲ್ಲ ಈ ಸಂಬಂಧ ಎಲ್ಲ ವಿಷಯಗಳು ರಾಷ್ಟ್ರೀಯ ನಾಯಕರ ಗಮನದಲ್ಲಿದೆ. ಅವರು ಮುಂದಿನ ಕ್ರಮಕೈಗೊಳ್ಳಲಿದ್ದಾರೆ ಎಂದು ಗುಡುಗಿದರು.[ಯಡಿಯೂರಪ್ಪ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ಈಶ್ವರಪ್ಪ]

ರಾಯಣ್ಣ ಬ್ರಿಗೇಡ್ ಬಗ್ಗೆ ಅಲ್ಲದೆ ಯಾವ ನಾಯಕರ ಬಗ್ಗೆಯೂ ನಾನು ಮಾತನಾಡುವುದಿಲ್ಲ ಎಂದು ಪರೋಕ್ಷವಾಗಿ ಈಶ್ವರಪ್ಪನವರಿಗೆ ಟಾಂಗ್ ನೀಡಿದರು.[ರಾಯಣ್ಣ ಬ್ರಿಗೇಡ್ ಕಾವು: ಈಶ್ವರಪ್ಪನವರಿಗೆ 5 ಪ್ರಶ್ನೆಗಳು]

Sangolli Rayanna brigade and BJP nothing to the relationship says BSY

ಪ್ರಸ್ತುತ ಈಗಾಗಲೇ ಬಿಜೆಪಿ ಮುಖಂಡ ಈಶ್ವರಪ್ಪನವರು ರಾಯಣ್ಣ ಬ್ರಿಗೇಡಿನಲ್ಲಿ ತೊಡಗಿಕೊಂಡಿದ್ದಾರೆ. ಅದರೆ ಯಡಿಯೂರಪ್ಪನವರು ಹಿಂದಿನಿಂದಲೂ ರಾಯಣ್ಣ ಬ್ರಿಗೇಡ್ ಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಈಶ್ವರಪ್ಪನವರು ಬ್ರಿಗೇಡಿನಿಂದ ಜಿಜೆಪಿ ಮುಖ್ಯಮಂತ್ರಿಯಾಗಲು ಯಡಿಯೂರಪ್ಪನವರಿಗೆ ಬೆಂಬಲಿಸುವುದಿಲ್ಲ ಎಂದಿದ್ದರು. ಹೀಗಾಗಿ ಯಡಿಯೂರಪ್ಪ ಈ ಮಾಹಿತಿ ರವಾನಿಸಿದ್ದಾರೆ.[ನನ್ನ ಈ ಸ್ಥಿತಿಗೆ ಯಡಿಯೂರಪ್ಪ ಕಾರಣ: ಕೆಎಸ್ ಈಶ್ವರಪ್ಪ]

ಇನ್ನು ಸಭಾಪತಿ ಡಿ.ಶಂಕರಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಂಜೆ 6 ಗಂಟೆಗೆ ಆಗ್ನೇಯ ಕ್ಷೇತ್ರ ಶಿಕ್ಷಕರ ಚುನಾವಣಾ ಹೆಸರಿನಲ್ಲಿ ಮಲ್ಲೆಶ್ವರಂ ಕಚೇರಿಯಲ್ಲಿ ಜಿಜೆಪಿ ಸಭೆ ನಡೆಯಲಿದೆ. ಈ ಸಭೆಗೆ 24 ಎಂಎಲ್ ಸಿಗಳನ್ನು ಕರೆಯಲಾಗಿತ್ತು.ವಿಧಾನಸಭಾ ಪ್ರತಿಪಕ್ಷ ನಾಯಕ ಈಶ್ವರಪ್ಪನವರನ್ನು ಕರೆದಿಲ್ಲ. ಅಲ್ಲದೆ ಈಶ್ವರಪ್ಪನವರು ಬ್ರಿಗೇಡ್ ಮುಖಂಡತ್ವವನ್ನು ವಹಿಸಿರುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.[ರಾಯಣ್ಣ ಬ್ರಿಗೇಡ್: ಮಾಜಿ ಸಚಿವ ಸೊಗಡು ಶಿವಣ್ಣ ಸಂದರ್ಶನ]

ಅಲ್ಲದೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ ನಡೆಸಿ ಈಶ್ವರಪ್ಪ ಅವರನ್ನು ತಮ್ಮ ವಿಧಾನಪರಿಷತ್ ನಾಯಕ ಸ್ಥಾನದಿಂದ ಅವರನ್ನು ಪದಚ್ಯುತಿಗೊಳಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.

English summary
Sangolli Rayanna brigade and BJP nothing to the relationship says BJP State President B S yeddyurappa in Bengaluru. And Today(Jan.12) evening will be a meeting of the MLC in Malleswarm BJP office. but Yaddyurappa not approach to call the BJP Leader Eshwarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X