ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2020ರ ಹೊತ್ತಿಗೆ ಭಾರತ ಕಾರ್ನಿಯ ಅಂಧತ್ವ ಮುಕ್ತ : ಬಿಎಸ್ವೈ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 29: 2020 ರ ಹೊತ್ತಿಗೆ ಭಾರತವನ್ನು ಕಾರ್ನಿಯ ಅಂಧತ್ವದಿಂದ ಮುಕ್ತಗೊಳಿಸಲು ಪ್ರತಿಯೊಬ್ಬರು ವಿಶೇಷ ಚೇತನರ ಸಬಲೀಕರಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆ ಸಕ್ಷಮ ಆರಂಭಿಸಿರುವ 'ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು' ಎಂದುಭಾಜಪದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಬಿಎಸ್ ಯಡಿಯೂರಪ್ಪನವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ನೇತ್ರದಾನ ಜಾಗೃತಿ ಪಾಕ್ಷಿಕದ ಅಂಗವಾಗಿ ಸಕ್ಷಮ ಸಂಘಟನೆ ಬೆಂಗಳೂರಿನ ಜಯನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿದರು. [ಶಂಕರ ನೇತ್ರಾಲಯದೊಂದಿಗೆ ಇನ್ಫೋಸಿಸ್ ತರಬೇತಿ ಘಟಕ]

ಕಾರ್ನಿಯ ಅಂಧತ್ವಕ್ಕೆ ಒಳಗಾಗಿರುವ ಶೇ 60ರಷ್ಟು ಮಂದಿ 12 ವರ್ಷ ವಯಸ್ಸಿನ ಬಡಮಕ್ಕಳು. ಆ ಮಕ್ಕಳ ಬಾಳಿನಲ್ಲಿ ಬೆಳಕು ತರಲು ನೇತ್ರದಾನದಿಂಧ ಮಾತ್ರ ಸಾಧ್ಯ. ಆದ್ಧರಿಂದ ನೇತ್ರದಾನದ ಸಂಕಲ್ಪ ಮಾಡಬೇಕು ಎಂದು ತಿಳಿಸಿದ ಅವರು ನಮ್ಮ ಕುಟಂಬ ಸದಸ್ಯರು, ನೆರೆಹೊರೆ ಮತ್ತು ಸ್ನೇಹಿತರನ್ನು ನೇತ್ರದಾನ ಮಾಡಲು ಪ್ರೇರೇಪಿಸಬೇಕು ಎಂದು ನುಡಿದರು. [ಪ್ರಜ್ವಲ್ ಯೋಜನೆಗೆ ಚಾಲನೆ]

ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಸಕ್ಷಮದ ದೃಷ್ಟಿ ಸವಾಲುಳ್ಳವರ ರಾಷ್ಟ್ರೀಯ ಕ್ಷಮತಾ ವಿಕಾಸ ಪ್ರಕೋಷ್ಟ ಪ್ರಮುಕ್ ಹಾಗೂ ಕರ್ನಾಟಕ ದಕ್ಷಿಣ ವಿಭಾಗದ ಪ್ರಧಾನ ಕಾರ್ಯದರ್ಶಿ ರಾ ವಿನೋದ್ ಪ್ರಕಾಶ್ ಅವರು "ದಾನ ಭಾರತೀಯರ ಸಹಜ ಸ್ವಭಾವವಾಗಿದ್ದು ಬೇಡರ ಕಣ್ಣಪ್ಪ ಮತ್ತು ದಧೀಚಿ ಮಹರ್ಷಿಗಳ ಆದರ್ಶದಲ್ಲಿ ನಡೆದು ಭಾರತವನ್ನು ಕಾರ್ನಿಯ ಅಂಧತ್ವದಿಂಧ ಸ್ವತಂತ್ರಗೊಳಿಸಲು ಸಕ್ಷಮದ ಅಭಿಯಾನದಲ್ಲಿ ಜನತಾ ಜನಾರ್ಧನರಿಂದ ಜನಪ್ರತಿನಿಧಿಗಳವರೆಗೆ, ವಿದ್ಯಾರ್ಥಿಗಳಿಂಧ ವೈದ್ಯರವರೆಗೆ ಎಲ್ಲರ ಪಾತ್ರ ಪ್ರಮುಖವಾಗಿದೆ" ಎಂದರು.[ಆರೆಸ್ಸೆಸ್ ನಿಂದ ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನ]

English summary
RSS inspired SAKSHAMA’s Cornea Andhatv Mukt Bharat Abhiyan (CAMBA),an awareness event on eye donation, held at Bengaluru on Sunday. SAKSHAMA’s CAMBA Campaign, Cornea Andhatv Mukt Bharat by 2020’: BS Yeddyurappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X