ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ ಟಿಇ ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪಾಠ: ಪೋಷಕರ ಪ್ರತಿಭಟನೆ

ಆರ್ ಟಿಐ ಮಕ್ಕಳಿಗೆ ಪ್ರತ್ಯೇಕ ಕೊಠಡಿ ನೀಡಿದ ಬೆಂಗಳೂರಿನ ಜೆಪಿ ನಗರದ ಬ್ರಿಗೇಡ್ ಶಾಲೆ ವಿರುದ್ಧ ಪೋಷಕರ ಪ್ರತಿಭಟನೆ. ಮಕ್ಕಳಲ್ಲಿ ತಾರತಮ್ಯ ತುಂಬುವ ಯತ್ನದ ವಿರುದ್ಧ ಕಿಡಿ. ಪೋಷಕರ ಆರೋಪ ನಿರಾಕರಿಸಿದ ಶಾಲಾ ಆಡಳಿತ ಮಂಡಳಿ.

|
Google Oneindia Kannada News

ಬೆಂಗಳೂರು, ಜೂ. 21: ಶಿಕ್ಷಣ ಹಕ್ಕು ಕಾಯ್ದೆಯಡಿ ಸೀಟು ಪಡೆದಿರುವ ವಿದ್ಯಾರ್ಥಿಗಳನ್ನು ಶಾಲೆಯೊಂದರ ಆಡಳಿತ ಮಂಡಳಿಯು ಬೇರೊಂದು ಕೋಣೆಯಲ್ಲಿ ಕೂರಿಸಿ ಪಾಠ ಹೇಳಿಕೊಟ್ಟಿದ್ದರ ವಿರುದ್ಧ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ ಜೆಪಿ ನಗರದಲ್ಲಿರುವ ಬ್ರಿಗೇಡ್ ಶಾಲೆಯಲ್ಲಿ ಕೈಗೊಳ್ಳಲಾಗಿದ್ದ ಈ ಕ್ರಮ ಈಗ ಹಲವಾರ ಟೀಕೆ, ಆಕ್ಷೇಪಗಳಿಗೆ ಗುರಿಯಾಗಿದೆ.

RTE childrens' parents protest against Brigade school of JP Nagar in Bengaluru

ಆದರೆ, ಶಾಲೆಯ ಆಡಳಿತ ಮಂಡಳಿ, ಪೋಷಕರ ಈ ಆರೋಪವನ್ನು ತಳ್ಳಿಹಾಕಿದೆ. ಆದರೆ, ಪೋಷಕರ ಪ್ರಕಾರ, ಕಳೆದ ಕೆಲವಾರು ದಿನಗಳಿಂದ ಈ ರೀತಿಯ ಬೇಧ ಆಚರಿಸಲಾಗುತ್ತಿದೆ. ಆದರೆ, ಏನೂ ಅರಿಯದ ಮುಗ್ಧ ಮಕ್ಕಳು ಶಾಲೆಯ ಆಡಳಿತ ವರ್ಗ ಸೂಚಿಸಿದ ಕಡೆ ಕುಳಿತು ಪಾಠ ಕೇಳಿ ಹೋಗಿವೆ. ಆದರೆ, ಬುಧವಾರ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಡಲು ಬಂದ ಪೋಷಕರಿಗೆ ಈ ವಿಚಾರ ತಿಳಿದುಬಂದಿದ್ದರಿಂದ ಗಲಾಟೆಯಾಗಿದೆ.

ಇದರಿಂದ ಕೋಪೋದ್ರಿಕ್ತರಾದ ಪೋಷಕರು ಪ್ರತಿಭಟನೆ ನಡೆಸಿ, ಮುಗ್ಧ ಮಕ್ಕಳಲ್ಲಿ 'ಉಳ್ಳವರು, ಬಡವರು' ಎಂಬ ತಾರತಮ್ಯ ತೋರುತ್ತಿರುವುದು ಸರಿಯೇ ಎಂದು ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

English summary
Parents of RTE children studying in Brigade school in JP Nagar of Bengaluru protested on June 21st, 2017, against the governing committee of the school. They alleged that, governing committee made RTE children to study in separate room thus differentiating them from rich children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X