8 ನಾಯಿಮರಿ ಕೊಂದ ಮಹಿಳೆಗೆ ಒಂದು ಸಾವಿರ ರೂ. ದಂಡ!

Posted By: Gururaj
Subscribe to Oneindia Kannada

ಬೆಂಗಳೂರು, ಆ.08 : ಹದಿನೈದು ದಿನದ 8 ನಾಯಿಮರಿಗಳನ್ನು ಹತ್ಯೆ ಮಾಡಿದ್ದ ಮಹಿಳೆಗೆ ನ್ಯಾಯಾಲಯ ಒಂದು ಸಾವಿರ ರೂ. ದಂಡ ವಿಧಿಸಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಪ್ರಾಣಿದಯಾ ಸಂಘ ನಿರ್ಧರಿಸಿದೆ.

ವೀಡಿಯೊ: ನಾಯಿಯನ್ನು ರಸ್ತೆ ದಾಟಿಸಲು ವಾಹನಗಳನ್ನು ತಡೆದ ಪೊಲೀಸ್

ಪೊನ್ನಮ್ಮ ಎಂಬ ಮಹಿಳೆ 2016ರ ಮಾರ್ಚ್ 16ರಂದು ಹದಿನೈದು ದಿನಗಳ ಎಂಟು ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಹತ್ಯೆ ಮಾಡಿದ್ದಳು. ಈ ಘಟನೆ ನಡೆದ ಕೆಲವು ದಿನಗಳಲ್ಲಿ ತಾಯಿ ನಾಯಿಯೂ ಸಾವನ್ನಪ್ಪಿತ್ತು.

Rs 1000 fine for women who murderd 8 puppies

ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ಈ ಘಟನೆ ನಡೆದಿತ್ತು. ಸ್ಥಳೀಯರ ನೆರವಿನಿಂದ ಪ್ರಾಣಿದಯಾ ಸಂಘದವರು ಪೊಲೀಸರಿಗೆ ಪೊನ್ನಮ್ಮ ವಿರುದ್ಧ ದೂರು ನೀಡಿದ್ದರು. ಪೀಣ್ಯ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು.

ಪಾಕಿಸ್ತಾನ: ಮಗುವನ್ನು ಕಚ್ಚಿದ ನಾಯಿಗೆ ಮರಣ ದಂಡನೆ ಶಿಕ್ಷೆ!

ಪ್ರಕರಣದ ವಿಚಾರಣೆ ನಡೆಸಿದ 45ನೇ ಎಸಿಎಂಎಂ ಕೋರ್ಟ್ ಪೊನ್ನಮ್ಮಗೆ ಒಂದು ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲವಾದರೆ ಹದಿನೈದು ದಿನಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ. ಪ್ರಾಣಿದಯಾ ಸಂಘ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.

Cute Pappy Dog

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru ACMM court fined Rs 1000 for Ponnamma who murderd 8 puppies in 2016. Case registered in Peenya police station limits.
Please Wait while comments are loading...