ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೀತಾಲಕ್ಷ್ಮೀ ಕುಟುಂಬಕ್ಕೆ 10 ಲಕ್ಷ ಪರಿಹಾರ

|
Google Oneindia Kannada News

ಬೆಂಗಳೂರು, ಏ. 27 : ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿ ಬಳಿ ಕಾಲುಜಾರಿ ಚರಂಡಿಗೆ ಬಿದ್ದಿದ್ದ 9 ವರ್ಷದ ಬಾಲಕಿ ಗೀತಾಲಕ್ಷ್ಮೀ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಲೋಕಾಯುಕ್ತರು ಬಿಬಿಎಂಪಿ ಮತ್ತು ಜಲಮಂಡಳಿಗೆ ಸೂಚನೆ ನೀಡಿದ್ದಾರೆ. 2014ರ ಅಕ್ಟೋಬರ್‌ನಲ್ಲಿ ಗೀತಾಲಕ್ಷ್ಮೀ ಚರಂಡಿಗೆ ಬಿದ್ದು ಕೊಚ್ಚಿ ಹೋಗಿದ್ದಳು.

ಕೆಲವು ದಿನಗಳ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್ ಈ ಕುರಿತು ಸೂಚನೆ ನೀಡಿದ್ದಾರೆ. [ಗೀತಾಲಕ್ಷ್ಮೀ ಶವವಾಗಿ ಪತ್ತೆ]

Lokayukta

ಘಟನೆ ಏನು : 2014ರ ಅಕ್ಟೋಬರ್ 6ರಂದು ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿತ್ತು. ದಸರಾ ರಜೆ ಕಳೆಯಲು ತಮಿಳುನಾಡಿನಿಂದ ಬೆಂಗಳೂರಿನಲ್ಲಿರುವ ಚಿಕ್ಕಮ್ಮನ ಮನೆಗೆ ಬಂದಿದ್ದ ಗೀತಾಲಕ್ಷ್ಮೀ ರಾತ್ರಿ 8.15ರ ಸುಮಾರಿಗೆ ಚರಂಡಿಗೆ ಕಾಲುಜಾರಿ ಬಿದ್ದಿದ್ದಳು. ಚರಂಡಿ ತುಂಬಿ ಹರಿಯುತ್ತಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದಳು.[ಭಾರೀ ಮಳೆ : ಮೋರಿಯಲ್ಲಿ ಕೊಚ್ಚಿ ಹೋದ ಬಾಲಕಿ]

ಅಕ್ಟೋಬರ್ 8 ಎಂದು ಗೀತಾಲಕ್ಷ್ಮೀ ಶವ ಮಡಿವಾಳ ಕೆರೆಯ ಬಳಿಯ ರಾಜಾ ಕಾಲುವೆಯಲ್ಲಿ ಪತ್ತೆಯಾಗಿತ್ತು. ಬಿಬಿಎಂಪಿ, ಅಗ್ನಿಶಾಮಕ, ಗೃಹ ರಕ್ಷಕ ದಳ ಹಾಗೂ ಎನ್‌ಡಿಆರ್‌ಎಫ್‌ನ 150ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಲೋಕಾಯುಕ್ತರು ಈ ಘಟನೆ ಕುರಿತು ನಿರ್ಲಕ್ಷ್ಯದ ದೂರು ದಾಖಲಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ನಡೆದ ಸಭೆಯಲ್ಲಿ ಈ ಘಟನೆಯನ್ನು ಪ್ರಸ್ತಾಪಿಸಿದ್ದು ಮ್ಯಾನ್‌ಹೋಲ್‌ ಮತ್ತು ಚರಂಡಿಗಳನ್ನು ರಿಪೇರಿ ಮಾಡಲು ಬಿಬಿಎಂಪಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಇಂತಹ ಪ್ರಕರಣಗಳು ನಡೆದಾಗ ಅವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

English summary
Six months after Geethalakshmi (9) was washed away in the storm-water drain following heavy rains at Bilekahalli, Bengaluru lokayukta has directed both the BBMP and the BWSSB to consider Rs. 10 lakh compensation in such cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X