ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : 1.28 ಕೋಟಿ ಮೌಲ್ಯದ ಹಳೆ ನೋಟುಗಳು ವಶ

ನಿಷೇಧಿತ 500 ಹಾಗೂ 1000 ಹಳೆ ನೋಟುಗಳನ್ನು ಹೊಂದಿದ್ದ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಗುರುವಾರದಂದು ಬಂಧಿಸಿದ್ದಾರೆ. ಅರೋಪಿಗಳ ಬಳಿ ಇದ್ದ ಹಳೆ ನೋಟುಗಳ ಲೆಕ್ಕ ಹಾಕಿದಾಗ 1.28 ಕೋಟಿ ರುಗೂ ಅಧಿಕ ಮೊತ್ತ ಸಿಕ್ಕಿದೆ.

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಮಾರ್ಚ್ 23: ನಿಷೇಧಿತ 500 ಹಾಗೂ 1000 ಹಳೆ ನೋಟುಗಳನ್ನು ಹೊಂದಿದ್ದ ಇಬ್ಬರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಗುರುವಾರದಂದು ಬಂಧಿಸಿದ್ದಾರೆ. ಅರೋಪಿಗಳ ಬಳಿ ಇದ್ದ ಹಳೆ ನೋಟುಗಳ ಲೆಕ್ಕ ಹಾಕಿದಾಗ 1.28 ಕೋಟಿ ರುಗೂ ಅಧಿಕ ಮೊತ್ತ ಸಿಕ್ಕಿದೆ.

ಬಂಧಿತರನ್ನು ಅಜಯ್ ಹಾಗೂ ರಾಹುಲ್ ಎಂದು ಗುರುತಿಸಲಾಗಿದ್ದು, ಇಬ್ಬರು ಕೂಡಾ ಕಮಿಷನ್ ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

Rs 1.28 crore demonetised notes seized in Bengaluru by CCB police

ಇಬ್ಬರು ಶೇಷಾದ್ರಿಪುರದಲ್ಲಿ ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದಾರೆ. ಹಳೆ ನೋಟು ವಿನಿಮಯ ದಂಧೆ, ಫೇಕ್ ಕರೆನ್ಸಿ ಚಾಲನೆ, ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಅನೇಕ ಮಂದಿಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ.

ಈ ಜಾಲದಲ್ಲಿ ಇನ್ನೂ ಅನೇಕ ಮಂದಿ ಆರೋಪಿಗಳ ಬಂಧನ ನಿರೀಕ್ಷಿಸಬಹುದು ಎಂದು ಕ್ರೈಂ ವಿಭಾಗದ ಎಸಿಪಿ ಎಸ್ ರವಿ ಅವರು ಹೇಳಿದರು.

Rs 1.28 crore demonetised notes seized in Bengaluru by CCB police

ಬೆಂಗಳೂರು ಸಿಟಿ ಕ್ರೈಂ ಬ್ರಾಂಚ್ ವಿಭಾಗದ ಪೊಲೀಸರು, ಗುರುವಾರ ಬೆಳಗ್ಗೆ ಶೇಷಾದ್ರಿಪುರದಲ್ಲಿರುವ ಅಪಾರ್ಟ್ಮೆಂಟ್ ಮೇಲೆ ಏಕಾಏಕಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದರು. ಮನೆಯಲ್ಲಿದ್ದ ನಗದು ಹಣ, ಚೆಕ್, ಒಂದಷ್ಟು ಕಡತಗಳನ್ನು ಜಪ್ತಿ ಮಾಡಲಾಯಿತು.

ಅಕ್ರಮವಾಗಿ ಅಪಾರ ಪ್ರಮಾಣದ ನಿಷೇಧಿತ ಹಣವನ್ನು ವಿನಿಮಯ ಮಾಡಿಕೊಳ್ಳುವವರಿಗೆ ಇವರಿಬ್ಬರು ನೆರವಾಗುತ್ತಿದ್ದರು. ಹೀಗೆ ಪಡೆದ ಹಳೆ ನೋಟುಗಳಿಗೆ ಬದಲಿಗೆ ನಕಲಿ ನೋಟುಗಳನ್ನು ವಿತರಿಸುತ್ತಿದ್ದರು.

Rs 1.28 crore demonetised notes seized in Bengaluru by CCB police

ಹಣ ವಿನಿಮಯಕ್ಕಾಗಿ ಕಮಿಷನ್ ಪಡೆದುಕೊಳ್ಳುತ್ತಿದ್ದರು. ಈ ಜಾಲದಲ್ಲಿ ಇನ್ನೂ ಅನೇಕ ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ. (ಒನ್ಇಂಡಿಯಾ ಸುದ್ದಿ)
English summary
The Bengaluru police on Thursday arrested two people for possessing Rs 1.28 crore in demonetised Rs 1,000 and Rs 500 currency notes. The duo identified as Ajay and Rahul have been arrested for illegally possessing huge amounts of demonetised currency notes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X