ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದವ ಸಿಕ್ಕಿಬಿದ್ದ

|
Google Oneindia Kannada News

ಬೆಂಗಳೂರು, ಮೇ 03 : ಬೆಂಗಳೂರಿನ ಕತ್ರಿಗುಪ್ಪೆ ಬಳಿ ಯುವತಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಊಬರ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಯನ್ನು ಚನ್ನಮ್ಮನಕೆರೆ ಅಚ್ಚುಕಟ್ಟೆ ಠಾಣೆ ರೌಡಿ ಶೀಟರ್ ಅಕ್ಷಯ್ (24) ಎಂದು ಗುರುತಿಸಲಾಗಿದೆ. ಏಪ್ರಿಲ್ 23ರಂದು ರಾತ್ರಿ 9.50ರ ಸುಮಾರಿಗೆ ಪಿಜಿ ಮುಂದೆ ನಿಂತಿದ್ದ ಯುವತಿಯನ್ನು ಎತ್ತಿಕೊಂಡು ಹೋಗಿದ್ದ ಅಕ್ಷಯ್, ಆಕೆಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದ. [ಬೆಂಗಳೂರು: ಪಿಜಿ ಎದುರೆ ಯುವತಿ ಅಪಹರಣ ಯತ್ನ]

ಸಂತ್ರಸ್ತ ಯುವತಿ ನೀಡಿರುವ ಹೇಳಿಕೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಅಕ್ಷಯ್‌ನನ್ನು ಬಂಧಿಸಿದ್ದಾರೆ. ಕೆಲಸ ಮುಗಿಸಿಕೊಂಡು ಬರುತ್ತಿದ್ದ ಅಕ್ಷನ್ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಆಕೆಯನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ನಡೆಸಲು ಯತ್ನಿಸಿದ್ದ, ಆಕೆ ಕೂಗಿಕೊಂಡ ಬಳಿಕ ಆಕೆಯನ್ನು ಬಿಟ್ಟು ಪರಾರಿಯಾಗಿದ್ದ.

ಮಾಧ್ಯಮಗಳಲ್ಲಿ ಪ್ರಸಾರವಾದ ವರದಿ ನೋಡಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ಅಕ್ಷಯ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಷಯ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. [ಬೆಂಗಳೂರು ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಎನ್ ಜಿಒ]

ಅಕ್ಷಯ್ ರೌಡಿ ಶೀಟರ್ : ಊಬರ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಕ್ಷಯ್ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ರೌಡಿ ಶೀಟರ್‌ ಆಗಿದ್ದಾನೆ. 2014ರ ಸೆಪ್ಟೆಂಬರ್‌ನಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿಯೂ ಅಕ್ಷಯ್ 2ನೇ ಆರೋಪಿಯಾಗಿದ್ದ.

ಅಕ್ಷಯ್ ಸ್ನೇಹಿತನ ಜೊತೆ ಸೇರಿ ಶಶಿಕುಮಾರ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಕುರಿತು ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿತ್ತು. ಕತ್ರಿಗುಪ್ಪೆಯ ಮಾರಮ್ಮನ ಗುಡಿ ಪ್ರದೇಶದಲ್ಲಿಯ ಜನರಿಗೂ ಈತ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

English summary
Chennammanakere Achukattu police arrested Akshay (24) in connection with the case of 22-year-old woman was abducted while she was speaking on her mobile phone in front of her paying guest (PG) accommodation at Katriguppe, Bengaluru. Akshay was involved in an attempt to murder case in C.K. Achukattu police station limits in 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X