ರೆಡ್ಡಿ ಸಮುದಾಯವನ್ನು 2ಎಗೆ ಸೇರಿಸುವ ಬಗ್ಗೆ ಚರ್ಚೆ: ಸಿದ್ದರಾಮಯ್ಯ

ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿ ಕೊಟ್ಟ ನಂತರ ರೆಡ್ಡಿ ಸಮುದಾಯವನ್ನು 2ಎಗೆ ಸೇರಿಸುವ ಬಗ್ಗೆ ಆಯೋಗ ಹಾಗೂ ಕೇಂದ್ರ ಸರ್ಕಾರದ ಜತೆ ಚರ್ಚೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

By:
Subscribe to Oneindia Kannada

ಬೆಂಗಳೂರು, ಜನವರಿ 30: ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವರದಿ ಕೊಟ್ಟ ನಂತರ ರೆಡ್ಡಿ ಸಮುದಾಯವನ್ನು 2ಎಗೆ ಸೇರಿಸುವ ಬಗ್ಗೆ ಆಯೋಗ ಹಾಗೂ ಕೇಂದ್ರ ಸರ್ಕಾರದ ಜತೆ ಚರ್ಚೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ರೆಡ್ಡಿ ಜನ ಸಂಘದ ಪ್ರಪ್ರಥಮ ರಾಜ್ಯ ಮಟ್ಟದ ಸಮಾವೇಶದಲ್ಲಿಸಿದ್ದರಾಮಯ್ಯ ಅವರು ಮಾತನಾಡಿ, ರೆಡ್ಡಿ ಜನಾಂಗದ ಆಶೋತ್ತರಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿದೆ ಎಂದರು.

ಕೆ.ಸಿ.ರೆಡ್ಡಿ ಅವರ ಪ್ರತಿಮೆ ಸ್ಥಾಪಿಸಲು ಸರ್ಕಾರ ಬದ್ಧವಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮುಖ್ಯಮಂತ್ರಿಗಳಿಗೆ ಮನವಿ ಪತ್ರ:
* ರೆಡ್ಡಿ ಸಮುದಾಯವನ್ನು 2ಎಗೆ ಸೇರಿಸಬೇಕು, ಕೇಂದ್ರ ಮೀಸಲಾತಿ ನೀತಿಯಡಿ ಒಬಿಸಿ ಸೇರಿಸಬೇಕು
* ಮಹಾಯೋಗಿ ವೇಮನ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರ್ಕಾರ ವತಿಯಿಂದ ಆಚರಿಸಬೇಕು.
* ಎರಡು ವಿಶ್ವವಿದ್ಯಾಲಯಗಳಿಗೆ ಇವರ ಹೆಸರು ಇಡಬೇಕು
* ಕೆ.ಸಿ.ರೆಡ್ಡಿ ಹಾಗೂ ಕೆ.ಎಸ್.ಪಾಟೀಲ್ ಪುತ್ಥಳಿ ಸ್ಥಾಪಿಸಬೇಕು
* ಶಿಕ್ಷಣ ಸಂಸ್ಥೆ, ಆಸ್ಪತ್ರೆ ಸ್ಥಾಪನೆಗೆ ಸರ್ಕಾರಿ ಜಾಗ ನೀಡಬೇಕು
* ಕೆಪಿಎಸ್‍ಸಿ ಇನ್ನಿತರ ಆಯೋಗಗಳು ನಿಗಮ ಮಂಡಳಿಗಳಿಗೆ ರೆಡ್ಡಿ ಸಮುದಾಯದವರನ್ನು ನೇಮಿಸಬೇಕು.
* ರೆಡ್ಡಿ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸಬೇಕು.

ಸಿದ್ದರಾಮಯ್ಯರಿಂದ ಭರವಸೆ

ಅಖಿಲ ಕರ್ನಾಟಕ ರೆಡ್ಡಿ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ವೇಮನ ಹಾಗೂ ಮಲ್ಲಮ್ಮ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು.

ಆರ್ಥಿಕ ಕ್ಷೇತ್ರದಲ್ಲಿ ರೆಡ್ಡಿ ಜನಾಂಗ

ರೆಡ್ಡಿ ಸಮುದಾಯದ ವೇಮನ, ಮಲ್ಲಮ್ಮ ಅವರ ಸೇವೆಗಳು ಅಪಾರ. ಬಸವಣ್ಣ, ತಿರುವಳ್ಳುವರ್ ಅವರಂತೆ ಅಪಾರ ಕೊಡುಗೆ ನೀಡಿದ್ದಾರೆ. ಸಾಮಾಜಿಕ, ಶಿಕ್ಷಣ, ಕೃಷಿ, ಆರ್ಥಿಕ ಕ್ಷೇತ್ರದಲ್ಲಿ ರೆಡ್ಡಿ ಜನಾಂಗ ತನ್ನದೇ ಆದ ಕೊಡುಗೆ ನೀಡಿದೆ. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ ಕೆ.ಸಿ.ರೆಡ್ಡಿ ಯವರ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಕೆ.ಸಿ.ರೆಡ್ಡಿ ಯವರ ಕೊಡುಗೆ ಅಪಾರ

ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಕೆ.ಸಿ.ರೆಡ್ಡಿ. ವಿಧಾನಸೌಧಕ್ಕೆ ಅಡಿಗಲ್ಲು ಹಾಕಿದ್ದರು ಎಂದು ಹೇಳಿದರು. ಇದೊಂದು ಐತಿಹಾಸಿಕ ಸಮಾವೇಶ. ಅತ್ಯಂತ ಸಂತೋಷದಲ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದೇನೆ. ನಮ್ಮ ಸಮಾಜ ಜಾತಿ ವ್ಯವಸ್ಥೆಯಿಂದ ಕೂಡಿದೆ. ಅವಕಾಶ ವಂಚಿತ, ಶಿಕ್ಷಣ ವಂಚಿತ ಸಮುದಾಯಗಳು ಒಗ್ಗೂಡಿ ಚಿಂತಿಸಿ ಸಂಘಟನೆಯ ಮೂಲಕ ಅಭಿವೃದ್ಧಿ ಕಂಡುಕೊಳ್ಳಬೇಕು ಎಂದು ತಿಳಿಸಿದರು.

3 ಲಕ್ಷಕ್ಕೂ ಅಧಿಕ ಜನ

ಅಖಿಲ ಕರ್ನಾಟಕ ರೆಡ್ಡಿ ಸಮುದಾಯದ ಸಮಾವೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶದ ಗಣ್ಯರು, ರಾಜ್ಯದ ಎಲ್ಲಾ ರೆಡ್ಡಿ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಕುಪೇಂದ್ರ ರೆಡ್ಡಿ, ಸತೀಶ್ ರೆಡ್ಡಿ, ರಾಮಲಿಂಗಾರೆಡ್ಡಿ, ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲರೂ ಒಟ್ಟಿಗೆ ಕಾಣಿಸಿಕೊಂಡರು.

ರೆಡ್ಡಿಗಳ ಸಮಾವೇಶದಲ್ಲಿ ಬಿಎಸ್ ವೈ

ಅಖಿಲ ಕರ್ನಾಟಕ ರೆಡ್ಡಿ ಜನಾಂಗದ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಪಾಲ್ಗೊಂಡಿದ್ದರು.

ಸ್ಮರಣ ಸಂಚಿಕೆ ಬಿಡುಗಡೆ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಸಚಿವ ಎಂಬಿ ಪಾಟೀಲ್, ಮಾಜಿ ಸಚಿವ ಜನಾರ್ದನ ರೆಡ್ಡಿ, ಪರಿಸರವಾದಿ ಯಲ್ಲಪ್ಪ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ರೆಡ್ಡಿ ಸಮಾವೇಶದ ಬಗ್ಗೆ

ಅರಮನೆ ಮೈದಾನದಲ್ಲಿ ನಡೆದ ರೆಡ್ಡಿ ಸಮಾವೇಶದ ಚಿತ್ರಗಳನ್ನು ಟ್ವೀಟ್ ಮಾಡಿ ಹಂಚಿಕೊಂಡ ಸಚಿವ ರಾಮಲಿಂಗಾರೆಡ್ಡಿ.

English summary
Chief Minister Siddaramaiah on Sunday said the Reddy community’s demand for inclusion in 2A Category for reservation will be taken up with the Centre.
Please Wait while comments are loading...