ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭ

|
Google Oneindia Kannada News

ಬೆಂಗಳೂರು, ಮೇ 21 : ನಮ್ಮ ಮೆಟ್ರೋ ರೈಲು ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭವಾಗಿದೆ. ಅರ್ಧಗಂಟೆಗೆ 10 ರೂ. ದರ ನಿಗದಿ ಮಾಡಲಾಗಿದ್ದು, ಪ್ರಯಾಣಿಕರು 3 ಕಿ.ಮೀ.ವರೆಗೆ ಬೈಕ್‌ನಲ್ಲಿ ಸಂಚಾರ ನಡೆಸಬಹುದಾಗಿದೆ.

ಶನಿವಾರ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಬೈಕ್ ಸೇವೆಗೆ ಚಾಲನೆ ನೀಡಿದರು. ಭಾನುವಾರದಿಂದ ಮೆಟ್ರೋ ನಿಲ್ದಾಣದಲ್ಲಿ ಬೈಕ್ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಪ್ರಸ್ತುತ ಭಾನುವಾರ ಮತ್ತು ಸೋಮವಾರ ಮಾತ್ರ ಈ ಬೈಕ್ ಸೇವೆ ಲಭ್ಯವಿದೆ. [ಅಬ್ಬಬ್ಬಾ, ಎಂಥಾ ರೋಮಾಂಚನಕಾರಿ ಸ್ಟಂಟ್!]

kj george

ಮೊದಲ ಹಂತದಲ್ಲಿ ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮಾತ್ರ ಬೈಕ್‌ಗಳು ಬಾಡಿಗೆಗೆ ಲಭ್ಯವಿದೆ. ಪೀಣ್ಯ ಮತ್ತು ಸಂಪಿಗೆ ರಸ್ತೆ ನಿಲ್ದಾಣದಲ್ಲಿ ಜೂನ್ 2ನೇ ವಾರದಿಂದ ಬೈಕ್‌ಗಳು ಬಾಡಿಗೆಗೆ ದೊರೆಯುತ್ತವೆ. [ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕಗಳು ಹೆಚ್ಚಳ]

ಮುಂದಿನ ದಿನಗಳಲ್ಲಿ ಟ್ರಿನಿಟಿ ವೃತ್ತ, ಸಂಪಿಗೆ ರಸ್ತೆ, ಪೀಣ್ಯ, ನಾಯಂಡಹಳ್ಳಿ ಜಂಕ್ಷನ್, ರಾಜಾಜಿನಗರ, ವಿಜಯನಗರ ನಿಲ್ದಾಣಗಳಲ್ಲಿ ಬೈಕ್ ಬಾಡಿಗೆಗೆ ಸಿಗಲಿದೆ. ಮೆಟ್ರೋ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಸುತ್ತಮುತ್ತಲ ಪ್ರದೇಶಕ್ಕೆ ತೆರಳಲು ಬೈಕ್ ಬಳಸಬಹುದು. ಪುನಃ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ, ಮೆಟ್ರೋದಲ್ಲಿ ವಾಪಸ್ ಆಗಬಹುದಾಗಿದೆ. [ಬೆಂಗಳೂರಲ್ಲಿ ಬಾಡಿಗೆ ಬೈಕ್ ಪಡೆದು ನಗರ ಸುತ್ತಾಡಿ]

bike for rent

ಗಂಟೆಗೆ 20 ರೂ. ಬಾಡಿಗೆ : ಸಾಮಾನ್ಯ ಬೈಕ್‌ಗಳಿಗೆ ಪ್ರತಿ ಗಂಟೆಗೆ 20 ರೂ. ಬಾಡಿಗೆ ಪಾವತಿ ಮಾಡಬೇಕು. 3 ಕಿ.ಮೀ.ಗಿಂತ ದೂರ ಸಂಚಾರ ಮಾಡಿದರೆ ಪ್ರತಿ ಕಿ.ಮೀಗೆ 3 ರೂ. ದರ ಪಾವತಿ ಮಾಡಬೇಕು. ಐಷಾರಾಮಿ ಬೈಕ್‌ಗಳಿಗೆ ದಿನಕ್ಕೆ 1 ರಿಂದ 3 ಸಾವಿರ ರೂ.ದರವಿರುತ್ತದೆ.

English summary
You can get rent a bike service at Namma metro station Bengaluru from May 22, 2016. BMRCL will introduce this concept at 5 stations. It will be extended to more stations if the response is good. On Saturday May 21st Bengaluru Development minister K.J.George formally inaugurated the service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X