ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಹೃದಯ'ವಂತೆ ರೀನಾ ಸಮಾಜ ಸೇವಾ ಸಂಸ್ಥೆಗೆ 5 ವರ್ಷ

|
Google Oneindia Kannada News

ಬೆಂಗಳೂರು, ನ. 16 : ಹೃದಯ ದಾನ ಪಡೆದ ಯುವತಿ ಆರಂಭಿಸಿದ ಸಂಸ್ಥೆಗೆ ಐದು ವರ್ಷದ ಸಂಭ್ರಮ. ಹೃದಯಬೇನೆ ಮತ್ತು ಮೂತ್ರಪಿಂಡ ಕಸಿಗೆ ಒಳಗಾದವರ ಬಾಳಿನ ಬೆಳಕಾಗಿ ನಿಂತಿರುವ ರೀನಾ ರಾಜು ಅವರ 'ರೀನಾ ರಾಜು ಫೌಂಡೇಷನ್ ಗೆ' ಐದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂತಸ ಹಂಚಿಕೊಳ್ಳಲು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ.

ಈ ಸಾರ್ಥಕ ಕ್ಷಣಗಳನ್ನು ಹಂಚಿಕೊಳ್ಳಲು ನಿರ್ಧರಿಸಿರುವ ರೀನಾ ನವೆಂಬರ್ 22 ಶನಿವಾರ, ಸಂಜೆ 5 ಗಂಟೆಗೆ ಬೆಂಗಳೂರು ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ ಸಮಾರಂಭ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಮುಕ್ತ ಅವಕಾಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕು ಎಂದು ರೀನಾ ಮನವಿ ಮಾಡಿದ್ದಾರೆ.[ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ]

reena

ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಅಪ್ ಡೇಟ್ ಮಾಡಲಾಗಿದೆ. ಫೇಸ್ ಬುಕ್ ಪೇಜ್ ವೊಂದನ್ನು ತೆರೆಯಲಾಗಿದ್ದು ನಾಗರಿಕರು ಲೈಕ್ ಮಾಡುವ ಮೂಲಕವೂ ತಮ್ಮ ಬೆಂಬಲ ವ್ಯಕ್ತಪಡಿಸಬಹುದು.

ಬೇರೆಯವರ ಹೃದಯ ದಾನ ಪಡೆದ ರೀನಾ ರಾಜು ಸ್ವತಃ ಸಂಸ್ಥೆಯೊಂದನ್ನು ಹುಟ್ಟುಹಾಕಿ ಬಡ ರೋಗಿಗಳಿಗೆ ಪ್ರತಿ ತಿಂಗಳು ಉಚಿತ ಔಷಧಿಗಳನ್ನು ವಿತರಿಸುತ್ತ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ. ಇವರ ಸಾಧನೆಗೆ ಪುಟ್ಟ ತಂಡವೊಂದು ಹೆಗಲಾಗಿ ನಿಂತಿದೆ. ಈಗ ಸಂಸ್ಥೆ ಐದನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು ಸಹೃದಯಿಗಳ ಇನ್ನಷ್ಟು ಸಹಕಾರ ಅಗತ್ಯವಿದೆ.

English summary
Heart transplant lady of Karnataka, Reena Raju's Foundation celebrating 5 years of social service days. The Programme will held on 22 November, 5 pm in Shantinagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X