ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೂ ಕಾಲಿಟ್ಟಿತೆ ರಕ್ತ ಚಂದನ ಕಳ್ಳ ಸಾಗಣೆ?

|
Google Oneindia Kannada News

ಬೆಂಗಳೂರು, ಮೇ. 7 : ಬೆಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಅಪರೂಪದ ರಕ್ತ ಚಂದನ ಅಕ್ರಮ ಸಂಗ್ರಹದಲ್ಲಿ ತೊಡಗಿದ್ದವರನ್ನು ಬಂಧಿಸಿ 30 ಲಕ್ಷ ಮೌಲ್ಯದ ಒಂದು ಟನ್​​​ ರಕ್ತ ಚಂದನ ವಶಪಡಿಸಿಕೊಂಡಿದ್ದಾರೆ.

ಆರೋಪಿ ಬ್ಯಾಟರಾಯನಪುರದ ವರುಣ್​ಕುಮಾರ್​ (32) ಎಂಬಾತನನ್ನು ಬಂಧಿಸಿ ತಲೆ ಮರೆಸಿಕೊಂಡಿರುವ ರಮೇಶ್ ಎಂಬುವನಿಗೆ ಬಲೆ ಬೀಸಿದ್ದಾರೆ. ಬ್ಯಾಟರಾಯನಪುರ ಗೋದಾಮಿನಲ್ಲಿ ರಕ್ತ ಚಂದನದ ತುಂಡುಗಳನ್ನು ಸಂಗ್ರಹ ಮಾಡಿದ್ದರು. ಕಳೆದ ವರ್ಷ ಸಹ ಇಂಥದ್ದೇ ಪ್ರಕರಣ ನಡೆದಿದ್ದು ಕರ್ನಾಟಕದಿಂದ ತಮಿಳುನಾಡಿಗೆ ರಕ್ತ ಚಂದನದ ತುಂಡುಗಳು ರವಾನೆಯಾಗುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿಯಿತ್ತು.[ಆಂಧ್ರ -ತಮಿಳುನಾಡು ಸಂಬಂಧಕ್ಕೆ ಬೆಂಕಿ ಹಚ್ಚಿದ ರಕ್ತ ಚಂದನ]

crime

ಖದೀಮರ ಡಬಲ್ ಬಿಸಿನಸ್
ಅಲ್ಪ ಪ್ರಮಾಣದ ತುಪ್ಪಕ್ಕೆ ಕಳಪೆ ಗುಣಮಟ್ಟದ ಡಾಲ್ಡಾ ಬೆರೆಸಿ ಜನರಿಗೆ ಶುದ್ಧ ತುಪ್ಪ ಎಂದು ತಿನ್ನಿಸಿದ್ದರು. ಅಂಜಲಿ ತುಪ್ಪ, ಕೃಷ್ಣ ತುಪ್ಪ ಎಂಬ ಹೆಸರಿನ ಲೇಬಲ್ ಅಂಟಿಸಿ ಜನರ ಆರೋಗ್ಯ ಏರುಪೇರಾಗಲು ಕಾರಣವಾಗಿದ್ದರು. ಬಂಧಿತರಿಂದ ಒಂದು ಲಕ್ಷ ರೂ. ಮೌಲ್ಯದ ಕಲಬೆರಿಕೆ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಅರಣ್ಯ ಹಕ್ಕು ಕಾಯ್ದೆ ಮತ್ತು ಆಹಾರ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.[ರಕ್ತ ಚಂದನ ಮಾಫಿಯ ಜೊತೆ ನಟಿ ನಂಟು, ನಾಪತ್ತೆ!]

ಇದೇ ರಕ್ತ ಚಂದನ ಕಳ್ಳ ಸಾಗಣೆ ಆಂಧ್ರದಲ್ಲಿ 20 ಚೋರರ ಏನ್ ಕೌಂಟರ್ ಗೆ ಕಾರಣವಾಗಿತ್ತು. ಅಲ್ಲದೇ ಇದೇ ಪ್ರಕರಣ ಆಂಧ್ರ ಮತ್ತು ತಮಿಳುನಾಡು ಸಂಬಂಧದ ಮೇಲೆ ಬರೆ ಎಳೆದಿತ್ತು.

English summary
The Bengaluru City Crime Branch (CCB) police nabbed a red sanders smuggler and seized a huge amount of red sanders in the city. Acting on a tip off, the CCB police raided a house near Karnataka Bank -- behind Satellite bus stop -- in Byatarayanapura . They arrested a person named Varun Kumar and another person, who is said to be the mastermind, is absconding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X