ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಗೆ ಮೇ 30 ರವರೆಗೂ ಅವಕಾಶ

|
Google Oneindia Kannada News

ಬೆಂಗಳೂರು, ಮೇ. 2: ಅನಿವಾರ್ಯ ಕಾರಣಗಳಿಂದ ಆಸ್ತಿ ತೆರಿಗೆ ಪಾವತಿ ಸಾಧ್ಯವಾಗಿಲ್ಲವೇ? ಚಿಂತೆ ಮಾಡಬೇಡಿ, ಸರ್ಕಾರದ ಅನುಮೋದನೆಯೊಂದಿಗೆ ಶೇ. 5 ರಿಯಾಯಿತಿಯಲ್ಲಿ ಮೇ. 30 ರವರೆಗೆ ಪಾವತಿ ಮಾಡಲು ಅವಕಾಶವಿದೆ.

2015-16 ಸಾಲಿನ ಬಿಬಿಎಂಪಿ ಆಸ್ತಿ ತೆರಿಗೆಯನ್ನು ಶೇ.5ರಷ್ಟು ರಿಯಾಯಿತಿಯೊಂದಿಗೆ ಪಾವತಿಸಲು ಏ.30 ಕೊನೆ ದಿನಾಂಕವಾಗಿತ್ತು. ಆದರೆ ಈಗ ಅದನ್ನು ಮೇ 30 ರವೆಗೆ ವಿಸ್ತರಣೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಟಿ.ಎಂ.ವಿಜಯ್ ಭಾಸ್ಕರ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. [ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಆನ್ ಲೈನ್ ನಲ್ಲಿ ಹೇಗೆ?]

bbmp

ಏ.29ರಂದು ಒಂದೇ ದಿನ 59,843 ಆಸ್ತಿ ಮಾಲಿಕರು ಒಟ್ಟು 96.85 ಕೋಟಿ ರೂ.ಆಸ್ತಿ ತೆರಿಗೆ ಪಾವತಿಸಿದ್ದಾರೆ. ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಚೇರಿಯಲ್ಲಿ 33,376, ನಾಗರಿಕ ಸೇವಾ ಕೇಂದ್ರ- 930, ಆನ್‌ಲೈನ್‌ ಮೂಲಕ 20,019, ಬೆಂಗಳೂರು ಒನ್‌ನಲ್ಲಿ 4,996, ಬ್ಯಾಂಕ್‌ ಮೂಲಕ 522 ಮಂದಿ ತೆರಿಗೆ ಪಾವತಿಸಿದ್ದಾರೆ.ಈ ಬಾರಿ 2,900 ಕೋಟಿ ರೂ.ಆಸ್ತಿ ತೆರಿಗೆ ಸಂಗ್ರಹಣೆ ಗುರಿ ಹೊಂದಿದ್ದ ಬಿಬಿಎಂಪಿ ಏಪ್ರಿಲ್‌ ಒಂದೇ ತಿಂಗಳಲ್ಲಿ 631 ಕೋಟಿ ರೂ.ಆಸ್ತಿ ತೆರಿಗೆ ಸಂಗ್ರಹಿಸಿದೆ.[ಸೇವಾ ತೆರಿಗೆ ಹೆಚ್ಚಿಗೆ ಕೇಳಿದರೆ ದೂರು ಕೊಡಿ]

ನೀವು ಇನ್ನು ಆಸ್ತಿ ತೆರಿಗೆ ಪಾವತಿ ಮಾಡಿಲ್ಲವೇ? ಹಾಗಾದರೆ ಕೂಡಲೇ ಇಂದೇ ಪಾವತಿ ಮಾಡಿ ದಂಡದ ಬದಲು ರಿಯಾಯಿತಿ ಪಡೆದುಕೊಳ್ಳಿ. ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿ ಬಿಬಿಎಂಪಿ ಕೆಲ ನಿರ್ದೇಶನಗಳನ್ನು ನೀಡಿದೆ. ಆಸ್ತಿ ತೆರಿಗೆ ಪಾವತಿಸಲು ಸಾರ್ವಜನಿಕರಿಗೆ ಸಹ ಕಂದಾಯ ಅಧಿಕಾರಿಗಳ ಕಚೇರಿ, ನಾಗರಿಕ ಸೇವಾಕೇಂದ್ರ, ಬೆಂಗಳೂರು ಒನ್‌, ನಿಗದಿತ ಬ್ಯಾಂಕ್‌ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಇಂಟರ್‌ನೆಟ್‌ ಮೂಲಕ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಬಳಸಿ ಪಾವತಿ ಮಾಡಬಹುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

English summary
The Bruhat Bangalore Mahanagara Palike (BBMP) will offer 5 per cent rebate on property tax till May 30. The earlier deadline to pay property tax was April 30. According to a press release, the number of people paying property tax online had seen a huge increase. While 1.56 lakh people paid their property tax online last year, this year, 2.17 lakh people paid their taxes online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X