ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯನ್ನು ಕುಟುಕಿದ ರಮ್ಯಾ

ಕಾಂಗ್ರೆಸ್ ನಾಯಕಿ ರಮ್ಯಾ ಅವರು ನರೇಂದ್ರ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಚೀನಾದ ಅಧ್ಯಕ್ಷ ಜಿನ್ ಪಿಂಗ್ ಅವರನ್ನು ಇತ್ತೀಚೆಗೆ ಭೇಟಿಯಾದರೂ ಗಡಿ ವಿವಾದ ಮಾತಾಡಿಲ್ಲ ಎಂಬುದು ಅವರ ಟೀಕೆ.

|
Google Oneindia Kannada News

ಬೆಂಗಳೂರು, ಜುಲೈ 10: ಮೋಹಕ ನಟಿ ಹಾಗೂ ಕಾಂಗ್ರೆಸ್ ನ ಮಾಜಿ ಸಂಸದೆ ರಮ್ಯಾ, ಪ್ರಧಾನಿ ಮೋದಿಯವರತ್ತ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಪಿಎಂ ಮೋದಿ ವಿದೇಶ ಪ್ರವಾಸ: ರಮ್ಯಾ ನೀಡಿದ್ದ ಹೇಳಿಕೆ ಸುಳ್ಳೇ..ಸುಳ್ಳುಪಿಎಂ ಮೋದಿ ವಿದೇಶ ಪ್ರವಾಸ: ರಮ್ಯಾ ನೀಡಿದ್ದ ಹೇಳಿಕೆ ಸುಳ್ಳೇ..ಸುಳ್ಳು

ಪ್ರಧಾನಿ ಮೋದಿಯವರು ಚೀನಾದ ಅಧ್ಯಕ್ಷರಾದ ಜಿನ್ ಪಿಂಗ್ ಅವರನ್ನು ಜರ್ಮನಿಯಲ್ಲಿ ಇತ್ತೀಚೆಗೆ ನಡೆದ ಜಿ-20 ಶೃಂಗಸಭೆಯಲ್ಲಿ ಭೇಟಿಯಾದಾಗ ಗಡಿಯಲ್ಲಿ ಎರಡೂ ದೇಶಗಳ ಮಧ್ಯೆ ಎದ್ದಿರುವ ತಕರಾರಿನ ಬಗ್ಗೆ ಮಾತಾಡಿಲ್ಲ. ಇದು ಮೋದಿಯವರು ಮಾಡಿದ ತಪ್ಪು ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.

Ramya criticises PM Modi for not discussing border issue with Jin Ping

ಕಳೆದೆರಡು ವಾರಗಳಿಂದ ಚೀನಾ-ಭಾರತದ ನಡುವೆ ಸಮರದ ಕಾರ್ಮೋಡ ಕವಿದಿದೆ. ಸಿಕ್ಕಿಂ ಗಡಿಯಲ್ಲಿ ಚೀನಾ ಸರ್ಕಾರ ತನ್ನ ಮಿಲಿಟರಿ ನಿಲ್ಲಿಸಿ ಕಾಲು ಕೆದರಿ ಜಗಳ ಕಾಯಲು ಸಿದ್ಧವಾಗಿದೆ. ಇದಕ್ಕೆ ಭಾರತೀಯ ಸೇನೆಯೂ ಸಡ್ಡು ಹೊಡೆದು ನಿಂತಿದೆ.

ಓದುಗರು ಕೇಳಿರುವ ಪ್ರಶ್ನೆಗಳಿಗೆ ರಮ್ಯಾ ಉತ್ತರಿಸುವರೆ? ಓದುಗರು ಕೇಳಿರುವ ಪ್ರಶ್ನೆಗಳಿಗೆ ರಮ್ಯಾ ಉತ್ತರಿಸುವರೆ?

ಇಂಥ ಪರಿಸ್ಥಿತಿಯಿದ್ದರೂ, ಉಭಯ ನಾಯಕರು ಪರಸ್ಪರ ಭೇಟಿಯಾಗುವ ಅವಕಾಶದಲ್ಲಿ ಮೋದಿಯವರು ಗಡಿಯಲ್ಲಿನ ಗಂಭೀರ ವಿಚಾರವನ್ನು ಚರ್ಚಿಸಿಯೇ ಇಲ್ಲ ಎಂದು ಟೀಕಿಸಿದ್ದಾರೆ.

English summary
Congress's former MP Ramya criticized Prime Minister Narendra Modi for not rising the issued while he had met the China President Jin Ping on the sidelines of G-20 summit recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X