ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವದಾಖಲೆಯ ರಕ್ಷಾ ಬಂಧನ: 5 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

|
Google Oneindia Kannada News

ಬೆಂಗಳೂರು, ಆಗಸ್ಟ್ 18: ಶ್ರಾವಣದ ಪೌರ್ಣಮಿ, ಚಾತುರ್ಮಾಸ ಜತೆಗೆ ರಕ್ಷಾ ಬಂಧನದ ಸಡಗರ ಅಲ್ಲಿ ನೂರಾರು ಜನರನ್ನು ಸೇರುವಂತೆ ಮಾಡಿತ್ತು. ಅಂತಃಕರಣ, ಪ್ರೀತಿ, ಭಕ್ತಿಯ ಸಂಗಮವಾಗಿದ್ದ ವೇದಿಕೆಗೆ ಸ್ಥಳ ಒದಗಿಸಿದ್ದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ.[ಬೆಂಗಳೂರಿನಲ್ಲಿ ವಿಶ್ವದಾಖಲೆ ಸೇರಲಿದೆ ರಕ್ಷಾ ಬಂಧನ]

ಪ್ರಸನ್ನ ಸಾಗರಜೀ ಮಹಾರಾಜ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ರಾಖಿ ಹಬ್ಬ ವಿಶ್ವ ದಾಖಲೆಯಾಯಿತು. ಪಿಯೂಷ ಸಾಗರಜೀ ಮಹಾರಾಜರ ಮಾರ್ಗದರ್ಶನ ಕಾರ್ಯಕ್ರಮಕ್ಕಿತ್ತು. ತ್ಯಾಗಿ ಸೇವಾ ಸ್ಮಿತಿ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು.[ಪ್ರೀತಿಯ ಸೋದರನಿಗೆ ರಾಖಿಯ ಉಡುಗೊರೆ]

ಪ್ರಸನ್ನ ಸಾಗರಜೀ ಮಹಾರಾಜ್, ಪಿಯೂಷ ಸಾಗರಜೀ ಮಹಾರಾಜ್, ಪರ್ವಸಾಗರ್ ಜೀ ಮಹಾರಾಜ್ ಸೇರಿ ವಿ.ವಿ.ಪುರಂ ಮಹಾವೀರ ಧರ್ಮಶಾಲಾದಿಂದ ಆರಂಭಗೊಂಡ 'ಅಹಿಂಸಾ ಸಂಸ್ಕಾರ ಪಾದಯಾತ್ರೆ'ಗೆ ಚಾಲನೆ ನೀಡಿದರು.

ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕ ಜಿತೇಂದ್ರ ಕುಮಾರ್ ಜೈನ್

ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕ ಜಿತೇಂದ್ರ ಕುಮಾರ್ ಜೈನ್

ತ್ಯಾಗಿ ಸೇವಾ ಸಮಿತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದಾಜು 20 ಲಕ್ಷ ರುಪಾಯಿ ಇದಕ್ಕೆ ಖರ್ಚಾಗಿರಬಹುದು. ದಾನಿಗಳು ಧನಸಹಾಯ ಮಾಡಿದ್ದಾರೆ. ಈ ರಕ್ಷಾ ಬಂಧನ ಕಾರ್ಯಕ್ರಮ ದಾಖಲೆಯಾಗಿದೆ.

ರಾಖಿ ಕಟ್ಟಿದ ಸಂಭ್ರಮ

ರಾಖಿ ಕಟ್ಟಿದ ಸಂಭ್ರಮ

ಮೊದಲ ಸುತ್ತಿನಲ್ಲಿ 500ಕ್ಕೂ ಹೆಚ್ಚು ಯುವತಿಯರು ತಮ್ಮ ಒಡಹುಟ್ಟಿದ ಅಣ್ಣಂದಿರಿಗೆ, . ಎರಡನೇ ಸುತ್ತಿನಲ್ಲಿ 500ಕ್ಕೂ ಹೆಚ್ಚು ಅಣ್ಣಂದಿರು ತಮ್ಮ ತಂಗಿಯರಿಗೆ, ಮೂರನೇ ಸುತ್ತಿನಲ್ಲಿ 400ಕ್ಕೂ ಹೆಚ್ಚು ಹೆಣ್ಣುಮಕ್ಕಳು ತಮ್ಮ ಸೋದರಿಯರಿಗೆ ರಾಖಿ ಕಟ್ಟಿದರು.

ಜತಿನ್ ಜೈನ್-ರುತಿಕಾ ಜೈನ್

ಜತಿನ್ ಜೈನ್-ರುತಿಕಾ ಜೈನ್

ಮಧ್ಯಾಹ್ನ 12.30ಕ್ಕೆ ಇಲ್ಲಿಗೆ ಬಂದಿವಿ. ಅದ್ಭುತವಾಗಿ ಈ ಕಾರ್ಯಕ್ರಮ ಆಗಿದೆ. ನಾವು ಇಷ್ಟು ಜನ ಇಲ್ಲಿ ಸೇರಿರುವುದೇ ಮತ್ತಷ್ಟು ಖುಷಿಗೆ ಕಾರಣ.

ಪುಟಾಣಿಗಳ ಸಂಭ್ರಮ

ಪುಟಾಣಿಗಳ ಸಂಭ್ರಮ

ರಾಖಿ ಹಬ್ಬದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದ ದರ್ಶನಾ ಬಾಫ್ನಾ-ಗೌರವ್ ಬಾಫ್ನಾ.

ಮೂರು ತಲೆಮಾರು

ಮೂರು ತಲೆಮಾರು

ರಾಖಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಒಂದೇ ಕುಟುಂಬಕ್ಕೆ ಸೇರಿದ ಮೂರು ತಲೆಮಾರಿನವರ ಸಂಭ್ರಮ.

English summary
Raksha Bandhan mahotsav in Bengaluru at Basavanagudi National College ground, organised by tyagi seva samiti in Bengaluru got place in world record. With the divine presence of Prasanna Sagarji Maharaj and others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X