ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಹವಾಮಾನ ಇಲಾಖೆಯಿಂದ ಬಂದ ತಂಪಾದ ಸುದ್ದಿ!

ಸುಡುಬಿಸಿಲಿನ ತಾಪಕ್ಕೆ ಬಳಲಿರುವ ಚೆನ್ನೈ, ಬೆಂಗಳೂರಿಗೆ ಮಾರ್ಚ್ ಮೊದಲ ವಾರದಲ್ಲಿ ಮಳೆರಾಯನ ಆಗಮನವಾಗಲಿದೆ ಎಂಬ ತಂಪಾದ ಸುದ್ದಿಯನ್ನು ಹವಾಮಾನ ಇಲಾಖೆ ನೀಡಿದೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಸುಡುಬಿಸಿಲಿನ ತಾಪಕ್ಕೆ ಬಳಲಿರುವ ಚೆನ್ನೈ, ಬೆಂಗಳೂರಿಗೆ ಮಾರ್ಚ್ ಮೊದಲ ವಾರದಲ್ಲಿ ಮಳೆರಾಯನ ಆಗಮನವಾಗಲಿದೆ ಎಂಬ ತಂಪಾದ ಸುದ್ದಿಯನ್ನು ಹವಾಮಾನ ಇಲಾಖೆ ನೀಡಿದೆ.

ಫೆಬ್ರವರಿಯಲ್ಲಿ ಅತ್ಯಧಿಕ ಬಿಸಿಲಿನ ತಾಪ ಅನುಭವಿಸಿದ ಈ ಎರಡು ನಗರಗಳಿಗೆ ಮಾರ್ಚ್ ಮೊದಲ ಮೊದಲ ವಾರದಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ. 28 ಡಿಗ್ರಿ ಸೆಲ್ಸಿಯಸ್ ನಿಂದ 35.5 ಡಿಗ್ರಿ ಸೆಲ್ಸಿಯಸ್ ಸರಾಸರಿಯಲ್ಲಿದ್ದ ತಾಪಮಾನ ಕೊಂಚ ತಗ್ಗಲಿದೆ.[ಎಚ್ಚರಾ! ಬೆಂಗಳೂರಿನಲ್ಲಿ ಬಿಸಿಗಾಳಿ ಚುರುಗುಟ್ಟಲಿದೆ]

Rains expected in Bengaluru and Chennai in March first week

ಮಾರ್ಚ್ 4 ರಿಂದ 7 ರ ತನಕ ಮಳೆ ನಿರೀಕ್ಷಿಸಬಹುದು ನಾರ್ವೆಯ ಹವಾಮಾನ ಮುನ್ಸೂಚನೆ ನೀಡುವ ತಾಣ yr.no ಪ್ರಕಟಿಸಿದೆ. ಭಾರತದ ಹವಾಮಾನ ಇಲಾಖೆ ಐಎಂಡಿ ಕೂಡಾ ಮಾರ್ಚ್ 3 ರ ತನಕ ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಮಳೆಯಾಗುವ ಸಾಧ್ಯತೆ ಬಗ್ಗೆ ಹೇಳಿದೆ.

ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ ಇದ್ದರೂ ಉತ್ತರ ಕರ್ನಾಟಕದ ಜನರಿಗೆ ಮಳೆ ಭಾಗ್ಯ ಸದ್ಯಕ್ಕೆ ಇಲ್ಲ.ಉತ್ತರ ಒಳನಾಡು, ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಎಲ್ಲಡೆ ಉಷ್ಣಾಂಶ ಇನ್ನಷ್ಟು ಏರಿಕೆಯಾಗಲಿದೆ.

ಏಪ್ರಿಲ್​ನಲ್ಲಿ ಸಾಮಾನ್ಯವಾಗಿ ಬೆಂಗಳೂರಿನ ಉಷ್ಣಾಂಶ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಇರುತ್ತದೆ. 1931ರಲ್ಲಿ 38.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಆದರೆ, ಹವಾಮಾನ ಇಲಾಖೆ ಮಾಹಿತಿಯಂತೆ ಏಪ್ರಿಲ್ 24, 2016 ರಂದು ಬೆಂಗಳೂರಿನಲ್ಲಿ 39.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿ ಹೊಸ ಆತಂಕ ಮೂಡಿತು. ಆದರೆ, ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ

English summary
The blazing sun has already started giving nightmares of the summer to come this year. With temperatures soaring to 28 degrees and 31 degrees in Chennai and Bengaluru respectively, it may come as some respite that rains are expected in both cities during the first week of March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X