ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ಹೋಗಿ

|
Google Oneindia Kannada News

ಬೆಂಗಳೂರು, ನ. 19 : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನು ಮುಂದೆ ಜನರು ರೈಲಿನಲ್ಲಿ ಪ್ರಯಾಣಿಸಬಹುದು. ಹೌದು, ಕೆಐಎಎಲ್‌ ಬಳಿ ಶೀಘ್ರದಲ್ಲಿ ರೈಲು ನಿಲ್ದಾಣ ಸ್ಥಾಪನೆಯಾಗಲಿದ್ದು, ಇದಕ್ಕೆ ಅಗತ್ಯವಿರುವ ಜಮೀನನ್ನು ರೈಲ್ವೆ ಇಲಾಖೆಗೆ ನೀಡಲು ವಿಮಾನ ನಿಲ್ದಾಣ ಒಪ್ಪಿಗೆ ನೀಡಿದೆ.

ಬೆಂಗಳೂರು ರೈಲು ನಿಲ್ದಾಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅನಿಲ್‌ ಕುಮಾರ್‌ ಅಗರ್‌ವಾಲ್‌ ಈ ಕುರಿತು ಮಾಹಿತಿ ನೀಡಿದ್ದು, ವಿಮಾನ ನಿಲ್ದಾಣದ ಬಳಿ ರೈಲು ನಿಲ್ದಾಣ ಸ್ಥಾಪನೆಗೆ ಮಾಡಲು ಇಲಾಖೆ ಸಿದ್ಧವಿದೆ, ಆದರೆ ಜಾಗದ ಕೊರತೆ ಇದೆ ಎಂದರು.

trains

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ನಿರ್ದೇಶಕ (ಹಣಕಾಸು) ಭಾಸ್ಕರ್‌ ಬೊಡಪಾಟಿ ಅವರು, ವಿಮಾನ ನಿಲ್ದಾಣ ಪ್ರಾಧಿಕಾರದ ಬಳಿ 4 ಸಾವಿರ ಎಕರೆ ಜಾಗವಿದ್ದು, ರೈಲ್ವೆ ಇಲಾಖೆಗೆ ನಿಲ್ದಾಣ ಸ್ಥಾಪಿಸಲು ಜಮೀನು ನೀಡುತ್ತೇವೆ ಎಂದು ಹೇಳಿದರು. [ಎಚ್ಎಎಲ್ ನಲ್ಲಿ ಮತ್ತೆ ಸಾರ್ವಜನಿಕ ವಿಮಾನಯಾನ?]

ವಿಮಾನ ನಿಲ್ದಾಣದ ಸಿಬ್ಬಂದಿ ಸೇರಿದಂತೆ ನಿತ್ಯ ಸಾವಿರಾರು ಪ್ರಯಾಣಿಕರು ಏರ್‌ಪೋರ್ಟ್‌ಗೆ ಬರಲು ಬಸ್, ಕ್ಯಾಬ್ ಮುಂತಾದ ಸೇವೆಗಳನ್ನು ಅವಲಂಬಿಸಿದ್ದಾರೆ. ರೈಲು ನಿಲ್ದಾಣ ಸ್ಥಾಪನೆಯಾದರೆ ಅವರಿಗೆ ಅನುಕೂಲವಾಗಲಿದೆ ಎಂದು ಭಾಸ್ಕರ್ ತಿಳಿಸಿದರು.

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮೂರು ಕಿ.ಮೀ.ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಬಳಿಯಲ್ಲಿ ರೈಲ್ವೆ ಇಲಾಖೆಗೆ ನಿಲ್ದಾಣ ನಿರ್ಮಿಸಲು ಜಾಗ ನೀಡುತ್ತೇವೆ. 50 ಲಕ್ಷ ವೆಚ್ಚದಲ್ಲಿ ಇಲ್ಲಿ ನಿಲ್ದಾಣ ನಿರ್ಮಿಸಬಹುದಾಗಿದೆ ಎಂದರು.

English summary
South Western Railways (SWR) was ready to provide a stop at Kempegowda International Airport (KIA) for trains on the route said Divisional Railway Manager Anil Kumar Agarwal. Kempegowda International Airport will provide land for railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X