ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಒಬ್ಬರಿಂದ ಬದಲಾವಣೆ ಸಾಧ್ಯವಿಲ್ಲ: ರಾಹುಲ್ ಗಾಂಧಿ

By Mahesh
|
Google Oneindia Kannada News

ಬೆಂಗಳೂರು, ನ.25: ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಬುಧವಾರ ಮಧ್ಯಾಹ್ನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಒಬ್ಬ ವ್ಯಕ್ತಿಯಿಂದ ಭಾರತದ ಬದಲಾವಣೆ ಸಾಧ್ಯವಿಲ್ಲ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಅರಿವಿರಲಿ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸಚಿವೆ ಉಮಾಶ್ರೀ ಅವರು ಸ್ವಾಗತಿಸಿದರು.

ವಿಮಾನ ನಿಲ್ದಾಣದಿಂದ ನೇರವಾಗಿ ನಗರದ ಕುಮಾರಕೃಪಾಗೆ ತೆರಳಿ ವಿಶ್ರಾಂತಿ ಪಡೆದ ಬಳಿಕ ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಲು ಬಂದರು. [ಅಂಗೈ ತೋರಿಸಿ ಅವಲಕ್ಷಣ ಎನ್ನಿಸಿಕೊಂಡ ರಾಹುಲ್!]

ಅದರೆ, ಸುಮಾರು 50 ನಿಮಿಷಗಳ ಕಾಲ ಸಂವಾದ ನಡೆಸಲಾಯಿತು. ವಿಕಿಪೀಡಿಯ ಓದಿಕೊಂಡು ಇಲ್ಲಿಗೆ ಬಂದೆ. ದೇಶದ ಸಮಸ್ಯೆಗಳ ಬಗ್ಗೆ ನಿಮ್ಮ ನಿಲುವೇನು? ಸರ್ಕಾರದ ಯೋಜನೆಗಳು ಯಶಸ್ವಿಯಾಗಿವೆಯೇ? ಎಂದು ಪ್ರಶ್ನಿಸಿದ ರಾಹುಲ್ ಅವರು ಕನ್ ಫ್ಯೂಷನ್ ಮೋಡ್ ನಲ್ಲಿದ್ದಂತೆ ತೋರಿತು.

ಈ ಸಮಾಲೋಚನೆಯಲ್ಲಿ ಕೇಂದ್ರದ ಮಾಜಿ ಸಚಿವ ದಿಗ್ವಿಜಯ್ ಸಿಂಗ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಉಪಸ್ಥಿತರಿದ್ದರು.

ರಾಹುಲ್ ಸಂವಾದದಲ್ಲಿ ಹೆಚ್ಚಿನ ಪಾಲು ಮೋದಿ ಸರ್ಕಾರದ ಯೋಜನೆಗಳ ಕುರಿತಂತೆ ಪ್ರಶ್ನೆಗಳಿತ್ತು. ಮೋದಿ ಏಕವ್ಯಕ್ತಿ ಸರ್ಕಾರ ನಡೆಸುತ್ತಿದ್ದಾರೆ. ಒಬ್ಬ ವ್ಯಕ್ತಿಯಿಂದ ಭಾರತದ ಬದಲಾವಣೆ ಸಾಧ್ಯವಿಲ್ಲ. ಸೂಟು ಬೂಟಿನ ಸರ್ಕಾರ ಪತನವಾಗಲಿದೆ ಎಂದು ರಾಹುಲ್ ಅವರು ಹೇಳಿದರು. ಸಂವಾದದ ಮುಖ್ಯಾಂಶಗಳು ಮುಂದಿದೆ...

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜೊತೆ ರಾಹುಲ್ ಗಾಂಧಿ ಅವರು ಸಂವಾದ ನಡೆಸಿದರು. ಈ ಕಾರ್ಯಕ್ರಮಕ್ಕೆ ಆಯ್ದ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶವಿತ್ತು. ಮೌಂಟ್ ಕಾರ್ಮೆಲ್ ಆಡಳಿತ ಮಂಡಳಿ ಕೂಡಾ ಪ್ರಶ್ನೆಗಳನ್ನು ಆಯ್ಕೆಮಾಡಿ ತಯಾರಿ ನಡೆಸಿ ಸಂವಾದಕ್ಕೆ ವಿದ್ಯಾರ್ಥಿನಿಯರನ್ನು ಕಳಿಸಿದ್ದರು.

ರಾಹುಲ್‌ಗಾಂಧಿ ಅವರನ್ನು ಸ್ವಾಗತಿಸಿದ ವಿದ್ಯಾರ್ಥಿನಿಯರು

ರಾಹುಲ್‌ಗಾಂಧಿ ಅವರನ್ನು ಸ್ವಾಗತಿಸಿದ ವಿದ್ಯಾರ್ಥಿನಿಯರು

ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದ ಕಾಲೇಜಿನ ಸ್ವಾಗತ ಸಮಿತಿಯ ವಿದ್ಯಾರ್ಥಿನಿಯರು.

ಎಂಸಿಸಿ ಆಡಿಟೋರಿಯಂನಲ್ಲಿ ರಾಹುಲ್ ಗಾಂಧಿ

ಎಂಸಿಸಿ ಆಡಿಟೋರಿಯಂನಲ್ಲಿ ರಾಹುಲ್ ಗಾಂಧಿ ಅವರ ಜೊತೆಗೆ ಡಾ. ಪರಮೇಶ್ವರ್, ದಿಗ್ವಿಜಯ್ ಸಿಂಗ್ ಮುಂತಾದ ನಾಯಕರು ಉಪಸ್ಥಿತರಿದ್ದರು.

ಕಾಲೇಜಿನ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ ರಾಹುಲ್

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ.

ಸಂವಾದ ಕಾರ್ಯಕ್ರಮಕ್ಕೆ ತೆರಳುವ ಮುನ್ನ ರಾಹುಲ್

ಸಂವಾದ ಕಾರ್ಯಕ್ರಮಕ್ಕೆ ತೆರಳುವ ಮುನ್ನ ರಾಹುಲ್ ಅವರನ್ನು ಸ್ವಾಗತಿಸಿದ ಸ್ಥಳೀಯ ನಾಯಕರು.

ವಿದ್ಯಾರ್ಥಿನಿಯರ ಜೊತೆ ರಾಹುಲ್ ಮಾತುಕತೆ

ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿಯರ ಜೊತೆ ರಾಹುಲ್ ಮಾತುಕತೆ

ಸಂವಾದದ ಮುಖ್ಯಾಂಶಗಳು

ಸಂವಾದದ ಮುಖ್ಯಾಂಶಗಳು

* ಇಲ್ಲಿಗೆ ಬರುವ ತನಕ ನಾನು ವಿಕಿಪೀಡಿಯ ನೋಡಿಕೊಂಡು ಬಂದಿದೆ. ಮೂವರು ಸಾಧಕಿಯರು ಈ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು ಎಂದು ತಿಳಿಯಿತು.
* ಕಿರಣ್ ಮುಜುಂದಾರ್ ಶಾ, ಮಾರ್ಗರೇಟ್ ಆಳ್ವಾ ಹಾಗೂ ನಿರುಪಮಾ ರಾವ್ ಅವರು ಅಲುಮ್ನಿ ಪಟ್ಟಿಯಲ್ಲಿದ್ದಾರೆ.
* ನೀವು ನಿಮ್ಮ ಜೀವನದಲ್ಲಿ ಮುಂದೆ ಬರಬೇಕಾದರೆ ನಿಮ್ಮ ಸುತ್ತಮುತ್ತಲಿನ ಜನರ ಮಾತನ್ನು ಕೇಳಬೇಕಾಗುತ್ತದೆ.

ಸರ್ಕಾರ ಮಾತುಕತೆ ನಡೆಸಲು ಸಿದ್ಧವಾಗಬೇಕಿದೆ

ಸರ್ಕಾರ ಮಾತುಕತೆ ನಡೆಸಲು ಸಿದ್ಧವಾಗಬೇಕಿದೆ

* ಪಿಎಂಒನಿಂದ ಇಡೀ ದೇಶದ ಆಡಳಿತ ನಡೆಸಬಹುದು ಎಂಬ ಭ್ರಮೆ ಸರ್ಕಾರಕ್ಕಿದೆ.
* ಸರಕು ಸಾಗಣೆ ಸೇವಾ ತೆರಿಗೆ(ಜಿಎಸ್ ಟಿ) ಜಾರಿಗೆ ತರಲು ನಮ್ಮ ಅಡ್ಡಿ ಏನಿಲ್ಲ. ಇದರ ಮೂಲ ಶ್ರೇಯಸ್ಸು ಕಾಂಗ್ರೆಸ್ಸಿಗೆ ಸಲ್ಲಬೇಕು. ಅದರೆ, ಕೆಲವು ಬದಲಾವಣೆಗಳು ಆಗಬೇಕಿದೆ. ಈ ಬಗ್ಗೆ ಸರ್ಕಾರ ಮಾತುಕತೆ ನಡೆಸಲು ಸಿದ್ಧವಾಗಬೇಕಿದೆ.

ಸ್ವಚ್ಛ ಭಾರತ ಹಾಗೂ ಮೇಕ್ ಇನ್ ಇಂಡಿಯಾ

ಸ್ವಚ್ಛ ಭಾರತ ಹಾಗೂ ಮೇಕ್ ಇನ್ ಇಂಡಿಯಾ

* ಸುಮಾರು 2 ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಮೋದಿ ಅವರು ಹೇಳಿದರು. ಅದರೆ, ಇಲ್ಲಿ ತನಕ ಯಾರಿಗೂ ಉದ್ಯೋಗ ಸಿಕ್ಕಿಲ್ಲ.

* ಸ್ವಚ್ಛ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನೀವೇನು ಹೇಳುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
* ಯುವತಿಯರು ರಾತ್ರಿ ವೇಳೆ ಓಡಾಡಲು ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ದೇಶದ ಸಮಸ್ಯೆಗಳೇ ಸಂವಾದದ ಹೈಲೈಟ್ಸ್

ದೇಶದ ಸಮಸ್ಯೆಗಳೇ ಸಂವಾದದ ಹೈಲೈಟ್ಸ್

* ಬಿಹಾರದಲ್ಲಿ ನಿತೀಶ್ ಅವರು ನಿಷ್ಠಾವಂತರಾಗಿದ್ದಾರೆ. ಅದಕ್ಕೆ ಬೆಂಬಲಿಸಿದೆವು. ಲಾಲೂ ಅವರು ಸರ್ಕಾರದ ಭಾಗವಾಗಿಲ್ಲ.
* ಕಾಂಗ್ರೆಸ್ ಸಾರ್ವಜನಿಕರಿಗಾಗಿ ಕೊಟ್ಟ ಅಸ್ತ್ರ ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಸಮರ್ಥವಾಗಿ ಬಳಕೆಯಾಗಬೇಕಿದೆ.
* ಈಶಾನ್ಯ ರಾಜ್ಯಕ್ಕೆ ಕಾಂಗ್ರೆಸ್ ನೀಡಿದ್ದ ವಿಶೇಷ ಸ್ಥಾನಮಾನವನ್ನು ಬಿಜೆಪಿ ಕಿತ್ತು ಹಾಕಿದೆ.

English summary
Rahul Gandhi in Bengaluru Targets PM while having interactive session with Mount Carmel College Student .The belief of "live and let live" is country's biggest strength and only way to live peacefully is to have a dialogue: Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X