ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೇವಕತ್ವದ ಆಳಕ್ಕಿಳಿದರೆ ವ್ಯಕ್ತಿಯ ವ್ಯಕ್ತಿತ್ವ ಆಗಸದೆತ್ತರಕ್ಕೆ ಏರುತ್ತೆ

By Balaraj
|
Google Oneindia Kannada News

ಬೆಂಗಳೂರು, ಆಗಸ್ಟ್ 9: ಬಾಗಿದವನು ಭಗವಂತನಾಗುವನು ಎಂಬುದು ಹನುಮಂತ ಕೊಟ್ಟ ಸಂದೇಶ. ಸೇವಕತ್ವದ ಆಳಕ್ಕೆ ಇಳಿದರೆ, ವ್ಯಕ್ತಿಯ ವ್ಯಕ್ತಿತ್ವ ಆಗಸದೆತ್ತರಕ್ಕೆ ಏರುತ್ತದೆ ಎಂಬುದನ್ನು ಹನುಮಂತ ಮಾಡಿ ತೋರಿಸಿದ್ದಾನೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.

ಗಿರಿನಗರದ ಶಾಖಾ ಮಠದಲ್ಲಿ ಮಂಗಳವಾರ (ಆ 9) ಗೋಚಾತುರ್ಮಾಸ್ಯದ 22ನೇ ದಿನದ ಗೋ ಸಂದೇಶ ಸಭೆಯಲ್ಲಿ ಮಾತನಾಡುತ್ತಿದ್ದ ಶ್ರೀಗಳು, ಮನುಷ್ಯ ಸಂತತಿ ಇಲ್ಲವಾದರೆ ಇಡೀ ಸೃಷ್ಟಿಯೇ ಸಂತಸಪಡಬಹುದು. (ಮನುಷ್ಯ ಕೃತಘ್ನನಾಗಬಾರದು)

ಯಾಕೆಂದರೆ ಮನುಷ್ಯ ಇಡೀ ಸೃಷ್ಟಿಗೆ ಕಂಟಕ ಪ್ರಾಯನಾಗಿದ್ದಾನೆ. ಆದರೆ ಗೋವಿಲ್ಲದಿದ್ದರೆ ಇಡೀ ಸೃಷ್ಟಿಯೇ ಸಂಕಟಪಡಬಹುದು. ಗೋವು ಇಲ್ಲವಾದರೆ ಪ್ರಪಂಚವೇ ಇಲ್ಲ ಎಂದು ರಾಘವೇಶ್ವರ ಶ್ರೀಗಳು ನುಡಿದರು.

Raghaveshwara Seer 22nd day Gochaturmasa speech in Bengaluru

ಇಂದು ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭವಾದ ದಿನ. ಬಿಳಿಯರು ತೊಲಗಿದರು, ಆದರೆ ನಮ್ಮಲ್ಲಿನ ಬಿಳಿ(ಪಾಶ್ಚಾತ್ಯ ಮನೋಭಾವನೆ) ಇನ್ನೂ ಹಾಗೆಯೇ ಇದೆ. ಹಾಗಾಗಿ ನಾವು ಇಂದು ನಮ್ಮಲ್ಲಿನ ಬಿಳಿ (ಆಂಗ್ಲತ್ವ) ಭಾರತ ಬಿಟ್ಟು ತೊಲಗಲಿ ಎಂದು ಸಂಕಲ್ಪ ಮಾಡೋಣ ಎಂದು ರಾಘವೇಶ್ವರ ಶ್ರೀಗಳು ಸಂದೇಶ ನೀಡಿದ್ದಾರೆ.

ರಾಯಚೂರು ಮಾನ್ವಿಯ ಮುಕ್ತಾಗುಚ್ಛ ಬೃಹನ್ಮಠ ಕಲ್ಮಠದ ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ತಾಯಿಯನ್ನು ರಕ್ಷಿಸುವ ಪರಿಸ್ಥಿತಿಗೆ ಯಾಕೆ ಬಂದಿದ್ದೇವೆ ಎಂದರೆ ಅದಕ್ಕೆ ಸಂಸ್ಕಾರದ ಕೊರತೆಯೇ ಕಾರಣ.

ಕಲ್ಲಿಗೆ ಸಂಸ್ಕಾರ ಕೊಟ್ಟರೆ ದೇವರ ಮೂರ್ತಿ ಆಗುತ್ತದೆ, ಚಿನ್ನಕ್ಕೆ ಸಂಸ್ಕಾರ ಕೊಟ್ಟರೆ ಒಡವೆ ಆಗುತ್ತದೆ, ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಸಂಸ್ಕಾರ ಕೊಟ್ಟರೆ ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದು ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ಬದುಕು ತುಂಬಾ ಚಿಕ್ಕದು, ಕೆಡುಕು ಮಾಡುವವರ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು ಕೆಡುಕಿಗಿಂತ ಹತ್ತು ಪಟ್ಟು ಹೆಚ್ಚು ಒಳಿತು ಮಾಡಬೇಕು. ರಾಘವೇಶ್ವರ ಶ್ರೀಗಳ ಸ್ಪೂರ್ತಿಯಿಂದ ರಾಯಚೂರು ಜಿಲ್ಲೆಯಲ್ಲಿ 'ಮನೆಗೊಂದು ಗೋವು' ಎಂಬ ಅಭಿಯಾನವನ್ನು ಆರಂಭಿಸಿ ಗೋರಕ್ಷಣಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. (ಭಾರತ ಗೋಮೂತ್ರ ರಫ್ತು ಮಾಡಲಿ)

ಗೋಚಾತುರ್ಮಾಸ್ಯದ 22ನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆ ಸಿರಗುಪ್ಪ ಶ್ರೀಕೃಷ್ಣ ನಗರದ ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಉಪಸ್ಥಿತರಿದ್ದರು.

Raghaveshwara Seer 22nd day Gochaturmasa speech in Bengaluru

ಪಶುವೈದ್ಯರಾಗಿ ಸುಮಾರು 53 ವರ್ಷ ಗೋಸೇವೆ ಮಾಡಿದ ಕುಮಟಾದ ಡಾ. ವೆಂಕಟರಮಣ ಜಿ ಶೆಟ್ಟಿ ಹಾಗೂ ಪಂಚಗವ್ಯ ಚಿಕಿತ್ಸೆಯ ಮೂಲಕ ವೈದ್ಯಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಡಾ. ಕವಿತಾ ಜೈನ್ ಇವರುಗಳಿಗೆ ಗೋ ಸೇವಾ ಪುರಸ್ಕಾರವನ್ನು ಈ ಸಂದರ್ಭದಲ್ಲಿ ನೀಡಲಾಯಿತು.

ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿಸಿಡಿಯನ್ನು ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಸವಭೂಷಣ ಸ್ವಾಮೀಜಿ 'ಪ್ರಕೃತಿ ಪಾಠ' ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಲೋಕಾರ್ಪಣೆ ಮಾಡಿದರು.

English summary
Raghaveshwara Seer of Hosanagara Ramachandrapura Math speech in Bengaluru during 22nd day Gochaturmasa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X