ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ

Subscribe to Oneindia Kannada

ಬೆಂಗಳೂರು, ಫೆಬ್ರವರಿ 24 : 'ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ', 'ದೇಶಕ್ಕಾಗಿ ಕುದಿಯದ ರಕ್ತ ರಕ್ತವೇ ಅಲ್ಲ, ರಕ್ತವೇ ಅಲ್ಲ', 'ನೀರು ಕೇಳಿದರೆ ಹಾಲು ಕೊಟ್ಟೆವು ಕಾಶ್ಮೀರ ಕೇಳಿದರೆ ಸೀಳಿ ಬಿಟ್ಟೆವು', 'ಕಾಶ್ಮೀರ ಸೇ ಕನ್ಯಾಕುಮಾರಿ ಭಾರತ್ ಏಕೆ ಹೇ'.

ಬುಧವಾರ ಬೆಳಗ್ಗೆ ಈ ಘೋಷಣೆಗಳು ಮೊಳಗಿದ್ದು ಜಯನಗರದ ಸೌತ್ ಎಂಡ್ ವೃತ್ತದಲ್ಲಿ. ದೇಶದ ಪರವಾಗಿ ನಾವಿದ್ದೇವೆ ಎಂದು ಘೋಷಣೆ ಕೂಗಿದ ನೂರಾರು ಜನರು 'ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ'. 'ದೇಶದ ಅಖಂಡತೆಯಲ್ಲಿ ಬಗ್ಗೆ ನಂಬಿಕೆ ಇಲ್ಲದಿದ್ದರೆ ದೇಶ ಬಿಟ್ಟು ಹೋಗಬಹುದು, ನಾವು ಭಾರತದ ಜೊತೆಗಿದ್ದೇವೆ ಎಂದು ಭಾರತ್ ಮಾತಾಕೀ ಜೈ ಎಂದರು. [ಕನ್ಹಯ್ಯ ಬಂಧನ ವಿರೋಧಿಸಿದ ಗಿರೀಶ್ ಕಾರ್ನಾಡ್]

ಬೆಂಗಳೂರಿನ ಸೌತ್ ಎಂಡ್ ವೃತ್ತದಿಂದ ಟೌನ್ ಹಾಲ್ ತನಕ 'ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ' ಎಂಬ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಸೈನಿಕರು, ವಿವಿಧ ಕ್ಷೇತ್ರಗಳ ಉದ್ಯೋಗಿಗಳು, ವಿದ್ಯಾರ್ಥಿಗಳು, ಜನರು ಜಾಥಾದಲ್ಲಿ ಭಾಗವಹಿಸಿದ್ದರು. [JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]

ಜಯನಗರ ಶಾಸಕ ಬಿ.ಎನ್.ವಿಜಯ್ ಕುಮಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ, ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಮುಂತಾದವರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಸೌತ್ ಎಂಡ್ ವೃತ್ತದಲ್ಲಿ ಆರಂಭವಾದ ಜಾಥಾ ಟೌನ್‌ ಹಾಲ್ ಮುಂಭಾಗದಲ್ಲಿ ಮುಕ್ತಾಯಗೊಳ್ಳಲಿದೆ.

ಜಯನಗರದಲ್ಲಿ ಕಾಲ್ನಡಿಗೆ ಜಾಥಾ

ಬೆಂಗಳೂರಿನ ಸೌತ್ ಎಂಡ್ ವೃತ್ತದಿಂದ ಟೌನ್ ಹಾಲ್ ತನಕ 'ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ' ಎಂಬ ಕಾಲ್ನಡಿಗೆ ಜಾಥಾವನ್ನು ಬುಧವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಸೈನಿಕರು, ವಿವಿಧ ಕ್ಷೇತ್ರಗಳ ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಪಕ್ಷಾತೀತವಾದ ಶಾಂತಿಯುತ ಹೋರಾಟ

ಯಾವುದೇ ಪಕ್ಷ, ಸಂಘಟನೆ ಈ ಜಾಥಾವನ್ನು ಹಮ್ಮಿಕೊಂಡಿರಲಿಲ್ಲ. ಶಾಂತಿಯುವಾಗಿ ದೇಶದ ಜೊತೆ ನಾವಿದ್ದೇವೆ ಎಂದು ಸಾರುವುದು ಜಾಥಾದ ಪ್ರಮುಖ ಗುರಿಯಾಗಿತ್ತು. ಸೌತ್ ಎಂಡ್ ವೃತ್ತದಲ್ಲಿ ಆರಂಭಗೊಂಡ ಜಾಥಾ ಟೌನ್ ಹಾಲ್ ಮುಂಭಾಗದಲ್ಲಿ ಅಂತ್ಯಗೊಳ್ಳಲಿದೆ.

ವಿವಿಧ ನಾಯಕರ ಉಪಸ್ಥಿತಿ

ಜಯನಗರ ಶಾಸಕ ಬಿ.ಎನ್.ವಿಜಯ್ ಕುಮಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ, ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಮಾಜಿ ಸೈನಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಇದು ದೇಶದ ಪರವಾದ ಹೋರಾಟ ಭಾರತ್ ಮಾತಾಕೀ ಜೈ ಎಂದು ಎಲ್ಲರೂ ಘೋಷಣೆ ಕೂಗಿದರು.

'ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ'

'ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ', 'ದೇಶಕ್ಕಾಗಿ ಕುದಿಯದ ರಕ್ತ ರಕ್ತವೇ ಅಲ್ಲ, ರಕ್ತವೇ ಅಲ್ಲ', 'ನೀರು ಕೇಳಿದರೆ ಹಾಲು ಕೊಟ್ಟೆವು ಕಾಶ್ಮೀರ ಕೇಳಿದರೆ ಸೀಳಿ ಬಿಟ್ಟೆವು', ಮುಂತಾದ ಘೋಷಣೆಗಳು ಜಾಥಾದಲ್ಲಿ ಮೊಳಗಿದವು.

ದೇಶಕ್ಕಾಗಿ ಹೋರಾಟ

ಪಠಾಣ್ ಕೋಟ್ ದಾಳಿ, ಸಿಯಾಚಿನ್ ದುರಂತದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಈ ಜಾಥಾವನ್ನು ಹಮ್ಮಿಕೊಳ್ಳಾಗಿತ್ತು. 'ದೇಶದ ಅಖಂಡತೆಯಲ್ಲಿ ಬಗ್ಗೆ ನಂಬಿಕೆ ಇಲ್ಲದಿದ್ದರೆ ದೇಶ ಬಿಟ್ಟು ಹೋಗಬಹುದು ಎಂಬ ಕೂಗಿಗೆ ನೂರಾರು ಜನರು ಧ್ವನಿ ಗೂಡಿಸಿದರು.

ರಕ್ತ ಕುದಿಯುತ್ತಿದೆ

ಈ ದೇಶದಲ್ಲಿ ಹುಟ್ಟಿ, ಈ ದೇಶದ ಅನ್ನ ತಿಂದು, ಈ ದೇಶದ ಗಾಳಿ ಕುಡಿದು, ದೇಶದ ವಿರುದ್ಧವೇ ಮಾತನಾಡುವ ದ್ರೋಹಿಗಳು ನಮ್ಮೊಂದಿಗೆ ಇದ್ದಾರೆ ಅವರನ್ನು ನೋಡಿಯೇ ರಕ್ತ ಕುದಿಯುತ್ತದೆ ಎಂದು ಆಕ್ರೋಶ ವ್ಯಕ್ತವಾಯಿತು.

ಅವಕಾಶವಾದಿ ರಾಜಕಾರಣ ಮಾಡಬೇಡಿ

ಜೆಎನ್‌ಯು ವಿಶ್ವವಿದ್ಯಾಲಯದ ವಿಚಾರದಲ್ಲಿ ಕೆಲವರು ಅವಕಾಶವಾದ ರಾಜಕಾರಣ ಮಾಡುತ್ತಿದ್ದಾರೆ. ರಾಜಕಾರಣ ಮಾಡುವುದನ್ನು ಬಿಡಿ ಅಖಂಡ ಭಾರತ ನಮ್ಮದು ಎಂಬ ಎಂಬ ಕೂಗಿಗೆ ನೂರಾರು ಜನರು ಧ್ವನಿಗೂಡಿಸಿದರು.

ಈ ಜಾಥಾ ಯಾರ ವಿರುದ್ಧವೂ ಅಲ್ಲ

ಈ ಜಾಥಾವನ್ನು ಯಾರ ವಿರುದ್ಧವೂ ಮಾಡುತ್ತಿಲ್ಲ. ಪಕ್ಷ, ಸರ್ಕಾರದ ವಿರುದ್ಧವಲ್ಲ. ಇದು ದೇಶಕ್ಕಾಗಿ, ದೇಶದೊಂದಿಗೆ ನಾವಿದ್ದೇವೆ ಎಂದು ತೋರಿಸುವ ಪ್ರಯತ್ನ ಎಂದು ನಾಯಕರು ಹೇಳಿದರು.

ದೇಶ ಬಿಟ್ಟು ಹೋಗಿ

ಭಾರತ ನಮ್ಮದು, ದೇಶದ ಜೊತೆ ನಾವಿದ್ದೇವೆ. ದೇಶದ ಅಖಂಡತೆಯಲ್ಲಿ ನಂಬಿಕೆ ಇಲ್ಲದಿದ್ದರೆ ದೇಶ ಬಿಟ್ಟು ಹೋಗಿ ಎಂದು ಸ್ವಯಂ ಪ್ರೇರಿತರಾಗಿ ಜನರು ಘೋಷಣೆ ಕೂಗಿದರು.

'ಶಾಂತಿ, ಸೌಹಾರ್ದತೆಯ ಹೋರಾಟ'

ಜಾಥಾದಲ್ಲಿ ಪಾಲ್ಗೊಂಡಿದ್ದ ಚಿಂತರಕ ಚರ್ಕವರ್ತಿ ಸೂಲಿಬೆಲೆ ಅವರು, 'ಇದು ದೇಶದ ಪರವಾದ ಹೋರಾಟ. ಭಾರತದ ಶಾಂತಿ, ಸೌಹಾರ್ದತೆ, ಅಖಂಡತೆ ಬಗ್ಗೆ ನಂಬಿಕೆ ಇಲ್ಲದವರು ದೇಶ ಬಿಟ್ಟು ಹೋಗಬಹುದು' ಎಂದು ಹೇಳಿದರು.

English summary
'Quit India' march for nation flags off at South End circle Jayanagar, Bengaluru on Wednesday, February 24, 2016.
Please Wait while comments are loading...