ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಲ್ಲವಿಯ ದುರಂತ ಕಥೆಗೆ ಕಂಬನಿ ಮಿಡಿದ ನಮ್ಮ ಓದುಗರು

|
Google Oneindia Kannada News

ಬೆಂಗಳೂರು, ಜು. 14: ಗಂಡನನ್ನು ಕಳೆದುಕೊಂಡ ಪಲ್ಲವಿ ಪಂಡಾ ಮಿಶ್ರಾ ಅವರ ನೋವಿನ ಕಥನಕ್ಕೆ ನೂರಾರು ಜನ ತಮ್ಮ ಅನುಕಂಪ ತೋರಿಸಿದ್ದಾರೆ. ಗಿರೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

ಪಲ್ಲವಿಯವರ ಫೇಸ್ ಬುಕ್ ಖಾತೆಯಿಂದ ಅವರ ನೋವಿನ ಪತ್ರ 2.6 ಲಕ್ಷ ಶೇರ್ ಗಳನ್ನು ಪಡೆದುಕೊಂಡಿದೆ. ಗಿರೀಶ್ ಅವರ ಸಾವಿಗೆ ಕಾರಣರಾದ ವೈದ್ಯರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ. ಒನ್‌ಇಂಡಿಯಾ ಸಹ ಅವರ ನೋವಿಗೆ ಸ್ಪಂದಿಸುವ ಪ್ರಯತ್ನ ಮಾಡಿತ್ತು. ಜನರು ಕಮೆಂಟ್ ಗಳ ಮೂಲಕ ಉತ್ತರಿಸಿದ್ದು ಪರ್ಯಾಯ ಕ್ರಮಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಅವೆಲ್ಲವನ್ನು ಇಲ್ಲಿ ಇಡುವ ಪ್ರಯತ್ನ ಮಾಡುತ್ತಿದ್ದೇವೆ.[ಗಂಡನ ಕಳೆದುಕೊಂಡ ಮಹಿಳೆಯ ನೋವಿನ ಪತ್ರ]

pallavi

ಒನ್ ಇಂಡಿಯಾ ವರದಿಗೆ ಸ್ಪಂದಿಸಿ ಸಾಂತ್ವನ ಹೇಳಿದವರು
ನಿಜವಾಗಲು ಇದು ನೋವು ತರುವ ವಿಷಯ. ಇಂದಿನ ಅಸ್ಪತ್ರೆ ಹಣ ಗಳಿಸಲು ಮಾತ್ರ. ಚಿಕ್ಕ ನರ್ಸಿಂಗ್ ನಿರ್ಮಾಣಕ್ಕೆ ಸರ್ಕಾರ ಪರವಾನಗಿ ಕೊಡಬಾರದು. ಇದರಿಂದ ಜನರಿಗ ಅಪಾಯ. ಅನುಭವ ಇಲ್ಲದ ವೈದ್ಯರಿಂದ ಈ ರೀತಿ ಅಪಾಯ ಜಾಸ್ತಿ. -Matha

ನಿಜವಾಗ್ಲೂ ತುಂಬ ನೋವಿನ ವಿಷಯ. ಇಂಥ ಅಸಮರ್ಥ ವೈದ್ಯರಿಗೆ ಶಿಕ್ಷೆ ಆಗಬೇಕು. ದೇವರು ಎನ್ನುವುದು ಸತ್ಯವೇ ಆಗಿದ್ದರೆ ಅದು ಆಗುತ್ತದೆ. ಗಿರೀಶ್ ಆತ್ಮಕ್ಕೆ ಶಾಂತಿ ಸಿಗಲಿ.- Lakshman

ಜವಾಭ್ದಾರಿ ಮರೆತ ವೈದ್ಯರೇ ಸಮಾಜದಲ್ಲಿ ತುಂಬಿದ್ದಾರೆ. ದುಡ್ಡು ಮಾಡಲು ಜನರ ರಕ್ತವನ್ನು ಯಾಕೆ ಹೀರುತ್ತೀರಾ. ಮುಂದಾದರೂ ಸರ್ಕಾರ ಇಂಥ ಪ್ರಕರಣಗಳನ್ನು ಶಿಕ್ಷಿಸುವಂಥ ಕಾನೂನು ತರಬೇಕು- Jyothish C

ಸಿಸ್ಟರ್, ಅಗಲಿದ ನಿಮ್ಮ ಯಜಮಾನರ ಆತ್ಮಕ್ಕೆ ಶಾಂತಿ ಸಿಗಲಿ ಹಾಗು ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಇಂಥ ವೈದ್ಯರಿಗೆ ಸಾರ್ವಜನಿಕವಾಗಿ ಶಿಕ್ಷೆಯಾಗಬೇಕು.-Jagadish

bengaluru

ನಾವು ಎಡಗುವುದು ಇಲ್ಲಿಯೇ. ತಾತ್ಕಾಳಿಕವಾಗಿ ಚಿಕ್ಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ನಂತರ ಎಲ್ಲ ಸೌಲಭ್ಯ ಹೊಂದಿರುವ ಜನಮಾನಸದಲ್ಲಿ ಉತ್ತಮ ಆಸ್ಪತ್ರೆ ಎಂದು ಗುರುತಿಸಿಕೊಂಡಿರುವ ಕಡೆ ಚಿಕಿತ್ಸೆ ಪಡೆಯುವುದು ಉತ್ತಮ. ಅಥವಾ ಸಲಹೆಯನ್ನಾದರೂ ಪಡೆದುಕೊಳ್ಳಬೇಕು. - Vishi

ಪಲ್ಲವಿ ಅವರ ಫೇಸ್ ಬುಕ್ ಪೇಜ್ ನಲ್ಲಿ ಅನೇಕರು ಸಾಂತ್ವನದ ಮಾತುಗಳನ್ನು ಆಡಿದ್ದಾರೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ಆಸ್ಪತ್ರೆಯನ್ನು ಈ ಪೋಸ್ಟ್ ನೊಂದಿಗೆ ಟ್ಯಾಗ್ ಮಾಡಿ ಷೇರ್ ಮಾಡುತ್ತೇವೆ. ಬದಲಾವಣೆ ನಮ್ಮಿಂದಲೇ ಆಗಬೇಕು, ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ತಿಳಿಸಿರುವ ಫೇಸ್ ಬುಕ್ ಸ್ನೇಹಿತರು ಕೇಳಿಕೊಂಡಿದ್ದಾರೆ.

English summary
Bengaluru: A Social Media post by a young software engineer Pallavi Mishra about the death of her husband got solace from people. Public opinion to story on Pallavi Mishra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X