ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಲಿಗೆ ಹೋಗುವುದು ತಪ್ಪಿಸಿಕೊಳ್ಳಲು ಪಿಎಸ್‌ಐ ಕೊಂದರು

|
Google Oneindia Kannada News

ಬೆಂಗಳೂರು, ಜನವರಿ 14 : ದೊಡ್ಡಬಳ್ಳಾಪುರ ಠಾಣೆ ಪಿಎಸ್‌ಐ ಜಗದೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಜೈಲಿಗೆ ಹೋಗಲು ಇಷ್ಟವಿಲ್ಲದೆ ಜಗದೀಶ್ ಅವರನ್ನು ಕೊಲೆ ಮಾಡಿದೆವು ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.

ಡಿವೈಎಸ್ಪಿ ರಾಜೇಂದ್ರ ಅವರು ಗುರುವಾರ ನೆಲಮಂಗಲ ಜೆಎಂಎಫ್‌ಸಿ ಕೋರ್ಟ್‌ಗೆ 780 ಪುಟಗಳ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿದ್ದಾರೆ. ಹರೀಶ್ ಬಾಬು, ಮಧು, ತಿಮ್ಮಕ್ಕ, ರಘು ಮತ್ತು ಹನುಮಂತರಾವ್ ಅವರ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗಿದೆ. [ದೊಡ್ಡಬಳ್ಳಾಪುರ PSI ಜಗದೀಶ್ ಹತ್ಯೆ]

psi jagadeesh

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 397, 201, 212, 75 ಕಾಯ್ದೆಯಡಿ ಮೊಕದ್ದಮೆ ದಾಖಲು ಮಾಡಲಾಗಿದೆ. ಜಗದೀಶ್ ಅವರನ್ನು ಹತ್ಯೆ ಮಾಡಿದ ಬಳಿಕ ಆರೋಪಿಗಳಾದ ಮಧು ಮತ್ತು ಹರೀಶ್ ಬಾಬು ಅವರು ಇಂಡೋನೇಷ್ಯಾಗೆ ಪರಾರಿಯಾಗಲು ಯತ್ನಿಸಿದ್ದರು. ಇದಕ್ಕಾಗಿ ನೇಪಾಳದಲ್ಲಿ ನಕಲಿ ಪಾಸ್‌ಪೋರ್ಟ್ ಮಾಡಿಸಲು ತಯಾರಿ ನಡೆಸಿದ್ದರು. [ಪಿಎಸ್ ಐ ಜಗದೀಶ್ ಕೊಂದವರು ನಾಗ್ಪುರದಲ್ಲಿ ಸಿಕ್ಕಿಬಿದ್ರು]

ನಕಲಿ ಪಾಸ್‌ ಪೋರ್ಟ್ ಮಾಡಿಸಲು ಜೈಲಿನಲ್ಲಿರುವ ಕೈದಿಗಳ ನೆರವನ್ನು ಆರೋಪಿಗಳು ಪಡೆದಿದ್ದರು. ಸತೀಶ್, ನವೀನ್, ಚಂದ್ರಶೇಖರ್ ಎಂಬ ಕೈದಿಗಳು ಆರೋಪಿಗಳಿಗೆ ನೆರವು ನೀಡಿದ್ದರು. ಜೈಲಿಗೆ ಹೋದರೆ ತಪ್ಪಿಸಿಕೊಳ್ಳುವುದು ಕಷ್ಟವೆಂದು ಅರಿತ ಆರೋಪಿಗಳು ಪಿಎಸ್‌ಐ ಜಗದೀಶ್ ಅವರನ್ನು ಹತ್ಯೆ ಮಾಡಿದ್ದರು ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. [ಮಧು ಮತ್ತು ಹರೀಶ್ ಬಾಬು ಪೊಲೀಸರಿಗೆ ಸಿಕ್ಕಿದ್ದು ಹೇಗೆ?]

2015ರ ಅಕ್ಟೋಬರ್ 16ರಂದು ದೊಡ್ಡಬಳ್ಳಾಪುರದ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಬೈಕ್ ಕಳ್ಳರಾದ ಮಧು ಮತ್ತು ಹರೀಶ್ ಬಾಬು ಅವರನ್ನು ಹಿಡಿಯಲು ಹೋದಾಗ, ಡ್ರ್ಯಾಗರ್‌ನಿಂದ ಚುಚ್ಚಿ ಅವರನ್ನು ಹತ್ಯೆ ಮಾಡಿದ್ದರು. ನಂತರ ನಾಗ್ಪುರ ರೈಲು ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

English summary
Nelamangala police filed the 780 pages charge sheet against 5 accused in the the murder case of Doddaballapur police station sub inspector Jagadeesh. On October 16th Jagadeesh murdered near Nelamangala, near Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X