ಪರಪ್ಪನ ಅಗ್ರಹಾರ : ತರಕಾರಿ ವಾಹನದಲ್ಲಿ ಕೈದಿ ಪರಾರಿ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 31 : ಪರಪ್ಪನ ಅಗ್ರಹಾರ ಜೈಲಿನ ಭದ್ರತೆ ಬಗ್ಗೆ ಮತ್ತೆ ಪ್ರಶ್ನೆ ಹುಟ್ಟಿಕೊಂಡಿದೆ. ವಿಚಾರಣಾಧೀನ ಕೈದಿಯೊಬ್ಬ ಬುಧವಾರ ಬೆಳಗ್ಗೆ ಜೈಲಿನಿಂದ ಪರಾರಿಯಾಗಿದ್ದಾನೆ. ಕೈದಿ ಹುಡುಕಾಟಕ್ಕಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ.

ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಜೈಲಿಗೆ ತರಕಾರಿ ತಂದಿದ್ದ ವಾಹನದಲ್ಲಿ ಡೇವಿಡ್ ಎಂಬ ಕೈದಿ ಪರಾರಿಯಾಗಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಜೈಲಿನ ಸಿಬ್ಬಂದಿ ಈ ಕುರಿತು ದೂರು ನೀಡಿದ್ದಾರೆ. ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ.[ಕಲಬುರಗಿ ಜೈಲಿನಿಂದ 27 ಕೈದಿಗಳಿಗೆ ಬಿಡುಗಡೆ ಭಾಗ್ಯ]

parappana agrahara

ಪರಪ್ಪನ ಅಗ್ರಹಾರ ಜೈಲಿಗೆ ಪ್ರತಿದಿನ ತರಕಾರಿ ಹೊತ್ತ ಲಾರಿ ಎರಡು ಬಾರಿ ಆಗಮಿಸುತ್ತದೆ. ಇಂದು ಮುಂಜಾನೆ 3 ಗಂಟೆಗೆ ಬಂದಿದ್ದ ಲಾರಿ 4 ಗಂಟೆ ಸುಮಾರಿಗೆ ವಾಪಸ್ ಹೋಗಿದೆ. ಆಗ ಡೇವಿಡ್ ಪರಾರಿಯಾಗಿದ್ದಾನೆ.[ಜೈಲಿನ ಹೆಬ್ಬಾಗಿಲಿನಿಂದಲೇ ಖೈದಿ ಎಸ್ಕೇಪ್]

ಇದೇ ಮೊದಲಲ್ಲ : ಪರಪ್ಪನ ಅಗ್ರಹಾರ ಜೈಲಿನಿಂದ ಕೈದಿ ಪರಾರಿಯಾಗುತ್ತಿರುವುದು ಇದೇ ಮೊದಲಲ್ಲ. 2013ರ ಸೆಪ್ಟೆಂಬರ್‌ನಲ್ಲಿ ಸೈಕೋ ಕಿಲ್ಲರ್ ಜಯಶಂಕರ್ ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ. ಜೈಲಿನಿಂದ ತಪ್ಪಿಸಿಕೊಳ್ಳುವಾಗ ಕಾಲಿಗೆ ಗಾಯಗಳಾಗಿತ್ತು. ಆದ್ದರಿಂದ ಹೆಚ್ಚು ದೂರ ಹೋಗಲಾಗದೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.[ಪರಾರಿಯಾಗಿದ್ದ ಜೈ ಶಂಕರ್ ಸಿಕ್ಕಿಬಿದ್ದ]

2015ರ ಏಪ್ರಿಲ್‌ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಚಿತ್ರದುರ್ಗ ಜಿಲ್ಲೆಯ ಮಂಜುನಾಥ (33) ಎಂಬ ಕೈದಿ ಸಂದರ್ಶಕರಿಗೆ ಕೊಡುವ ಗೇಟ್‌ಪಾಸ್‌ ಬಳಸಿಕೊಂಡು ಜೈಲಿನ ಮುಖ್ಯದ್ವಾರದ ಮೂಲಕವೇ ಪರಾರಿಯಾಗಿದ್ದ. ನಂತರ, ಚಿತ್ರದುರ್ಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

English summary
Prison escaped from Parappana Agrahara jail on Wednesday, August 31, 2016 morning. David who escaped around early morning 4 am. Case registered at Parappana Agrahara police station.
Please Wait while comments are loading...