ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಸುಗಾರ ಕಲಾಂರ ಬದುಕಿನ ಯಶಸ್ಸಿನ ಸೂತ್ರಗಳು

By Vanitha
|
Google Oneindia Kannada News

ಬೆಂಗಳೂರು, ಜುಲೈ, 28 : ವಿಜ್ಞಾನ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಬೀರಿದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಇಂದು ನಮ್ಮೊಟ್ಟಿಗಿಲ್ಲ. ಆದರೆ ಬದುಕಿನುದ್ದಕ್ಕೂ ಅವರು ನಡೆದುಕೊಂಡು ಬಂದ ಹಾದಿ, ಆಲೋಚನೆಗಳು, ಚಿಂತನೆಗಳು ನಮ್ಮ ಗುರಿಯ ಹಾದಿಯನ್ನು, ನಮ್ಮ ಜೀವನದ ಹೆಜ್ಜೆಯನ್ನು ಸದಾ ಉಲ್ಲಾಸಭರಿತವಾಗಿಸುತ್ತವೆ.

ಇಂದಿನ ಹಾಗೂ ಮುಂದಿನ ಪೀಳಿಗೆ ಚೈತನ್ಯದಾಯಕವಾಗಿ ತಮ್ಮ ಗುರಿಯಲ್ಲಿ ಪಾಲ್ಗೊಳ್ಳಲು ಪ್ರೆರೇಪಿಸುವ ಇವರ ಮಾತುಗಳು ಮನಸ್ಸಿನ ಚಂಚಲತೆ ದೂರವಾಗಿಸಿ ಏಕಾಗ್ರತೆ ಕೊಡಮಾಡುತ್ತದೆ. ಜೊತೆಗೆ ಜ್ಞಾನದ ನಿಧಿಯನ್ನು ವಿಸ್ತರಿಸಿಕೊಳ್ಳುತ್ತಾ, ನಮ್ಮ ಬದುಕನ್ನು ನಾವು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಹೇಳಿರುವ ಇವರ ಮಾತಿನ ಲಹರಿ ಒಮ್ಮೆ ಕೇಳಿದರೆ ಸಾಕು ಅಧಮ್ಯ ಉತ್ಸಾಹ ನಮ್ಮಲ್ಲಿ ಪುಟಿದೇಳುತ್ತದೆ.[ಅಗಲಿದ ಮಹಾನ್ ಚೇತನಕ್ಕೆ ದೇಶಾದ್ಯಂತ ಅಶ್ರುತರ್ಪಣ]

ಕಲಾಂ ಅವರ ಬದುಕಿನ ಯಶಸ್ಸಿನ ಸಾಲುಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಹವಣಿಸುವ ಮನಸ್ಸುಗಳಿಗೆ ಪ್ರೇರಣೆಗಳಾಗಿವೆ. ಧೀಮಂತ ವ್ಯಕ್ತಿತ್ವ ರೂಪಿಸಿಕೊಳ್ಳುವ ಸುಲಭ ಸೂಚಿಗಳು ಇಂತಿವೆ. [ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

* ಸೋಲಿಸುವುದು ಸುಲಭ, ಆದರೆ ಗೆಲ್ಲುವುದು ಕಷ್ಟ.

* ಸೌಂದರ್ಯ ಅಡಗಿರುವುದು ಹೃದಯದಲ್ಲಿ, ಮೊಗದಲ್ಲಿ ಅಲ್ಲ.

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

* ಶ್ರಮ ಮತ್ತು ಪರಿಶ್ರಮದ ಕುರಿತಾಗಿ ಅಬ್ದುಲ್ ಅವರ ಸಂದೇಶ
೧. ಜೀವನದಲ್ಲಿ ಗುರಿ ಇರಿಸಿಕೊಳ್ಳಬೇಕು.
೨. ಜ್ಞಾನ ಸಂಪಾದಿಸಿಕೊಳ್ಳಬೇಕು
೩. ಗುರಿ ತಲುಪಲು ಶ್ರಮಹಾಕಬೇಕು
೪. ಪರಿಶ್ರಮ ವಹಿಸಬೇಕು

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

* ಬದುಕಿನ ಯಶಸ್ಸಿನ ರಹಸ್ಯವೇನು?
'ಸರಿಯಾದ ನಿರ್ಧಾರ' ತೆಗೆದುಕೊಳ್ಳುವುದು.

* ಸರಿಯಾದ ನಿರ್ಧಾರಗಳನ್ನು ಮಾಡಲು ಯಾವಾಗ ಸಾಧ್ಯವಾಗುತ್ತದೆ?
'ಅನುಭವಗಳು' ಸರಿಯಾದ ನಿರ್ಧಾರಕ್ಕೆ ದಾರಿ ತೋರುತ್ತದೆ.

* ಅನುಭವ ದೊರೆಯುವುದು ಹೇಗೆ?
'ತಪ್ಪುನಿರ್ಧಾರಗಳು' ಬದುಕಿಗೆ ಅನುಭವ ನೀಡುತ್ತದೆ.

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

* ಎಲ್ಲಾ ಹಕ್ಕಿಗಳು ಮಳೆಬಂದ ಕೂಡಲೇ ತಮ್ಮ ಆಶ್ರಯ ಅರಸಿ ಓಡುತ್ತವೆ. ಆದರೆ ಹದ್ದುಗಳು ಮಳೆಭರಿಸುವ ಮೋಡಗಳನ್ನು ತಡೆಯಲು ಓಡುತ್ತದೆ.

* ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ. ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ.

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

* ಬದುಕಿನ ಯಶಸ್ಸಿನ ಸಂತೋಷ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ ಮನುಜನಿಗೆ ಮಾತ್ರ.

* ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಹವ್ಯಾಸಗಳನ್ನು ಬದಲಾಯಿಸಲು ಸಾಧ್ಯವಿದೆ. ನಿಮ್ಮ ಹವ್ಯಾಸಗಳು ಬದಲಾದಲ್ಲಿ ನಿಮ್ಮ ಭವಿಷ್ಯವೂ ಬದಲಾಗುತ್ತದೆ.

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

ಕಲಾಂ ಅವರ ಸ್ಪೂರ್ತಿದಾಯಕ ಸಾಲುಗಳು

* ರಾಷ್ಟ್ರದ ಉತ್ತಮ ಭವಿಷ್ಯ ಅಡಗಿರುವುದು ಶಾಲಾ ತರಗತಿಯ ಕೊನೆಯ ಬೆಂಚುಗಳಲ್ಲಿ.

* ಸೌಂದರ್ಯ ಅಡಗಿರುವುದು ಹೃದಯದಲ್ಲಿ, ಮೊಗದಲ್ಲಿ ಅಲ್ಲ.

ಕನಸುಗಾರ ಕಲಾಂರ ಬದುಕಿನ ಯಶಸ್ಸಿನ ಸೂತ್ರಗಳು

ಕನಸುಗಾರ ಕಲಾಂರ ಬದುಕಿನ ಯಶಸ್ಸಿನ ಸೂತ್ರಗಳು

* ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ೩ ಮುಖ್ಯ ವ್ಯಕ್ತಿತ್ವಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಅವರುಗಳೆಂದರೆ ಹೆತ್ತ ತಂದೆ ಮತ್ತು ತಾಯಿ ಹಾಗೂ ಗುರುಗಳು.

* I'm Not A Handsome Guy, But I can give My Hand to someone who Needs Help.

English summary
President Dr Abdul kalam have leaded their successful life with their wonderful thoughts. it is inspiration to everyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X