ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಹೀಗೆ ಬಂದು ಹಾಗೆ ಹೋದ ಮಳೆರಾಯ

|
Google Oneindia Kannada News

ಬೆಂಗಳೂರು, ಮೇ 06: ರಾಜಧಾನಿ ಬೆಂಗಳೂರಲ್ಲಿ ಮಳೆ ಬಂದು ಮಾಯವಾಗಿದೆ. ಶುಕ್ರವಾರ ಮಧ್ಯಾಹ್ನ 20 ನಿಮಿಷ ಕಾಲ ಸುರಿದ ಮಳೆರಾಯ ವಾಪಸ್ ತೆರಳಿದ್ದಾನೆ.

ಗುರುವಾರ ಸಹ ನಗರದ ವಿವಿಧೆಡೆ ಮಳೆಯಾಗಿತ್ತು. ಶುಕ್ರವಾರ ಬೆಳಗ್ಗೆ ಕಡು ಬಿಸಿಲಿದ್ದರೆ ಮದ್ಯಾಹ್ನ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಸುಮಾರು 4.10ಕ್ಕೆ ಆರಂಭವಾದ ಮಳೆ 4.30ರ ತಮನಕ ಸುರಿಯಿತು.[ಜೂನ್ ಮೊದಲ ವಾರ ಮುಂಗಾರು ಆಗಮನ ಪಕ್ಕಾ]

rain

ಜಯನಗರ, ಬಸವನಗುಡಿ, ವಿಲ್ಸನ್ ಗಾರ್ಡನ್, ಕತ್ರಿಗುಪ್ಪೆ ಭಾಗದಲ್ಲಿ ಸುರಿದ ಮಳೆ ವಾತಾವರಣವನ್ನು ತಂಪು ಮಾಡಿತು. ಹವಾಮಾನ ತಜ್ಞರು ಮೂನ್ಸೂಚನೆ ನೀಡಿದ್ದು ಜೂನ್ ಮೊದಲ ವಾರದಲ್ಲಿ ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶ ಮಾಡಲಿವೆ ಎಂದು ತಿಳಿಸಿದ್ದಾರೆ.[ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]

ಮಾರತ್ ಹಳ್ಳಿ, ಎಚ್ ಎ ಎಲ್ , ದೊಮ್ಮಲೂರು ಭಾಗದಲ್ಲಿ ಗಾಳಿ ಮಳೆಯಾಗಿದೆ. ಚಾಮರಾಜಪೇಟೆಯಲ್ಲೂ ಮಳೆ ಸುರಿದಿದ್ದು ಕೆಲ ಸಮಯ ಮುಖ್ಯ ರಸ್ತೆಗಳ ಸಂಚಾರ ಅಸ್ತವ್ಯಸ್ಥವಾಗಿತ್ತು.

ಮೆಜೆಸ್ಟಿಕ್​, ಮಲ್ಲೇಶ್ವರಂ, ಶಿವಾನಂದ ಸರ್ಕಲ್​, ಗಾಂಧಿನಗರ, ಓಕಳೀಪುರ, ರಾಜಾಜಿನಗರ, ವಿಜಯನಗರ, ಮಾಗಡಿ ರಸ್ತೆ, ಶಿವಾಜಿನಗರ, ವಿಧಾನಸೌಧ, ಸದಾಶಿವನಗರ, ಕೆ.ಜಿ.ರಸ್ತೆ, ಲಾಲ್​ಬಾಗ್​, ಮಾರ್ಕೆಟ್​, ಜೆ.ಸಿ.ರೋಡ್​​, ಶಾಂತಿನಗರ, ಆರ್​.ಟಿ.ನಗರ, ಹೆಬ್ಬಾಳ, ಕೆ.ಆರ್​.ಪುರಂ, ಯಲಹಂಕ, ಹಲಸೂರು, ಇಂದಿರಾನಗರ ಭಾಗದಲ್ಲೂ ಮಳೆಯಾಗಿದೆ.

English summary
Nature has finally heard the prayers of residents of Bengaluru who were hoping to receive rain since a long time. Drizzle followed by rain is currently lashing several parts of Bengaluru which is likely to continue for another 2-3 days. Bengaluru ricived small amount of rainfall on 06 may 2016, Friday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X