ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಬೆಂಗಳೂರಲ್ಲಿ ಆಪರೇಷನ್ ಸ್ಮೈಲ್

|
Google Oneindia Kannada News

ಬೆಂಗಳೂರು, ಆಗಸ್ಟ್ 7 : ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಣೆ ಮಾಡಲು ಬೆಂಗಳೂರು ಪೊಲೀಸರು ಆರಂಭಿಸಿರುವ 'ಆಪರೇಷನ್ ಸ್ಮೈಲ್' ಹೆಸರಿನ ಕಾರ್ಯಾಚರಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ 190 ಮಕ್ಕಳು ಸೇರಿದಂತೆ 280 ಜನರನ್ನು ರಕ್ಷಣೆ ಮಾಡಲಾಗಿದೆ.

'ಆಪರೇಷನ್ ಸ್ಮೈಲ್' ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿರುವ ಕಾರ್ಯಾಚರಣೆಯ ಸಮನ್ವಯಾಧಿಕಾರಿ ಮತ್ತು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರು, ಕೆಲವೇ ದಿನಗಳಲ್ಲಿ ನಗರದಲ್ಲಿ ಮಕ್ಕಳು ಭಿಕ್ಷಾಟನೆ ಮಾಡುವುದು ಅಂತ್ಯವಾಗಲಿದೆ ಎಂದು ಹೇಳಿದ್ದಾರೆ. [ಮಕ್ಕಳ ರಕ್ಷಣೆಗೆ ಆರಂಭವಾಯಿತು 'ಆಪರೇಷನ್ ಸ್ಮೈಲ್']

ಗುರುವಾರ ನಗರದ ಪೊಲೀಸರು 190 ಮಕ್ಕಳು ಸೇರಿದಂತೆ ಒಟ್ಟು 280 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. 70 ತಂಡಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ತನಕ ಕಾರ್ಯಾಚರಣೆ ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಸಮಿತಿ ನೆರವಿನೊಂದಿಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿ ರಾಜ್ಯದಲ್ಲಿಯೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಉತ್ತರಾಖಂಡ್ ರಾಜ್ಯದಲ್ಲಿ ಜುಲೈ ತಿಂಗಳಿನಲ್ಲಿ 'ಆಪರೇಷನ್ ಸ್ಮೈಲ್' ಕಾರ್ಯಾಚರಣೆ ಮೂಲಕ 264 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಚಿತ್ರಗಳಲ್ಲಿ ನೋಡಿ ಆಪರೇಷನ್ ಸ್ಮೈಲ್.....

ಏನಿದು ಆಪರೇಷನ್ ಸ್ಮೈಲ್?

ಏನಿದು ಆಪರೇಷನ್ ಸ್ಮೈಲ್?

ಟ್ರಾಫಿಲ್ ಸಿಗ್ನಲ್‌, ಸಿನಿಮಾ ಮಂದಿರ, ಬಸ್ ಮತ್ತು ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಿಕ್ಷೆ ಬೇಡುವ ಮಕ್ಕಳನ್ನು ಪತ್ತೆ ಹಚ್ಚಿ ಅವರನ್ನು ರಕ್ಷಣೆ ಮಾಡುವ ಕಾರ್ಯಾಚರಣೆಯೇ 'ಆಪರೇಷನ್ ಸ್ಮೈಲ್'. ಬೆಂಗಳೂರು ನಗರದಲ್ಲಿ ಗುರುವಾರ ಇದಕ್ಕೆ ಚಾಲನೆ ಸಿಕ್ಕಿದೆ.

ಮೊದಲ ದಿನವೇ 280 ಜನರ ರಕ್ಷಣೆ

ಮೊದಲ ದಿನವೇ 280 ಜನರ ರಕ್ಷಣೆ

40 ಹಸುಗೂಸುಗಳು ಸೇರಿ 190 ಮಕ್ಕಳು, 65 ಮಹಿಳೆಯರು, 25 ಪುರುಷರನ್ನು ಮೊದಲ ದಿನದ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ. ಮಕ್ಕಳನ್ನು ಮಡಿವಾಳದಲ್ಲಿರುವ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.

70 ತಂಡಗಳಿಂದ ಕಾರ್ಯಾಚರಣೆ

70 ತಂಡಗಳಿಂದ ಕಾರ್ಯಾಚರಣೆ

ಬೆಂಗಳೂರು ನಗರದಲ್ಲಿ 70 ತಂಡಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯ ತನಕ ಕಾರ್ಯಾಚರಣೆ ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಸಮಿತಿ ನೆರವಿನೊಂದಿಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಎಲ್ಲೆಲ್ಲಿ ಕಾರ್ಯಾಚರಣೆ?

ಎಲ್ಲೆಲ್ಲಿ ಕಾರ್ಯಾಚರಣೆ?

ಮೆಜೆಸ್ಟಿಕ್, ಯಶವಂತಪುರ, ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳು, ಲಾಲ್ ಬಾಗ್, ಕಬ್ಬನ್ ಪಾರ್ಕ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಎಲ್ಲಾ ರಾಜ್ಯಗಳಲ್ಲೂ ಕಾರ್ಯಾಚರಣೆ

ಎಲ್ಲಾ ರಾಜ್ಯಗಳಲ್ಲೂ ಕಾರ್ಯಾಚರಣೆ

ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿ ರಾಜ್ಯದಲ್ಲಿಯೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಉತ್ತರಾಖಂಡ್ ರಾಜ್ಯದಲ್ಲಿ ಜುಲೈ ತಿಂಗಳಿನಲ್ಲಿ 'ಆಪರೇಷನ್ ಸ್ಮೈಲ್' ಕಾರ್ಯಾಚರಣೆ ಮೂಲಕ 264 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ.

English summary
P. Harishekaran additional commissioner of police (East Zone) Bengaluru city said, 190 children rescued from beggary in city under Operation Smile drive on Thursday, August 6, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X