ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರು ವಿಷಾಹಾರ ಕೊಟ್ಟರೆಂದು ಜಡ್ಜ್ ಮುಂದೆ ದೂರು ಹೇಳಿದ ರೌಡಿ ನಾಗ

|
Google Oneindia Kannada News

ಬೆಂಗಳೂರು, ಜೂನ್ 16: ರೌಡಿ ವಿ.ನಾಗರಾಜ್ ವರಾತ ಮುಗಿಯುವಂತೆ ಕಾಣುತ್ತಿಲ್ಲ. ಕೋಟ್ಯಂತರ ರುಪಾಯಿ ನಿಷೇಧಿತ ನೋಟುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದೂ ಸೇರಿದಂತೆ ವಿವಿಧ ಆರೋಪ ಎದುರಿಸುತ್ತಿರುವ ನಾಗರಾಜ್, ಕೋರ್ಟ್ ನಲ್ಲಿ ಪೊಲೀಸರ ವಿರುದ್ಧ ಮತ್ತೆ ದೂರು ಹೇಳಿಕೊಂಡಿದ್ದಾನೆ.

ನೀವ್ಯಾರು, ನಾನೆಲ್ಲಿದ್ದೀನಿ: ಇದು ನೋಡ್ರೀ ನಾಗರಾಜನ ಹೊಸ ವರಸೆನೀವ್ಯಾರು, ನಾನೆಲ್ಲಿದ್ದೀನಿ: ಇದು ನೋಡ್ರೀ ನಾಗರಾಜನ ಹೊಸ ವರಸೆ

ನಾಗರಾಜ್ ಮತ್ತು ಮಕ್ಕಳಾದ ಗಾಂಧಿ, ಶಾಸ್ತ್ರಿಯ ಕಸ್ಟಡಿ ಅವಧಿ ಮುಗಿದಿದ್ದರಿಂದ ಕೆಂಗೇರಿ ಪೊಲೀಸರು ಮೂವರನ್ನೂ ಕೋರ್ಟ್ ಗೆ ಹಾಜರುಪಡಿಸಿದ್ದರು. ವಿಚಾರಣೆ ನಂತರ ನ್ಯಾಯಾಧೀಶರು ಮತ್ತೆ ಏಳು ದಿನದ ನ್ಯಾಯಾಂಗ ಬಂಧನಕ್ಕೆ ಆರೋಪಿಗಳನ್ನು ಒಪ್ಪಿಸಿದರು. ಇನ್ನು ಇದೇ ವೇಳೆ ನಾಗರಾಜ್ ದೂರು ಹೇಳಿದ್ದಾನೆ.

Police giving poisonous food, alleged by rowdy Nagaraj

ಪೊಲೀಸರು ವಿಷಾಹಾರ ಕೊಡುತ್ತಿದ್ದಾರೆ. ವಿಪರೀತ ಕಿರುಕುಳ ನೀಡುತ್ತಿದ್ದಾರೆ. ಸ್ವಾಮಿ, ಇವರಿಂದ ನನಗೆ ಮುಕ್ತಿ ಕೊಡಿಸಿ ಎಂದು ದೈನ್ಯವಾಗಿ ಅಂಗಲಾಚಿದ್ದಾನೆ. ಪೊಲೀಸರ ವಿಚಾರಣೆ ವೇಳೆ ವಿಚಿತ್ರವಾಗಿ ವರ್ತಿಸಿ ಸುದ್ದಿಯಾಗಿದ್ದ ನಾಗರಾಜ್, ನೀವ್ಯಾರು, ನಾನೆಲ್ಲಿದ್ದೇನೆ ಎಂದೆಲ್ಲ ಮಾತನಾಡುತ್ತಿದ್ದಾನೆ ಎಂಬ ಬಗ್ಗೆ ತನಿಖಾಧಿಕಾರಿಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ರೌಡಿ ಶೀಟರ್ ನಾಗನ ಮತ್ತೊಂದು ಮನೆ ಶೋಧ; ಮಹತ್ವದ ಡೈರಿ ವಶರೌಡಿ ಶೀಟರ್ ನಾಗನ ಮತ್ತೊಂದು ಮನೆ ಶೋಧ; ಮಹತ್ವದ ಡೈರಿ ವಶ

ಪೊಲೀಸರು ಶ್ರೀರಾಮಪುರದಲ್ಲಿರುವ ಮನೆ ಮೇಲೆ ದಾಳಿ ನಡೆಸಿದ ವೇಳೆ ತಪ್ಪಿಸಿಕೊಂಡಿದ್ದ ರೌಡಿ ನಾಗರಾಜ್ ಹಾಗೂ ಆತನ ಮಕ್ಕಳನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದರು.

English summary
Police giving me poisonous food, alleged by rowdy V Nagaraj in front of judge in Bengaluru Court. He escaped from his Sriramapur house, after police raid, allegedly had banned notes. Later he was arrested in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X