ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಠಾಕುಠೀಕಾಲಿ ಲಾಠಿ ಹಿಡಿದು ಬಂದ ಪೇದೆ ಮಾಡಿದ್ದೇನು?

"ರೀ ಸ್ವಾಮಿ, ವಯಸ್ಸಾದವನೇ ನಾನಿಲ್ಲಿ ಅರ್ಧಮುಕ್ಕಾಲು ಗಂಟೆಯಿಂದ ಕ್ಯೂನಲ್ಲಿ ನಿಂತಿದ್ದೀನಿ. ಯಾವುದೇ ಗೊಂದಲವಾಗದಂತೆ ಜನರು ಸರಾಗವಾಗಿ ಹಣ ತೆಗೆಯಲು ಅವಕಾಶ ಮಾಡಿಕೊಡಬೇಕಾದ ನೀವೇ ಹೀಗೆ ಮುನ್ನುಗ್ಗಿ ಹಣ ತೆಗೆದುಕೊಳ್ಳಲು ನಾಚಿಕೆಯಾಗುವುದಿಲ್ಲವಾ?"

By ಅನುಪ್ ಕುಮಾರ್
|
Google Oneindia Kannada News

ಬೆಂಗಳೂರು, ನವೆಂಬರ್ 16 : ಬೇಲಿಯೇ ಎದ್ದು ಹೊಲೆ ಮೇಯ್ದಂತೆ ಎಂಬ ಗಾದೆಗೆ ಈ ಘಟನೆಗಿಂತ ಬೇರೆ ಸಾಕ್ಷಿ ಬೇಕೆ? ಜನಜಂಗುಳಿಯನ್ನು ನಿಯಂತ್ರಿಸಬೇಕಾಗಿದ್ದ ಪೊಲೀಸಪ್ಪ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಹೀಗೆ ಮಾಡಬಹುದೆ?

ಮಂಗಳವಾರ ಸಂಜೆ 7.30ರ ಸುಮಾರಿಗೆ ಜಯನಗರ ಸೌತ್ ಎಂಡ್ ಸರ್ಕಲ್ ಬಳಿ, ಸುರಾನಾ ಕಾಲೇಜು ಪಕ್ಕದಲ್ಲಿರುವ ವಿಜಯಾ ಬ್ಯಾಂಕ್ ಎಟಿಎಂಗೆ ಇಪ್ಪತ್ತಿಪ್ಪತ್ತೈದು ಜನರು ಹಣ ಹಿಂತೆಗೆದುಕೊಳ್ಳಬೇಕೆಂದು ಕ್ಯೂ ನಿಂತಿದ್ದರು.

ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುವ ಮುನ್ನ ಸ್ವಲ್ಪ ಕಾಸನ್ನು ಜೇಬಲ್ಲಿ ಹಾಕಿಕೊಂಡು ಹೋಗೋಣವೆಂದು ಜನರು ಸರದಿಯಲ್ಲಿ ನಿಂತಿದ್ದರು. ಆಗೊಂದು ಅವರಿಗೆ ಅಚ್ಚರಿ ಕಾದಿತ್ತು. ಠಾಕುಠೀಕಾಗಿ ಲಾಠಿ ಹಿಡಿದುಕೊಂಡು ಸಮವಸ್ತ್ರದಲ್ಲಿ ಬಂದ ಪೊಲೀಸ್ ಪೇದೆ ಎಲ್ಲರನ್ನು ಸೀಳಿಕೊಂಡು ಎಟಿಎಂನತ್ತ ನುಗ್ಗಿದ.

ದೇಶದ ಎಲ್ಲ ಬ್ಯಾಂಕುಗಳಲ್ಲಿ ಭದ್ರತೆ ಹೆಚ್ಚಿಸಬೇಕೆಂದು ಕೇಂದ್ರ ಸರಕಾರ ಆದೇಶಿಸಿದ್ದರಿಂದ ಸೆಕ್ಯೂರಿಟಿ ಚೆಕ್ಕಿಂಗ್‌ಗೆಂದು ಬಂದಿರಬಹುದೆಂದು ಸರದಿಯಲ್ಲಿದ್ದವರು ಅಂದುಕೊಂಡಿದ್ದಾರೆ. ಪರವಾಗಿಲ್ಲ, ಪೊಲೀಸರು ಅಷ್ಟಾದರೂ ಜನರ ಕಾಳಜಿ ವಹಿಸುತ್ತಾರಲ್ಲ ಎಂದು ಕೆಲವರು ನಿಟ್ಟುಸಿರು ಬಿಟ್ಟಿದ್ದರು. ['ತೆರಿಗೆ ಬೇಡವೇ ಬೇಡ, ಆದಾಯದಲ್ಲಿ ಶೇ 2ರಷ್ಟು ಕೊಟ್ಟರೆ ಸಾಕು!']

ಆದರೆ ಪೊಲೀಸ್ ಮಾಡಿದ್ದೇನು?

ಆದರೆ ಪೊಲೀಸ್ ಮಾಡಿದ್ದೇನು?

ಆದರೆ ಪೊಲೀಸ್ ಮಾಡಿದ್ದೇನು? ಸ್ವಲ್ಪ ತಾಳಿ ಅಂತ ರೊಕ್ಕ ತೆಗೆಯಲು ನಿಂತಿದ್ದವರನ್ನು ಪಕ್ಕಕ್ಕೆ ಸರಿಸಿ, ತಾನೇ ಸ್ವತಃ ತನ್ನ ಡೆಬಿಟ್ ಕಾರ್ಡ್ ಬಳಸಿಕೊಂಡು ಹಣ ತೆಗೆದುಬಿಡುವುದಾ? ಇಡೀದಿನ ಕೆಲಸ ಮಾಡಿ, ಬಳಲಿ ಬೆಂಡಾಗಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತಿದ್ದವರನ್ನು ಹಿಂದೆ ಹಾಕಿ ಪೊಲೀಸ್ ಪೇದೆ ಅಧಿಕಾರ ದುರ್ಬಳಸಿಕೊಂಡಿದ್ದ. ಜನ ರೊಚ್ಚಿಗೇಳಲು ಇಷ್ಟು ಸಾಕಿತ್ತು. [ಹೊಸ ನೋಟುಗಳೊಂದಿಗೆ ಬ್ಯಾಂಕ್ ಸಿಬ್ಬಂದಿ ಪರಾರಿ]

ವಯಸ್ಸಾದವನೇ ನಾನಿಲ್ಲಿ ನಿಂತಿದ್ದೀನಿ

ವಯಸ್ಸಾದವನೇ ನಾನಿಲ್ಲಿ ನಿಂತಿದ್ದೀನಿ

"ರೀ ಸ್ವಾಮಿ, ವಯಸ್ಸಾದವನೇ ನಾನಿಲ್ಲಿ ಅರ್ಧಮುಕ್ಕಾಲು ಗಂಟೆಯಿಂದ ಕ್ಯೂನಲ್ಲಿ ನಿಂತಿದ್ದೀನಿ. ಯಾವುದೇ ಗೊಂದಲವಾಗದಂತೆ ಜನರು ಸರಾಗವಾಗಿ ಹಣ ತೆಗೆಯಲು ಅವಕಾಶ ಮಾಡಿಕೊಡಬೇಕಾದ ನೀವೇ ಹೀಗೆ ಮುನ್ನುಗ್ಗಿ ಹಣ ತೆಗೆದುಕೊಳ್ಳಲು ನಾಚಿಕೆಯಾಗುವುದಿಲ್ಲವಾ" ಎಂದು ಹಿರಿಯರೊಬ್ಬರು ಪೊಲೀಸಪ್ಪನ ಬೆವರು ಇಳಿಸಿದರು.

ಪೊಲೀಸಪ್ಪನ ಹೆಸರು ಏನೋ ಏನು ಕಥೆಯೋ

ಪೊಲೀಸಪ್ಪನ ಹೆಸರು ಏನೋ ಏನು ಕಥೆಯೋ

ಪೊಲೀಸಪ್ಪನ ಹೆಸರು ಏನೋ ಏನು ಕಥೆಯೋ, ಯಾವ ಪೊಲೀಸ್ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿರುವುದೋ? ನಿಮ್ಮ ಹೆಸರೇನು, ಯಾವ ಪೊಲೀಸ್ ಸ್ಟೇಷನ್ ಎಂದು ಜನರು ಕೇಳುತ್ತಿದ್ದಂತೆಯೇ, ವಯಸ್ಕರಿಗೆ ಸಾರಿ ಕೇಳಿ, ತೆಗೆದಿದ್ದ ದುಡ್ಡನ್ನು ಜೇಬಿಗಿಳಿಸಿಕೊಂಡು ಪೊಲೀಸಪ್ಪ ಮಂಗಮಾಯ!

ಸಾಧ್ಯವಾದರೆ ಕ್ರಮ ತೆಗೆದುಕೊಳ್ಳಿ

ಸಾಧ್ಯವಾದರೆ ಕ್ರಮ ತೆಗೆದುಕೊಳ್ಳಿ

ಬೆಂಗಳೂರು ಪೊಲೀಸ್ ಆಯುಕ್ತರಾದ ಮೇಘರಿಕ್ ಅವರೆ, ದಯವಿಟ್ಟು ಇಲ್ಲಿ ತೆಗೆದಿರುವ ವಿಡಿಯೋ ಸರಿಯಾಗಿ ಪರಿಶೀಲಿಸಿ, ಈ ಪೊಲೀಸ್ ಪೇದೆಯ ಹೆಸರೇನು, ಯಾವ ಪೊಲೀಸ್ ಸ್ಟೇಷನ್ನಿಗೆ ಸೇರಿದ್ದು ಅಂತ ಕಂಡುಕೊಳ್ಳಿ, ಸಾಧ್ಯವಾದರೆ ಕ್ರಮ ತೆಗೆದುಕೊಳ್ಳಿ.

English summary
This is nothing but fence eating the crop. A police constable in Bengaluru has withdrawn the money at Vijaya Bank ATM by breaching the queue, where many people were standing, including many elderly people. Will action be taken against him?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X