ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

LIVE: ಪ್ರವಾಸಿ ಭಾರತೀಯ ದಿವಸ: ಮೋದಿ ಭಾಷಣದ ಮುಖ್ಯಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೋದಿ ಭಾಷಣ ಲೈವ್ ವಿಡಿಯೋ ನೋಡಿ

By Mahesh
|
Google Oneindia Kannada News

ಬೆಂಗಳೂರು, ಜನವರಿ 08: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ, ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಿದರು.

14ನೇ ಪ್ರವಾಸಿ ದಿವಸ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಭಾರತವನ್ನು 'ವಿಶ್ವ ಗುರು' ವನ್ನಾಗಿಸಲು ಶ್ರಮಿಸೋಣ ಎಂದು ಮೋದಿ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಪೋರ್ಚುಗಲ್ ಪ್ರಧಾನಿ ಆಂಥೋನಿಯೋ ಕೋಸ್ಟಾ, ರಾಜ್ಯಪಾಲ ವಜುಭಾಯ್ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ವಿ.ಕೆ.ಸಿಂಗ್, ಅನಂತ್​ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

PM Narendra Modi Speaks At 14th Pravasi Bharatiya Divas In Bengaluru

ಭಾರತವನ್ನು ವಿಶ್ವ ಗುರುವನ್ನಾಗಿಸಲು ಯುವಜನತೆಯ ಸಹಕಾರ ಅಗತ್ಯ, ವಿಶ್ವದ ಎಲ್ಲಾ ದೇಶಗಳಲ್ಲೂ ಭಾರತೀಯರ ಹೆಜ್ಜೆಗುರುತುಗಳಿವೆ. 30 ಮಿಲಿಯನ್ ಭಾರತೀಯರು ವಿದೇಶಗಳಲಿದ್ದಾರೆ. ಭಾರತೀಯರಿರುವ ಇದು ನಮ್ಮ ಕರ್ಮಭೂಮಿಯಾಗಿದೆ. ಅನಿವಾಸಿ ಭಾರತೀಯರಿಗೆ ಧರ್ಮ ಭೂಮಿಯಾಗಿದೆ.

ಮೋದಿ ಭಾಷಣದ ಮುಖ್ಯಾಂಶಗಳು:

* ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದ ಭಾಷಣದಲ್ಲಿ ಕಾಳಧನದ ಬಗ್ಗೆ ಮಾತನಾಡಿದ ಮೋದಿ. ಕಾಳಧನದ ವಿರುದ್ಧ ಹೋರಾಟ ಆರಂಭವಾಗಿದೆ.

* ಮಹಾತ್ಮಾ ಗಾಂಧೀಜಿಯನ್ನು ಮಹಾನ್ ಪ್ರವಾಸಿ ಎಂದು ಕರೆದ ಮೋದಿ, ಶ್ರೇಷ್ಠ ಪ್ರವಾಸಿ ಗಾಂಧೀಜಿ ಅವರ ಮರಳುವಿಕೆಯ ಸಂಭ್ರಮಾಚರಣೆಯ ದಿನವಾಗಿದೆ.

* 30 ಮಿಲಿಯನ್ ಭಾರತೀಯರು ವಿದೇಶಗಳಲಿದ್ದಾರೆ. ಭಾರತದ ಅಭಿವೃದ್ಧಿ ಪಥಕ್ಕೆ ಅನಿವಾಸಿ ಭಾರತೀಯರು ಕೂಡಾ ಪಾಲುದಾರರು.


* ಬ್ರೈನ್ ಡ್ರೈನ್ ನಿಂದ ಬ್ರೈನ್ ಗೇನ್ ಗೆ ಬದಲಾಯಿಸುವ ಸಮಯ ಬಂದಿದೆ.
* ಪ್ರವಾಸಿ ಕೌಶಲ್ಯ ತರಬೇತಿ ಯೋಜನೆ ಆರಂಭ. ಇದರಿಂದ ಯುವ ಭಾರತೀಯರಿಗೆ ಅನುಕೂಲ.
* ಸಂಕಷ್ಟದಲ್ಲಿರುವ ಎನ್ನಾರೈಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೂಡಾ ನೆರವು ನೀಡಲಾಗುತ್ತಿದೆ.

* ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಕುರಿತಂತೆ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.
* ನಾವು ಪಾಸ್ಪೋರ್ಟ್ ಬಣ್ಣವನ್ನು ನೋಡಿ ಕಾರ್ಯ ನಿರ್ವಹಿಸುವುದಿಲ್ಲ, ನಮ್ಮದು ರಕ್ತ ಸಂಬಂಧವಾಗಿದೆ.

* ಮಾರಿಷಸ್ ನಿಂದ ಆರಂಭವಾಗಿ Persons of India Origin (PIO)ಕಾರ್ಡ್ ಗಳನ್ನು Overseas India citizenship ಕಾರ್ಡ್ (OCI) ಗಳಾಗಿ ಪರಿವರ್ತಿಸಲು ಜೂನ್ 30ರ ಗಡುವು ಹಾಕಿಕೊಳ್ಳಲಾಗಿದೆ.
* ಇದೇ ರೀತಿ ಫಿಜಿ, ಗಯಾನಾ ಸೇರಿದಂತೆ ಕೆರಿಬಿಯನ್ ದ್ವೀಪ ರಾಷ್ಟ್ರಗಳಲ್ಲಿನ ಸಮಸ್ಯೆಗಳತ್ತ ಕೂಡಾ ಗಮನ ಹರಿಸಲಾಗುತ್ತಿದೆ.


ಮೋದಿ ಭಾಷಣ ಲೈವ್ ವಿಡಿಯೋ ನೋಡಿ

English summary
Prime Minister Narendra Modi inaugurated the Pravasi Bharatiya Divas In Bengaluru today. The 14th edition of the three-day event began in the country's IT hub yesterday with the spotlight on the role of youth in transforming the society and India's potential to play the role of a 'Vishwa Guru' again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X