ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಬ್ಯಾಂಕ್ ಮುಂದೆ ಮೈಲುದ್ದ ಕ್ಯೂ

ಇನ್ನು ಎಟಿಎಂ ತೆರೆದಿಲ್ಲ ಬ್ಯಾಂಕ್ ಗಳು ಓಪನ್ ಆಗಿಲ್ಲ ಆಗಲೇ ಎಟಿಎಂಗಳ ಬಳಿ ಜನರು ಕಾದು ಕುಳಿತ್ತಿದ್ದಾರೆ.ಶುಕ್ರವಾರ ಬೆಳ್ಳಂ ಬೆಳಗ್ಗೆ ಎಟಿಎಂ, ಬ್ಯಾಂಕ್ ಗಳ ಬಳಿ ಜನವೋ ಜನ, ಆದರೆ ಎಟಿಎಂಗಳಲ್ಲಿ ಇನ್ನು ದುಡ್ಡು ಬಂದಿದೆಯೋ ಗೊತ್ತಿಲ್ಲ.

By Ananthanag
|
Google Oneindia Kannada News

ಬೆಂಗಳೂರು: ನವೆಂಬರ್ 11 : ಇನ್ನು ಎಟಿಎಂ ತೆರೆದಿಲ್ಲ ಬ್ಯಾಂಕ್ ಗಳು ಓಪನ್ ಆಗಿಲ್ಲ ಆಗಲೇ ಬೆಂಗಳೂರಿನೆಲ್ಲೆಡೆ ಎಟಿಎಂಗಳ ಬಳಿ ಜನರು ಕಾದು ಕುಳಿತ್ತಿದ್ದಾರೆ.

ಶುಕ್ರವಾರ ಬೆಳ್ಳಂ ಬೆಳಗ್ಗೆ ಎಟಿಎಂ, ಬ್ಯಾಂಕ್ ಗಳ ಬಳಿ ಜನವೋ ಜನ, ಆದರೆ ಎಟಿಎಂಗಳಲ್ಲಿ ಇನ್ನು ದುಡ್ಡು ಬಂದಿದೆಯೋ ಬಂದಿಲ್ಲವೋ ತಿಳಿದಿಲ್ಲ.

atm

ಗುರುವಾರವಂತೂ ಜನರು ಬ್ಯಾಂಕ್, ಪೋಸ್ಟ್ ಆಫೀಸ್‌ ಗಳಲ್ಲಿ ಕಾದು ಕುಳಿತು, ಫಾರಂಗಳನ್ನು ತುಂಬಿ, ದಾಖಲೆಗಳಿಗಾಗಿ ಮನೆಗೆ ಎರಡು ಮೂರು ಬಾರಿ ತಿರುಗಾಡಿ ಸುಸ್ತಾಗಿದ್ದಾರೆ. ಅಲ್ಲದೆ ಬ್ಯಾಂಕ್ ನವರು ಕೇಳುವ ದಾಖಲೆಗಳನ್ನು ನೀಡಲು ಪರಿತಪಿಸಿದ್ದಾರೆ.

ಇನ್ನು ಇಂದು ಎಟಿಎಂ ಓಪನ್‌ ಆಗುವು ಮುಂಚೆಯೇ ಅದರ ಮುಂದೆ ಕಾದು ಕುಳಿತಿರುವ ಜನರು ಎರಡು ದಿನಗಳಿಂದ ಸರಿಯಾಗಿ ಬ್ಯಾಂಕ್ ವ್ಯವಹಾರಗಳು ನಡೆದಿಲ್ಲ ಇಂದಾದರೂ ಹಣ ಸಿಕ್ಕರೆ ನಿತ್ಯದ ಖರ್ಚಿಗೆ ಆಸರೆಯಾಗುತ್ತದೆ ಎಂದು ಎಣಿಸಿದ್ದಾರೆ.

bank

ಎರಡು- ಮೂರು ದಿನಗಳಿಂದ ಮನೆಯಲ್ಲಿದ್ದ ಪುಡಿಗಾಸನ್ನೆಲ್ಲಾ ಖಾಲಿ ಮಾಡಿಕೊಂಡಿರುವ ಅವರು ಹಾಲು, ಹಣ್ಣು ತರಕಾರಿ, ಅಗತ್ಯ ದಿನೋಪಯೋಗಿ ವಸ್ತುಗಳನ್ನು ತರಲು ಹಣಕ್ಕಾಗಿ ಎಟಿಎಂಗಳ ಮೊರೆ ಹೋಗಿದ್ದಾರೆ.

English summary
Rs. 500 and Rs.1000 currency note ban, people rush towards ATM friday morning. cash to daily spending money
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X