ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೀಣ್ಯ-ಸಂಪಿಗೆ ರಸ್ತೆ ಮೆಟ್ರೋ ರೈಲು ಡಿಸೆಂಬರ್ ಅಂತ್ಯಕ್ಕೆ

|
Google Oneindia Kannada News

ಬೆಂಗಳೂರು, ಡಿ. 10 : ಬಹುನಿರೀಕ್ಷಿತ ಪೀಣ್ಯ-ಸಂಪಿಗೆ ರಸ್ತೆ ನಡುವಿನ ನಮ್ಮ ಮೆಟ್ರೋ ಪ್ರಯಾಣ ಆರಂಭವಾಗುವ ಕಾಲ ಹತ್ತಿರವಾಗಿದೆ. ವಿನ್ಯಾಸಗಳ ಸಂಶೋಧನೆ ಹಾಗೂ ಅಧ್ಯಯನ ಸಂಸ್ಥೆ ( ಆರ್‌ಡಿಎಸ್‌ಓ) ಕಳೆದ ವಾರ ನಮ್ಮ ಮೆಟ್ರೋ ಕಾಮಗಾರಿ ವೀಕ್ಷಣೆ ಮಾಡಿದ್ದು, ಶೀಘ್ರದಲ್ಲೇ ಪರಿಕ್ಷಾರ್ಥ ಸಂಚಾರ ಮಾರ್ಗದ ಪರಿಶೀಲನೆ ನಡೆಸಲು ತಂಡವನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದೆ.

ಪೀಣ್ಯ-ಸಂಪಿಗೆ ರಸ್ತೆ ನಡುವಿನ 9.9 ಕಿ.ಮೀ.ಉದ್ದ ನಮ್ಮ ಮೆಟ್ರೋ ಮಾರ್ಗದಲ್ಲಿನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಶನಿವಾರ ಲಖನೌ ಮೂಲದ 'ವಿನ್ಯಾಸಗಳ ಸಂಶೋಧನೆ ಹಾಗೂ ಅಧ್ಯಯನ ಸಂಸ್ಥೆ' (ಆರ್‌ಡಿಎಸ್‌ಓ)ಯ ಪ್ರಧಾನ ನಿರ್ದೇಶಕರು ಶಾಂತಿನಗರದಲ್ಲಿರುವ ಬಿಎಂಆರ್‌ಸಿಎಲ್‌ನ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾರ್ಗದ ರೈಲು ಓಡಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ.

BMRCL

ಪೀಣ್ಯ ಮೆಟ್ರೋ ಡಿಪೋಗೂ ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿದ್ದಾರೆ. ಡಿ.14ರ ವೇಳೆಗೆ ಆರ್‌ಡಿಎಸ್‌ಓನ ತಜ್ಞರ ತಂಡವನ್ನು ಪರೀಕ್ಷಾರ್ಥ ಸಂಚಾರ ವೀಕ್ಷಿಸಲು ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ. ಆರ್‌ಡಿಎಸ್‌ಓ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರೆ, ನಂತರ 'ರೈಲ್ವೆ ಸುರಕ್ಷತಾ ಆಯುಕ್ತ' (ಸಿಆರ್‌ಎಸ್) ಕಡೆಯಿಂದ ಸಾರ್ವಜನಿಕರ ಪ್ರಯಾಣಕ್ಕಾಗಿ ಅಂತಿಮ ಪ್ರಮಾಣಪತ್ರವನ್ನು ಬಿಎಂಆರ್‌ಸಿಎಲ್ ಪಡೆದುಕೊಳ್ಳವುದು ಮಾತ್ರ ಬಾಕಿ ಉಳಿಯಲಿದೆ.

ಕೇಂದ್ರ ರೈಲ್ವೆ ಇಲಾಖೆ ಅಡಿಯಲ್ಲಿ ಬರುವ ಆರ್‌ಡಿಎಸ್‌ಓ, ಮೆಟ್ರೊ ರೈಲು ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಾಗಿದೆಯೇ? ಇಲ್ಲವೇ? ಎಂಬುದನ್ನು ಪರೀಕ್ಷೆ ನಡೆಸುತ್ತದೆ. ಹಳಿಗಳ ಜೋಡಣೆ, ರೈಲು ಸಂಚರಿಸುವಾಗ ಉಂಟಾಗುವ ಕಂಪನ, ಸಂಕೇತ ವ್ಯವಸ್ಥೆ ಹೀಗೆ ನಾನಾ ಆಯಾಮಗಳ ಪರೀಕ್ಷೆಯನ್ನು ಆರ್‌ಡಿಎಸ್‌ಓ ತಜ್ಞರ ತಂಡ ನಡೆಸಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡು ಬಿಎಂಆರ್‌ಸಿಎಲ್ ಪ್ರಮಾಣ ಪತ್ರ ಪಡೆದರೆ ಮೆಟ್ರೋ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುತ್ತದೆ. (ಮಲ್ಲೇಶ್ವರಂ-ಪೀಣ್ಯ ಮೆಟ್ರೋ ವಿಳಂಬ)

ಪೀಣ್ಯ-ಸಂಪಿಗೆ ರಸ್ತೆ ಮಾರ್ಗದಲ್ಲಿನ ಪ್ರಯಾಣವನ್ನು ನವೆಂಬರ್ ತಿಂಗಳಿನಲ್ಲಿ ಆರಂಭಿಸುವಾಗಿ ಬಿಎಂಆರ್‌ಸಿಎಲ್ ಮೊದಲು ಹೇಳಿತ್ತು. ಆದರೆ, ಕಾಮಗಾರಿ ವಿಳಂಬವಾದ ಹಿನ್ನಲೆಯಲ್ಲಿ ಸಂಸ್ಥೆಯು ನೀಡಿದ್ದ ಡೆಡ್ ಲೈನ್ ಮುಂದೆ ಹೋಗಿತ್ತು. ಸದ್ಯ ಪರೀಕ್ಷಾರ್ಥ ಸಂಚಾರ ನಡೆದು, ಪ್ರಮಾಣ ಪತ್ರ ಲಭಿಸಿದರೆ, ಡಿಸೆಂಬರ್ ಅಂತ್ಯದಲ್ಲಿ ಮೆಟ್ರೋ ಸಮಚಾರ ಆರಂಭವಾಗುವ ನಿರೀಕ್ಷೆ ಇದೆ.

English summary
Peenya-Malleswaram metro train service may begins in December end. The Research Design and Standards Organization (RDSO) team plans to visit 9.9-km stretch from Malleswaram to Peenya (Reach-3 and 3A) on December 14. After that Bangalore Metro Rail Corporation Limited(BMRCL) to get Commissioner for Railway Safety certificate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X