ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರ್ಜಿ ಹಾಕಿದ ಹತ್ತು ದಿನದೊಳಗೆ ಪಾಸ್ ಪೋರ್ಟ್!

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ಇನ್ನು ಮುಂದೆ ಅರ್ಜಿ ಹಾಕಿದ ಹತ್ತು ದಿನಗಳೊಳಗಾಗಿ ಪಾಸ್ ಪೋರ್ಟ್ ವಿತರಿಸಲು ಉದ್ದೇಶಿಸಲಾಗಿದೆ. ಒಂದು ತಿಂಗಳೊಳಗಾಗಿ ಈ ವ್ಯವಸ್ಥೆ ಜಾರಿಯಾಗುತ್ತದೆ ಎಂದು ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿ ಕಾರ್ತಿಕೇಯನ್ ಅವರು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಪಾಸ್ ಪೋರ್ಟ್ ವಿತರಣೆಯ ಪ್ರಕ್ರಿಯೆಯಲ್ಲಿ ಕಚೇರಿಯ ಕೆಲಸಕ್ಕೆ ಬೇಕಾಗುವುದು ಮೂರು ದಿನ ಮಾತ್ರ. ಆದರೆ ಹೆಚ್ಚಿನ ಸಮಯ ತಗುಲುವುದು ಪೊಲೀಸ್ ಪರಿಶೀಲನೆ ಹಂತದಲ್ಲಿ. ಇದಕ್ಕಾಗಿಯೇ ಸರಾಸರಿ 45 ದಿನ ಆಗುತ್ತಿತ್ತು. ಸದ್ಯಕ್ಕೆ ಬೆಂಗಳೂರಿನಲ್ಲಿ ಈ ಪ್ರಕ್ರಿಯೆ 13 ದಿನದಲ್ಲಿ, ರಾಜ್ಯದ ಇತರೆಡೆ 25 ದಿನದಲ್ಲಿ ಮುಗಿಯುತ್ತಿದೆ ಎಂದಿದ್ದಾರೆ.[ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?]

passport

ಈ ಅವವಧಿಯನ್ನು ಮತ್ತಷ್ಟು ಕಡಿತಗೊಳಿಸುವುದು ನಮ್ಮ ಗುರಿ ಎಂದ ಅವರು, ಪಾಸ್ ಪೋರ್ಟ್ ಅರ್ಜಿಗೆ ಸಂಬಂಧಿಸಿದ ಹಾಗೆ ಕಚೇರಿಯಿಂದ ಮಾಹಿತಿ ಕಳಿಸಿದ 21 ದಿನದೊಳಗೆ ಪೊಲೀಸರು ಪರಿಶೀಲನಾ ವರದಿ ನೀಡಬೇಕು. ನಾನಾ ಕಾರಣಗಳಿಂದ ಅದು ಸಾಧ್ಯವಾಗ್ತಿಲ್ಲ. ಪೊಲೀಸರಿಗೆ ಸಹಾಯವಾಗಲಿ ಎಂದು ಮೊಬೈಲ್ ಅಪ್ಲಿಕೇಷನ್ ರೂಪಿಸಿದ್ದೇವೆ. ಎಲ್ಲ ಮಾಹಿತಿ ಡಿಜಿಟಲಾ ಆಗಿ ರವಾನಿಸುವುದರಿಂದ ಸಮಯ ಉಳಿಯುತ್ತದೆ ಎಂದು ಹೇಳಿದ್ದಾರೆ.[ಪೊಲೀಸ್ ವೆರಿಫಿಕೇಶನ್ ಇಲ್ಲದೇ ಕೈಗೆ ಪಾಸ್ ಪೋರ್ಟ್]

ಈ ರೀತಿ ಮೊಬೈಲ್ ಅಪ್ಲಿಕೇಷನ್ ಬಳಸಿದ ದೇಶದ ಮೊದಲ ಪಾಸ್ ಪೋರ್ಟ್ ಕಚೇರಿ ನಮ್ಮದು. ಈಗ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಇದನ್ನು ಬಳಸುತ್ತಾರೆ. ಇನ್ನು ದಾಖಲಾತಿಗಳನ್ನು ಧೃಡೀಕರಿಸುವ ಸೇವೆಯನ್ನು ವಿದೇಶಾಂಗ ವ್ಯವಹಾರ ಸಚಿವಾಲಯವು ವಿಕೇಂದ್ರೀಕರಣ ಮಾಡಿದೆ. ಈ ಸೇವೆ ನಮ್ಮ ಕಚೇರಿಯಲ್ಲೂ ಸಿಗುತ್ತದೆ ಎಂದಿದ್ದಾರೆ.

ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ದಾಖಲೆಗಳ ದೃಢೀಕರಣಕ್ಕೆ ರಾಜ್ಯದ ವಿದ್ಯಾರ್ಥಿಗಳು ದೆಹಲಿಗೆ ಹೋಗಬೇಕಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ರಾಜ್ಯದ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಹಾಗೂ ಪಿಎಸ್‌ಕೆಗಳಲ್ಲಿ 163 ಮಂಜೂ­ರಾದ ಹುದ್ದೆಗಳಿದ್ದು, ಈ ಪೈಕಿ 85 ಸಿಬ್ಬಂದಿ ಮಾತ್ರ ಇದ್ದಾರೆ. ಆದರೂ ದೇಶದ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಗಳ ಪೈಕಿ ನಮ್ಮ ಕಚೇರಿ ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.[ಪಾಸ್‌ಪೋರ್ಟ್ ಪಡೆಯಲು 4 ದಾಖಲೆಗಳು ಸಾಕೇ ಸಾಕು]

ಪಾಸ್‌ಪೋರ್ಟ್‌ ಪಡೆಯುವ ವ್ಯವಸ್ಥೆಯನ್ನು ಸರಳ ಮಾಡಲಾಗಿದೆ. ಈ ಕುರಿತ ಮಾಹಿತಿ ನಮ್ಮ ವೆಬ್‌ಸೈಟ್‌ನಲ್ಲಿ (passportindia.gov.in) ಸಿಗುತ್ತದೆ. ಈಗ ರಾಜ್ಯದ ಎಲ್ಲ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳಲ್ಲೂ ಒಂದೇ ದಿನದಲ್ಲಿ ಭೇಟಿಗೆ ಸಮಯ ನಿಗದಿಪಡಿಸಿಕೊಳ್ಳಬಹುದು. ಒಂದು ಗಂಟೆಯೊಳಗೆ ದಾಖಲೆಗಳ ಪರಿಶೀಲನೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

English summary
Good News on the way! Passport seekers will now get the document with in 10 days of applying for it. The fast-tracking expected to happen from November, thanks to Mobile PassportpoliceApp said Karthikeyan, regional passport officer, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X