ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ 14ರಂದು ಅರಮನೆ ಮೈದಾನದ ಸುತ್ತ ಮುತ್ತ ಸಂಚಾರ ಬದಲಾವಣೆ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 13: ನಾಳೆ (ಜೂನ್ 14) ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಅರಮನೆ ಮೈದಾನದ ಕೃಷ್ಣ ವಿಹಾರ್ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 'ಅಭಿನಂದನಾ ಸಮಾರಂಭ' ಹಮ್ಮಿಕೊಂಡಿದೆ.

ನಾಡಿನ ಹಲವು ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯಾತಿಗಣ್ಯ ವ್ಯಕ್ತಿಗಳು ಹಾಗೂ ಭಾರೀ ಜನಸಮೂಹ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಅರಮನೆ ಮೈದಾನ ಹಾಗೂ ಸುತ್ತ-ಮುತ್ತಲಿನ ರಸ್ತೆಗಳನ್ನು ಬಳಸುವವರಿಗೆ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.

ಫ್ರೆಂಚ್ ಓಪನ್ ವಿಜೇತ ಕನ್ನಡಿಗ ರೋಹನ್ ರನ್ನು ಸನ್ಮಾನಿಸಿದ ಸಿದ್ದರಾಮಯ್ಯ

Parking diversion around Palace Ground on June 14, ahead of felicitation program for Siddaramaiah

ಬಸ್‍ಗಳು, ಟೆಂಪೋಗಳು, ಕಾರ್‍ ಗಳು ಕೆಳಕಂಡ ಮಾರ್ಗಗಳಲ್ಲಿ ಸಂಚರಿಸಬಹುದು,

1. ಮೈಸೂರು ರಸ್ತೆ ಕಡೆಯಿಂದ ಬರುವ ಬಸ್‍ಗಳು, ಟೆಂಪೋಗಳು ಮೈಸೂರು ರಸ್ತೆ - ನಾಯಂಡನಹಳ್ಳಿ - ಎಡ ತಿರುವು - ಸುಮನಹಳ್ಳಿ - ಡಾ: ರಾಜಕುಮಾರ್ ಸಮಾಧಿ - ತುಮಕೂರು ರಸ್ತೆ - ಬಲ
ತಿರುವು - ಗೊರಗುಂಟೆಪಾಳ್ಯ ಜಂಕ್ಷನ್ - ಎಡ ತಿರುವು - ಬಿ.ಇ.ಎಲ್. - ಹೆಬ್ಬಾಳ ಮೇಲು ಸೇತುವೆ - ಮೇಖ್ರಿ ವೃತ್ತ ಸರ್ವೀಸ್ ರಸ್ತೆ - ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ.

2. ತುಮಕೂರು ರಸ್ತೆ ಕಡೆಯಿಂದ ಬರುವವರು ತುಮಕೂರು ರಸ್ತೆ - ಬಲ ತಿರುವು - ಗೊರಗುಂಟೆಪಾಳ್ಯ ಜಂಕ್ಷನ್ - ಎಡ ತಿರುವು - ಬಿ.ಇ.ಎಲ್. - ಹೆಬ್ಬಾಳ ಮೇಲು ಸೇತುವೆ - ಮೇಖ್ರಿ ವೃತ್ತ ಸರ್ವೀಸ್
ರಸ್ತೆ - ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ.

ತಿವಾರಿ ಕೇಸ್ : ಯೋಗಿ ಸರ್ಕಾರದ ವೈಫಲ್ಯ, ಸಿದ್ದರಾಮಯ್ಯಗೆ ಮೊರೆತಿವಾರಿ ಕೇಸ್ : ಯೋಗಿ ಸರ್ಕಾರದ ವೈಫಲ್ಯ, ಸಿದ್ದರಾಮಯ್ಯಗೆ ಮೊರೆ

3. ಕನಕಪುರ ರಸ್ತೆ ಕಡೆಯಿಂದ ಬರುವವರು ಕನಕಪುರ ರಸ್ತೆ - ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ -ಬಲ ತಿರುವು - ರಾಜಲಕ್ಷ್ಮಿ ಜಂಕ್ಷನ್ ಮೂಲಕ ಜಯನಗರ 4ನೇ ಮೈನ್ - ಸೌತ್ ಎಂಡ್ ವೃತ್ತ -
ಆರ್.ವಿ.ಜಂಕ್ಷನ್ - ಲಾಲ್‍ಬಾಗ್ ಪಶ್ಚಿಮ ಗೇಟ್ - ಮಿನರ್ವ ವೃತ್ತ - ಜೆ.ಸಿ.ರಸ್ತೆ - ಟೌನ್‍ಹಾಲ್ - ಪೊಲೀಸ್ ಕಾರ್ನರ್ - ಎಡ ತಿರುವು - ಕೆ.ಜಿ.ರಸ್ತೆ - ಮೈಸೂರು ಬ್ಯಾಂಕ್ ವೃತ್ತ - ಬಲ ತಿರುವು -
ಪ್ಯಾಲೇಸ್ ರಸ್ತೆ - ಬಸವೇಶ್ವರ ವೃತ್ತ - ಹಳೇ ಹೈಗ್ರೌಂಡ್ಸ್ ಜಂಕ್ಷನ್ - ಅವಿನಾಶ್ ಪೆಟ್ರೋಲ್ ಬಂಕ್ - ಚಂದ್ರಿಕಾ ಜಂಕ್ಷನ್ - ಉದಯ ಟಿ.ವಿ. ಜಂಕ್ಷನ್ - ಕಂಟೋನ್ಮೆಂಟ್ ಅಂಡರ್‍ಪಾಸ್ -
ಜಯಮಹಲ್ ಮೂಲಕ ಅರಮನೆ ಮೈದಾನದ ಮಾವಿನಕಾಯಿ ಮಂಡಿ ಆವರಣ.

4. ಬನ್ನೇರುಘಟ್ಟ ರಸ್ತೆ ಕಡೆಯಿಂದ ಬರುವವರು - ಬನ್ನೇರುಘಟ್ಟ ರಸ್ತೆ - ಡೈರಿ ವೃತ್ತ - ಎಡ ತಿರುವು - ಡಾ: ಮರಿಗೌಡ ರಸ್ತೆ - ಕೆ.ಹೆಚ್.ವೃತ್ತ - ಲಾಲ್‍ಬಾಗ್ ಮುಖ್ಯದ್ವಾರ - ಮಿನರ್ವ ವೃತ್ತ - ಬಲ
ತಿರುವು - ಜೆ.ಸಿ.ರಸ್ತೆ - ಟೌನ್‍ಹಾಲ್ - ಪೊಲೀಸ್ ಕಾರ್ನರ್ - ಎಡ ತಿರುವು - ಕೆ.ಜಿ.ರಸ್ತೆ - ಮೈಸೂರು ಬ್ಯಾಂಕ್ ವೃತ್ತ - ಬಲ ತಿರುವು - ಪ್ಯಾಲೇಸ್ ರಸ್ತೆ - ಬಸವೇಶ್ವರ ವೃತ್ತ - ಹಳೇ
ಹೈಗ್ರೌಂಡ್ಸ್ ಜಂಕ್ಷನ್ - ಅವಿನಾಶ್ ಪೆಟ್ರೋಲ್ ಬಂಕ್ - ಚಂದ್ರಿಕಾ ಜಂಕ್ಷನ್ - ಉದಯ ಟಿ.ವಿ. ಜಂಕ್ಷನ್ - ಕಂಟೋನ್ಮೆಂಟ್ ಅಂಡರ್‍ಪಾಸ್ - ಜಯಮಹಲ್ ಮೂಲಕ ಅರಮನೆ ಮೈದಾನದ
ಮಾವಿನಕಾಯಿ ಮಂಡಿ ಆವರಣ.

'ನಮ್ಮ ಮೆಟ್ರೋ' ಬಿಎಂಆರ್ ಸಿಎಲ್ ಉದ್ಯೋಗಕ್ಕೆ ಅರ್ಜಿ ಹಾಕಿ'ನಮ್ಮ ಮೆಟ್ರೋ' ಬಿಎಂಆರ್ ಸಿಎಲ್ ಉದ್ಯೋಗಕ್ಕೆ ಅರ್ಜಿ ಹಾಕಿ

5. ಹೊಸೂರು ಕಡೆಯಿಂದ ಬರುವ ವಾಹನಗಳು, ಹೊಸೂರು ರಸ್ತೆ - ಮಡಿವಾಳ ಚೆಕ್‍ಪೋಸ್ಟ್ - ಎಡ ತಿರುವು - ಡೈರಿ ವೃತ್ತ - ಡಾ: ಮರಿಗೌಡ ರಸ್ತೆ - ಕೆ.ಹೆಚ್.ವೃತ್ತ - ಲಾಲ್‍ಬಾಗ್ ಮುಖ್ಯದ್ವಾರ -
ಮಿನರ್ವ ವೃತ್ತ - ಬಲ ತಿರುವು - ಜೆ.ಸಿ.ರಸ್ತೆ - ಟೌನ್‍ಹಾಲ್ - ಪೊಲೀಸ್ ಕಾರ್ನರ್ - ಎಡ ತಿರುವು - ಕೆ.ಜಿ.ರಸ್ತೆ - ಮೈಸೂರು ಬ್ಯಾಂಕ್ ವೃತ್ತ - ಬಲ ತಿರುವು - ಪ್ಯಾಲೇಸ್ ರಸ್ತೆ - ಬಸವೇಶ್ವರ
ವೃತ್ತ - ಹಳೇ ಹೈಗ್ರೌಂಡ್ಸ್ ಜಂಕ್ಷನ್ - ಅವಿನಾಶ್ ಪೆಟ್ರೋಲ್ ಬಂಕ್ - ಅವಿನಾಶ್ ಪೆಟ್ರೋಲ್ ಬಂಕ್ - ಚಂದ್ರಿಕಾ ಜಂಕ್ಷನ್ - ಉದಯ ಟಿ.ವಿ. ಜಂಕ್ಷನ್ - ಕಂಟೋನ್ಮೆಂಟ್ ಅಂಡರ್‍ಪಾಸ್ -
ಜಯಮಹಲ್ ಮೂಲಕ ಅರಮನೆ ಮೈದಾನದ ಮಾವಿನಕಾಯಿ ಮಂಡಿ ಆವರಣ.

6. ಹಳೇ ಮದ್ರಾಸ್ ರಸ್ತೆ ಕಡೆಯಿಂದ ಬರುವವರು, ಹಳೇ ಮದ್ರಾಸ್ ರಸ್ತೆ - ಕೆ.ಆರ್.ಪುರ ತೂಗು ಸೇತುವೆ - ಹೆಣ್ಣೂರು ಜಂಕ್ಷನ್ - ನಾಗವಾರ - ಹೆಬ್ಬಾಳ ಮೇಲು ಸೇತುವೆ - ಬಳ್ಳಾರಿ ರಸ್ತೆ - ಮೇಖ್ರಿ ವೃತ್ತ
ಸರ್ವೀಸ್ ರಸ್ತೆ - ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ.

7. ಬಳ್ಳಾರಿ ರಸ್ತೆ ಕಡೆಯಿಂದ ಬರುವವರು, ಬಳ್ಳಾರಿ ರಸ್ತೆ - ದೇವನಹಳ್ಳಿ - ಚಿಕ್ಕಜಾಲ ಹುಣಸಮಾರನಳ್ಳಿ - ಕೋಗಿಲು ಜಂಕ್ಷನ್ - ಕೊಡಿಗೇಹಳ್ಳಿ ಗೇಟ್ - ಹೆಬ್ಬಾಳ ಮೇಲು ಸೇತುವೆ - ಮೇಖ್ರಿ ವೃತ್ತ ಸರ್ವೀಸ್
ರಸ್ತೆ - ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ.

8. ದೊಡ್ಡಬಳ್ಳಾಪುರ ಕಡೆಯಿಂದ ಬರುವವರು, ದೊಡ್ಡಬಳ್ಳಾಪುರ ರಸ್ತೆ - ಮೇಜರ್ ಉನ್ನಿಕೃಷ್ಣ ರಸ್ತೆ ಜಂಕ್ಷನ್ - ಯಲಹಂಕ ಪೊಲೀಸ್ ಠಾಣೆ ಜಂಕ್ಷನ್ - ಯಲಹಂಕ್ ಬೈಪಾಸ್ ಜಂಕ್ಷನ್ - ಬಳ್ಳಾರಿ
ರಸ್ತೆ - ಹೆಬ್ಬಾಳ ಮೇಲು ಸೇತುವೆ - ಮೇಖ್ರಿ ವೃತ್ತ ಸರ್ವೀಸ್ ರಸ್ತೆ - ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ.

9. ಕಾರ್ಯಕ್ರಮಕ್ಕೆ ಬರುವ ಬಸ್, ಟೆಂಪೋಗಳು ಜಯಮಹಲ್ ರಸ್ತೆ ಮೂಲಕ ಮಾವಿನಕಾಯಿ ಮಂಡಿ ಮೈದಾನದಲ್ಲಿ ನಿಲುಗಡೆಗ ಮಾಡಬಹುದಾಗಿದೆ.

10. ಕಾರ್ಯಕ್ರಮಕ್ಕೆ ದ್ವಿಚಕ್ರ ವಾಹನಗಳಲ್ಲಿ ಬರುವವರು ಜಯಮಹಲ್ ರಸ್ತೆಯಿಂದ ಅಮಾನುಲ್ಲಾಖಾನ್ ಗೇಟ್ ಮೂಲಕ ಪ್ರವೇಶಿಸಿ ಕೃಷ್ಣ ವಿಹಾರ್ ಆವರಣದಲ್ಲಿ ನಿಲುಗಡೆ
ಮಾಡಬಹುದಾಗಿದೆ.

11. ಗಣ್ಯ ಮತ್ತು ಅತಿ ಗಣ್ಯ ವ್ಯಕ್ತಿಗಳ ವಾಹನಗಳು ರಮಣ ಮಹರ್ಷಿ ರಸ್ತೆಯ ಕೃಷ್ಣ ವಿಹಾರ್ ಗೇಟ್ ನಂ. 1ರ ಮೂಲಕ ಪ್ರವೇಶಿಸಿ ಕೃಷ್ಣ ವಿಹಾರ ಮೈದಾನದಲ್ಲಿ ನಿಲುಗಡೆ ಮಾಡಬಹುದಾಗಿದೆ.

12. ಅರಮನೆ ಮೈದಾನಕ್ಕೆ ಹೊಂದಿಕೊಂಡಂತೆ ಇರುವ ರಮಣ ಮಹರ್ಷಿ ರಸ್ತೆ - ಸರ್.ಸಿ.ವಿ ರಾಮನ್ ರಸ್ತೆ - ಬಳ್ಳಾರಿ ರಸ್ತೆ - ಜಯಮಹಲ್ ರಸ್ತೆ. ಎಂ.ವಿ ಜಯರಾಮನ್ ರಸ್ತೆ - ಪ್ಯಾಲೇಸ್ ರಸ್ತೆಗಳಲ್ಲಿ ಎಲ್ಲಾ
ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.

English summary
Felicitation program for Karnataka chief minister Siddaramaiah scheduled June 14, 2017 in Palace Ground. Because of this program Bengaluru Traffic Police diverted some roots, canceled parking in some roads and details of this changes are like this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X