ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಡಿತ್ ಗೋಡ್ಖಿಂಡಿರಿಂದ ವಿಶಿಷ್ಟ ಸಂಗೀತ ಸಾಹಸ ಘೋಷಣೆ

By Mahesh
|
Google Oneindia Kannada News

ಬೆಂಗಳೂರು, ಸೆ. 03: ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರು ವಿಶಿಷ್ಟ ಕಾರ್ಯಕ್ಕೆ ಮುಂದಾಗಿದ್ದಾರೆ. ಶಾಸ್ತ್ರೀಯ ಸಂಗೀತದ ಉಳಿವು ಹಾಗೂ ಬೆಳವಣಿಗೆಗಾಗಿ ವರ್ಷಕ್ಕೆ ಆರು ಸಂಗೀತ ಕಚೇರಿ ನಡೆಸಿ ಹಿರಿಯ ಕಿರಿಯ ಸಂಗೀತಗಾರರಿಗೆ ವೇದಿಕೆ ಒದಗಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಗೋಡ್ಖಿಂಡಿ ಅವರು ಮ್ಯೂಸಿಕ್ ಅಂಡ್ ಎಜುಟೈನ್ಮೆಂಟ್ ಪ್ರೈ ಲಿ ಹಾಗೂ ಇನ್ ಸಿಂಕ್ ಮ್ಯೂಸಿಕ್ ಚಾನೆಲ್ ಸಹಯೋಗದಲ್ಲಿ ಈ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿದೆ. ಗ್ಲೋಬಲ್ ಕಮ್ಯೂನಿಟಿ ಆಫ್ ಇಂಡಿಯನ್ ಮ್ಯೂಸಿಕ್ (ಜಿಸಿಐಎಂ) ಅಡಿಯಲ್ಲಿ ಮೊದಲ ಶಾಖೆಯಾಗಿ ಗೋಡ್ಖಿಂಡಿ ಅವರು ಮ್ಯೂಸಿಕ್ ಅಂಡ್ ಎಜುಟೈನ್ಮೆಂಟ್ ಪ್ರೈ ಲಿ ಕಾರ್ಯ ನಿರ್ವಹಿಸಲಿದ್ದು ಮೊದಲ ಕಚೇರಿ ನವೆಂಬರ್ 28, 2015ರಂದು ಆಯೋಜನೆಗೊಂಡಿದೆ.

Pandit Pravin Godkhindi

ವರ್ಷಕ್ಕೆ 6 ಕಚೇರಿಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ವಿದ್ವಾಂಸರು, ಸ್ಥಳೀಯ ಸಂಗೀತಗಾರರು, ಉದಯೋನ್ಮುಖ ಪ್ರತಿಭೆಗಳು ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ಪ್ರೇಕ್ಷಕರ ಜೊತೆ ಸಂವಾದ, ತರಬೇತಿ ಶಿಬಿರಗಳು, ವಿಚಾರ ಸಂಕಿರಣ ಕೂಡಾ ನಡೆಯಲಿದೆ ಎಂದು ಪ್ರವೀಣ್ ಗೋಡ್ಖಿಂಡಿ ಅವರು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.

ಸದಸ್ಯರೇ ಆಹ್ವಾನಿತ ಶೋತೃಗಳು: ಇಂಥ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ಹುಡುಕುವುದು ಕಷ್ಟ. ಹೀಗಾಗಿ ಆಸಕ್ತ ಶೋತೃಗಳನ್ನು ವಿಶೇಷ ಆಹ್ವಾನಿತರು ಅಥವಾ ಸದಸ್ಯರನ್ನಾಗಿಸಿಕೊಂಡು ಅವರಿಷ್ಟದ ಸಂಗೀತವನ್ನು ಕೇಳುವ ಒಂದು ವ್ಯವಸ್ಥೆಯನ್ನು ರೂಪಿಸಲು ಪ್ರವೀಣ್ ಅವರು ಯೋಚಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9916688166,080-26723855

Email : [email protected] , [email protected]
FB Page - https://www.facebook.com/gcimbengaluru

ಈ ಹೊಸ ಪ್ರಯೋಗದ ಬಗ್ಗೆ ಪ್ರವೀಣ್ ಗೋಡ್ಖಿಂಡಿ :


(ಒನ್ ಇಂಡಿಯಾ ಸುದ್ದಿ)

English summary
Pandit Pravin Godkhindi led Godkhindi Music and Edutainment Pvt Ltd is partnering with INSYNC for the promotion of Indian classical music under GCIM (GLOBAL COMMUNITY OF INDIAN MUSIC). First concert is Scheduled on November 28th 2015 five more to follow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X