ಆರ್ ಗಣೇಶ್ ಅವರ ಸಾವಿರದ ಅಷ್ಟಾವಧಾನ ಲೈವ್

Posted by:
 
Share this on your social network:
   Facebook Twitter Google+    Comments Mail

ಬೆಂಗಳೂರು, ಫೆ.13: ಕಳೆದ 33 ವರ್ಷಗಳಿಂದ ಕನ್ನಡನಾಡಿನಲ್ಲಲ್ಲದೇ ಭಾರತದಾದ್ಯಂತ ಮತ್ತು ವಿದೇಶಗಳಲ್ಲಿಯೂ ಕನ್ನಡ, ಸಂಸ್ಕೃತ, ತೆಲುಗು ಮತ್ತು ಪ್ರಾಕೃತ ಭಾಷೆಗಳಲ್ಲಿ ಅಷ್ಟಾವಧಾನ ಮತ್ತು ಶತಾವಧಾನ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ವಿದ್ವದ್ರಸಿಕರನ್ನು ರಂಜಿಸಿ, ಸಾಹಿತ್ಯ ಪರಂಪರೆಯ ಶ್ರೇಷ್ಠ ಮತ್ತು ಅತಿಕ್ಲಿಷ್ಟಪ್ರಕಾರವಾದ ಅವಧಾನಕ್ಕೆ ಕನ್ನಡನಾಡಿನಲ್ಲಿ ಪುನರ್ಜನ್ಮ ನೀಡಿದ ಶತಾವಧಾನಿ ಡಾ|| ಆರ್. ಗಣೇಶರ "ಸಾವಿರದ ಅಷ್ಟಾವಧಾನ"ವನ್ನು ಇದೇ ಫೆಬ್ರವರಿ 16ರಂದು ಪದ್ಯಪಾನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದೆ.

ಬೆಂಗಳೂರಿನ ಜಯನಗರದ 3ನೇ ಬ್ಲಾಕಿನ ಎನ್ಎಂಕೆಆರ್ ವಿ ಕಾಲೇಜಿನ ಮಂಗಳ ಮಂಟಪ ಕಾರ್ಯಕ್ರಮ ನಡೆಯಲಿದ್ದು, ಪದ್ಯಪಾನ ವೆಬ್ ತಾಣದಲ್ಲಿ ಲೈವ್ ಆಗಿ ಪ್ರಸಾರವಾಗಲಿದೆ.

2012ರಲ್ಲಿ ಮೊತ್ತ ಮೊದಲ ಬಾರಿಗೆ ತುಂಬುಗನ್ನಡದ ಶತವಧಾನದ ನಂತರ ಪದ್ಯಪಾನವು ಇಡುತ್ತಿರುವ ಮತ್ತೊಂದು ದೊಡ್ಡ ಹೆಜ್ಜೆ ಇದಾಗಿದೆ. ಈ ಸಾವಿರದ ಅಷ್ಟಾವಧಾನವನ್ನು ವಿಭಿನ್ನವಾಗಿ ಮತ್ತು ವಿಜೃಂಭಣೆಯಿಂದ ನಡೆಸಬೇಕೆಂಬ ಪದ್ಯಪಾನದ ಅಶಯವನ್ನು ತಾವೆಲ್ಲರೂ ಹೃತ್ಪೂರ್ವಕವಾಗಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಿ ಎಂದು ಪದ್ಯಪಾನ ಸಂಸ್ಥೆ ಕೋರಿದೆ. ಹೆಚ್ಚಿನ ಮಾಹಿತಿಗೆ ಪದ್ಯಪಾನ ವೆಬ್ ತಾಣಕ್ಕೆ ಭೇಟಿ ಕೊಡಿ

ಆರ್ ಗಣೇಶ್ ಅವರ ಸಾವಿರದ ಅಷ್ಟಾವಧಾನ ಲೈವ್

ಪೃಚ್ಛಕವರ್ಗ:
ನಿಷೇಧಾಕ್ಷರಿ: ಡಾ. ಎಸ್ ರಂಗನಾಥ
ಚಿತ್ರಕವಿತೆ: ಡಾ. ಶಂಕರ್ ರಾಜಾರಾಮನ್
ಕಾವ್ಯ ವಾಚನ : ಚಂದ್ರಶೇಖರ ಕೆದಿಲಾಯ (ಕನ್ನಡ), ರಂಜನಿ ವಾಸುಕಿ(ಸಂಸ್ಕೃತ)
ಸಮಸ್ಯಾಪೂರಣ: ಶಂಕರನಾರಾಯಣ ಉಪಾಧ್ಯಾಯ
ದತ್ತಪದಿ: ಬಿ.ಆರ್ ಪ್ರಭಾಕರ್
ಘಂಟಾವಾದನ: ಗೌತಮ್ ರಾಮಮೂರ್ತಿ
ನೃತ್ಯಕಾವ್ಯ: ನಿರುಪಮಾ ರಾಜೇಂದ್ರ
ಸಂಖ್ಯಾ ಬಂಧ: ಸುಧಾಕರ್ ಜೋಯಿಸ್
ಚಿತ್ರಕ್ಕೆ ಪದ್ಯ: ರಾಘವೇಂದ್ರ ಹೆಗಡೆ
ಅಪ್ರಸ್ತುತ ಪ್ರಸಂಗ: ಸೂರ್ಯಪ್ರಕಾಶ್ ಪಂಡಿತ್
ಆಶುಕವಿತೆ: ಸುಧೀರ್ ಕೃಷ್ಣಸ್ವಾಮಿ, ವಾಸುಕಿ ಎಚ್.ಎ, ಸೋಮಶೇಖರ ಶರ್ಮ, ರಾಘವೇಂದ್ರ ಜಿ.ಎಸ್, ಗಣೇಶ್ ಭಟ್ ಕೊಪ್ಪಲತೋಟ, ಎ.ಆರ್ ಚಂದ್ರಮೌಳಿ, ರಂಗನಾಥ ಪ್ರಸಾದ್, ರಾಮಚಂದ್ರ ಕೆ.ಬಿಎಸ್, ಮಹೇಶ್ ಭಟ್ಟ ಹಾರ್ಯಾಡಿ

ಅಂತರ್ಜಾಲದಲ್ಲಿ ನೇರಪ್ರಸಾರ: ಇಲ್ಲಿ ಕ್ಲಿಕ್ ಮಾಡಿ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸಿ

ಕೆದಿಲಾಯ ಅವರ ಸಿರಿಕಂಠದ ಕಾವ್ಯ ವಾಚನ ಹಾಗೂ ಆರ್ ಗಣೇಶ್ ಅವರ ಅಷ್ಟವಾಧಾನದ ಸ್ಯಾಂಪಲ್ ಎಲ್ಲಿದೆ

English summary
"Saavirada Ashataavadhaana" a Ashtaavadhana program by Dr. R Ganesh organised by Padyapana on 16th Feb Sunday, Mangala Mantapa, NMKRV College, Jayanagar. Catch the live action of this unique program from Padyapana website
Write a Comment