ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒರಾಯನ್ ವೈನ್ ಫೆಸ್ಟಿವಲ್ ಗೆ ಅಭೂತಪೂರ್ವ ಪ್ರತಿಕ್ರಿಯೆ

By Rajendra
|
Google Oneindia Kannada News

ಬೆಂಗಳೂರು, ಜ.26: ಬಹುನಿರೀಕ್ಷಿತ ಒರಾಯನ್ ವೈನ್ ಫೆಸ್ಟಿವಲ್ 2015, ಕರ್ನಾಟಕ ವೈನ್ ಮಂಡಳಿಯ ಸಹಯೋಗದೊಂದಿಗೆ, 20ಕ್ಕೂ ಹೆಚ್ಚು ಭಾರತೀಯ ಹಾಗೂ ಅಂತಾರಾಷ್ಟ್ರೀಯ ಬ್ರಾಂಡ್ ಗಳೊಂದಿಗೆ 2015ರ ಜನವರಿ 23ರಿಂದ 25ರ ತನಕ ಬ್ರಿಗೇಡ್ ಗೇಟ್ ವೇಯ ಲೇಕ್ ಸೈಡ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಕರ್ನಾಟಕ ವೈನ್ ಉದ್ಯಮವು ದೇಶದ ವೈನ್ ಉದ್ಯಮಗಳಲ್ಲೇ ಅತ್ಯಂತ ಪ್ರಮಖವಾಗಿದೆ ಮತ್ತು ರಾಜ್ಯವು ಉನ್ನತ ಗುಣಮಟ್ಟದ ವೈನ್ ತಯಾರಿಕೆಯನ್ನು ಆರಂಭಿಸಿದೆ. ಇದರಿಂದಾಗಿ ದೇಶಾದ್ಯಂತ ಹಾಗೂ ಅಂತಾರಾಷ್ಟ್ರೀಯವಾಗಿ ತಮ್ಮ ಬ್ರಾಂಡ್ ನ ಅಸ್ತಿತ್ವ ಸಾಧಿಸಲು ಸಾಧ್ಯವಾಗಿದೆ. ಒರಾಯನ್ ವೈನ್ ಫೆಸ್ಟಿವಲ್ ನ 3 ದಿನಗಳ ವೈಭವದ ಕಾರ್ಯಕ್ರಮದಲ್ಲಿ ಈ ಪ್ರದೇಶದ ವಿವಿಧ ವೈನ್ ಗಳನ್ನು ಪ್ರದರ್ಶಿಸುವ ಮೂಲಕ ಕರ್ನಾಟಕದ ವೈನ್ ಪರಂಪರೆಯನ್ನು ತೆರೆದಿಡಲಾಯಿತು.

Orion Mall Wine festival 2015 successfully concluded

ಚೀಸ್ ಟೇಸ್ಟಿಂಗ್, ಗ್ರೇಪ್ ಸ್ಟಾಂಪಿಂಗ್, 20ಕ್ಕೂ ಹೆಚ್ಚು ಬ್ರಾಂಡ್ ಗಳ ಮಾರಾಟ ಮತ್ತು ಪ್ರವರ್ತನೆ, ವೈನ್ ಮತ್ತು ಚೀಸ್ ಮಾಸ್ಟರ್ ಕ್ಲಾಸಸ್, ಸೈಂಟಿಲಾಟಿಂಗ್ ಮ್ಯೂಸಿಕ್ ಮತ್ತು ಡ್ಯಾನ್ಸ್ ಕಾರ್ಯಕ್ರಮ ಮತ್ತು ಆಹಾರದ ಸ್ಟಾಲ್ ಗಳ ಸಾಲು ಒಂದು ಸ್ಥಳೀಯ ಉತ್ಸವದ ಕಳೆ ಪ್ರಮುಖ ಆಕರ್ಷಣೆಯಾಗಿತ್ತು.

ವಿಶಾಲ್ ಮಿರ್ಚಂದಾನಿ, ಸಿಇಒ- ರಿಟೈಲ್ ಮತ್ತು ಕಮರ್ಷಿಯಲ್ ಬ್ರಿಗೇಡ್ ಗ್ರೂಪ್, ಮಾತನಾಡಿ, "ವೈನ್ ಕುಡಿಯುವ ಸಂಸ್ಕೃತಿ ಮತ್ತು ವೈನ್ ಟೂರಿಸಂ ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ; ಜತೆಗೆ ಇದು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ." ಎಂದರು. (ಒನ್ಇಂಡಿಯಾ ಕನ್ನಡ)

English summary
The much awaited Orion Wine Festival 2015 in association with the Karnataka Wine Board with over 15 Indian & International brands, successfully concluded, which held from 23rd to 25th January 2015 at the Lakeside, Brigade Gateway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X