ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.14, 15ರಂದು ಬೆಂಗ್ಳೂರಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ

|
Google Oneindia Kannada News

ಬೆಂಗಳೂರು, ಜನವರಿ. 13 : ಜನವರಿ 14 ಮತ್ತು 15 ರಂದು ಜೆ.ಪಿ ನಗರದ ದುರ್ಗಾಪರಮೇಶ್ವರಿ ಆಟದ ಮೈದಾನ (ರಂಗಶಂಕರ ಹತ್ತಿರ)ದಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ.

ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ ಸಾವಯವ ಉತ್ಪನ್ನಗಳ ಹಾಗೂ ಸಣ್ಣ ಸಿರಿಧಾನ್ಯಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೃಷಿ ಇಲಾಖೆ ಬೆಂಗಳೂರು ಜಿಲ್ಲೆ, ಜೈವಿಕ್ ಕೃಷಿಕ್ ಸೋಸೈಟಿ ರಿ ಸಹಯೋಗಲ್ಲಿ ಈ ಮೇಳವನ್ನು ನಡೆಸಲಾಗುತ್ತಿದೆ.

ರೈತರು ತಾವು ಬೆಳೆದ ಗುಣಮಟ್ಟದ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳನ್ನು ತಮ್ಮ ನೋಂದಾಯಿತ ಸಂಘಗಳ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಈ ಮೇಳ ಅನುವು ಮಾಡಿಕೊಡಲಿದೆ.

Organic and Siridhanya fair in jp nagar bengaluru on January 14 to 15

ಗ್ರಾಹಕರು ವಿವಿದ ರೀತಿಯ ಸಾವಯವ ಮತ್ತು ಸಿರಿಧಾನ್ಯ ಪದಾರ್ಥಗಳನ್ನು ಒಂದೇ ಸ್ಥಳದಲ್ಲಿ ಖರೀದಿಸಬಹುದಾಗಿದೆ. ಹಾಗೂ ಸಾವಯವ ಮತ್ತು ಸಿರಿಧಾನ್ಯ ಪದಾರ್ಥಗಳ ಗುಣಮಟ್ಟದ ಬಗ್ಗೆ ನೇರವಾಗಿ ಉತ್ಪಾದಕರು ಹಾಗೂ ಸರಬರಾಜುದಾರರೊಂದಿಗೆ ವಿಚಾರ ವಿನಿಯಕ್ಕೂ ಇಲ್ಲಿ ಅವಕಾಶವಿದೆ.

ದಿನಾಂಕ 14 ರಂದು ಪ್ರಾರಂಭವಾಗಲಿರುವ ಈ ಮೇಳದಲ್ಲಿ ಮಾನ್ಯ ಸಂಸದೀಯ ವ್ಯವಹಾರಗಳು, ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಅನಂತಕುಮಾರ್, ಕೃಷಿ ಸಚಿವ ಕೃಷ್ಣ ಭೈರೇಗೌಡ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್ ಜಯಕುಮಾರ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
1. ಹೆಚ್ ಆರ್ ಗುರುದತ್ - ಕಾರ್ಯನಿರ್ವಹಣಾ ಅಧಿಕಾರಿ ಜೈವಿಕ್ ಕೃಷಿ ಸೊಸೈಟಿ ಮೊ: 9448182516
2. ಮಂಜಪ್ಪ ಹೆಚ್, ಕೃಷಿ ಸಹಾಯಕ ನಿರ್ದೇಶಕರು, ಮೊ: 8277929921
3. ಅರುಣ್‍ಕುಮಾರ್ ಹೆಚ್ ವಿ, ಮೊ: 99453 50505

English summary
Bengaluru agricultural department organized Organic and Siridhanya fair at Durga Parameshwari Temple ground, JP Nagar 2nd stage, Bengaluru on January 14 to 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X