ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸಿರು ಬೆಂಗಳೂರಿಗಾಗಿ 'ಬಿಬಿಎಂಪಿ ಗ್ರೀನ್' ಆ್ಯಪ್, ನೀವೂ ಗಿಡ ನೆಡಿ

ಸಾರ್ವಜನಿಕ ಸಹಭಾಗಿತ್ವದಲ್ಲಿ ಬಿಬಿಎಂಪಿ 'ಆ್ಯಪ್' ಮೂಲಕ ನಗರದಾದ್ಯಂತ 10 ಲಕ್ಷ ಮರಗಳನ್ನು ನೆಡಲು ಮುಂದಾಗಿದೆ. ಅದರಂತೆ ಇಂದು ‘ಬಿಬಿಎಂಪಿ ಗ್ರೀನ್’ ಎಂಬ ಆ್ಯಪ್ ಉದ್ಘಾಟನೆಯಾಗಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 21: ಮಳೆಗೆ ಮರಗಳು ಒಂದೊಂದಾಗಿ ಧರೆಗುರುಳುತ್ತಿದ್ದರೆ ಬೆಂಗಳೂರಿನ ಉದ್ಯಾನನಗರಿ ಖ್ಯಾತಿಯನ್ನು ಉಳಿಸಿಕೊಳ್ಳಲು ಬಿಬಿಎಂಪಿ ನೂತನ ಯೋಜನೆ ಹಾಕಿಕೊಂಡಿದೆ. ನಗರವನ್ನು ಮತ್ತೆ ಹಸಿರಿನಿಂದ ಕಂಗೊಳಿಸುವಂತೆ ಮಾಡುವುದು ಈ ಯೋಜನೆಯ ಉದ್ದೇಶ.

ಸಾರ್ವಜನಿಕ ಸಹಭಾಗಿತ್ವದಲ್ಲಿ ಬಿಬಿಎಂಪಿ 'ಆ್ಯಪ್' ಮೂಲಕ ನಗರದಾದ್ಯಂತ ಮರಗಳನ್ನು ನೆಡಲು ಮುಂದಾಗಿದೆ. ಅದರಂತೆ ಇಂದು 'ಬಿಬಿಎಂಪಿ ಗ್ರೀನ್' ಎಂಬ ಆ್ಯಪ್ ಉದ್ಘಾಟನೆಯಾಗಿದೆ.[ಪ್ರವಾಹ ತಡೆಗೆ ಬಿಬಿಎಂಪಿಯಿಂದ 61 ಕಂಟ್ರೋಲ್ ರೂಂ]

ಬೆಳಗ್ಗೆ 8 ಗಂಟೆಗೆ ಕಬ್ಬನ್ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಆ್ಯಪನ್ನು ನಟ ಯಶ್ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ಲೋಕಾರ್ಪಣೆಗೊಳಿಸಿದ್ದಾರೆ. ನಗರದಲ್ಲಿ ಹತ್ತು ಲಕ್ಷ ಸಸಿಗಳನ್ನು ನೆಡುವ ಗುರಿಯೊಂದಿಗೆ ಈ ಆ್ಯಪ್ ಬಿಡುಗಡೆಯಾಗಿದೆ.

 ಡೌನ್ಲೋಡ್ ಮಾಡುವುದು ಹೀಗೆ

ಡೌನ್ಲೋಡ್ ಮಾಡುವುದು ಹೀಗೆ

ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಲಿಂಕ್ ಕ್ಲಿಕ್ ಮಾಡಿದರೆ ನಿಮಗೆ ಬಿಬಿಎಂಪಿ ಗ್ರೀನ್ ಆ್ಯಪ್ ಸಿಗುತ್ತದೆ. ಇದು ಕೇವಲ 2.4 ಎಂಬಿಯಷ್ಟಿದೆ. ಈಗಾಗಲೇ ಆ್ಯಪ್ ನ್ನು 100 ಜನ ಡೌನ್ಲೋಡ್ ಮಾಡಿಕೊಂಡಿದ್ದಾರೆ.

ನೋಂದಣಿ

ನೋಂದಣಿ

ನಂತರ ನಿಮ್ಮ ಹೆಸರು ಮತ್ತು ಫೋನ್ ನಂಬರ್ ನೀಡಿ ನೋಂದಣಿ ಮಾಡಿಕೊಳ್ಳಬೇಕು. ನಂತರವಷ್ಟೇ ಆ್ಯಪ್ ಕಾರ್ಯಾರಂಭ ಮಾಡಲಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಈ ಆ್ಯಪ್ ಇದ್ದು ನಿಮ್ಮ ಇಷ್ಟದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

 6 ಬಗೆಯ ಸಸಿ

6 ಬಗೆಯ ಸಸಿ

ನಂತರ ಪರದೆಯ ಮೇಲೆ ಒಟ್ಟು 16 ಬಗೆಯ ಸಸಿಗಳ ಪಟ್ಟಿ ಪರದೆ ಮೇಲೆ ಕಾಣಿಸಿಕೊಳ್ಳುತ್ತವೆ. ಹೊಂಗೆ, ಮಹಾಗನಿ, ಕಾಡು ಬಾದಾಮಿ, ತಪಸಿ, ನೇರಳೆ, ನೆಲ್ಲಿ, ಹೊಳೆ ದಾಸವಾಳ, ಬೇವು, ಹೂವರಸಿ, ತಬೂಬಿಯಾ, ಚೆರ್ರಿ, ಬಸವನಪಾದ, ಸಂಪಿಗೆ, ಜಕರಾಂಡ, ತಬೂಬಿಯಾ ಗೈಕಾನಾ, ಸೀಮರೂಬಾ ಸಸಿಗಳು ಆಪ್ ನಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ತಮಗಿಷ್ಟದ ಗಿಡಗಳನ್ನು ಸಾರ್ವಜನಿಕರು ಬುಕ್ ಮಾಡಬಹುದು.

ನಗರ ಪರಿಸರಕ್ಕೆ ಸೂಕ್ತವಾಗುವಂಥ ಸಸಿಗಳನ್ನು ಅರಣ್ಯ ಇಲಾಖೆಯೇ ಗುರುತಿಸಿ ಈ ಪಟ್ಟಿ ಅಂತಿಮಗೊಳಿಸಿದೆ. ಒಮ್ಮೆಗೆ ಒಂದು ಬಗೆಯ ಗರಿಷ್ಠ 50 ಸಸಿಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳಬಹುದು. ಒಬ್ಬರಿಗೆ ಒಮ್ಮೆಗೆ ಗರಿಷ್ಠ 750 ಗಿಡಗಳನ್ನು ನೀಡಲಾಗುತ್ತದೆ.

 ವಾರ್ಡ್ ಸೂಚಿಸಿ

ವಾರ್ಡ್ ಸೂಚಿಸಿ

ಸಸಿಗಳನ್ನು ಕಾಯ್ದಿರಿಸಿದ ನಂತರ ಸಾರ್ವಜನಿಕರು ವಾರ್ಡ್ ಯಾವುದು ಎಂಬುದನ್ನು ಪರದೆಯಲ್ಲಿ ಗುರುತಿಸಬೇಕು. ನಂತರ ಪರದೆ ಮೇಲೆ ಮೂಡುವ ನಕ್ಷೆಯಲ್ಲಿ ಸಾರ್ವಜನಿಕರು ಸಸಿಗಳನ್ನು ನೆಡಲು ಉದ್ದೇಶಿಸಿರುವ ಸ್ಥಳವನ್ನು ಗುರುತು ಹಾಕಬೇಕು. ಸಸಿ ನೆಟ್ಟಿರುವ ಸ್ಥಳವು ನಕ್ಷೆಯಲ್ಲಿ ನಮೂದಾಗುವುದರಿಂದ ಬಿಬಿಎಂಪಿಗೆ ಗಿಡಗಳ ನಿಖರ ಮಾಹಿತಿ ಲಭಿಸುತ್ತದೆ

 ಜಸ್ಟ್ ಸಬ್ಮಿಟ್

ಜಸ್ಟ್ ಸಬ್ಮಿಟ್

ಗುರುತು ಹಾಕಿದ ನಂತರ ಸಬ್ಮಿಟ್ ಕೊಟ್ಟರೆ ನಿಮ್ಮ ಗಿಡಗಳು ರೆಡಿ. ಸಬ್ಮಿಟ್ ನೀಡುವಾಗಲೇ ನೀವು ಆಯ್ಕೆ ಮಾಡಿಕೊಂಡ ಸ್ಥಳದ ವಿಳಾಸ, ನೋಂದಣಿ ಸಂಖ್ಯೆ ಕಾಣಿಸಿಕೊಳ್ಳುತ್ತದೆ. ನಂತರ ಸಾರ್ವಜನಿಕರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿರುವ ತಾವು ಆಯ್ದುಕೊಂಡ ಉದ್ಯಾನವನಕ್ಕೆ ತೆರಳಿ ಕಾಯ್ದಿರಿಸಿದ ಸಸಿಗಳನ್ನು ಪಡೆಯಬಹುದು. ಸಸಿಗಳು ಪಡೆಯುವಾಗ ಻ತಮಗೆ ನೀಡಲಾಗಿರುವ ನೋಂದಣಿ ಸಂಖ್ಯೆಯನ್ನು ನರ್ಸರಿಯವರಿಗೆ ನೀಡಬೇಕು. ಬುಕ್ ಮಾಡಿದ 3 ದಿನಗಳೊಳಗೆ ಸಸಿಗಳು ಸಿಗಲಿವೆ.

 ನಿಮಗಾಗಿ ಕಾದಿವೆ 10.5 ಲಕ್ಷ ಸಸಿಗಳು

ನಿಮಗಾಗಿ ಕಾದಿವೆ 10.5 ಲಕ್ಷ ಸಸಿಗಳು

ಈಗಾಗಲೇ ಬಿಬಿಎಂಪಿಗೆ ಸೇರಿದ ವಿವಿಧ ವಲಯಗಳಲ್ಲಿರುವ ನರ್ಸರಿಗಳಲ್ಲಿ ಮೂರು ಹಾಗೂ ಐದು ಅಡಿ ಎತ್ತರಕ್ಕೆ ಸಸಿಗಳನ್ನು ಬೆಳೆಸಲಾಗಿದೆ. ಪೂರ್ವ ವಲಯದ ಕೆಂಪಾಪುರ ನರ್ಸರಿಯಲ್ಲಿ 3.5 ಲಕ್ಷ, ಯಲಹಂಕದ ಅಟ್ಟೂರಿನಲ್ಲಿ 2.5 ಲಕ್ಷ, ಪಶ್ಚಿಮ ವಲಯದ ಸುಮನಹಳ್ಳಿಯಲ್ಲಿ 45 ಸಾವಿರ , ರಾಜರಾಜೇಶ್ವರಿನಗರದ ಜ್ಞಾನಭಾರತಿ ಆವರಣದ ನರ್ಸರಿಯಲ್ಲಿ 1.8 ಲಕ್ಷ ಹಾಗೂ ಬೊಮ್ಮನಹಳ್ಳಿ ಕೂಡ್ಲು ಮತ್ತು ಹೆಸರಘಟ್ಟದ ನರ್ಸರಿಯಲ್ಲಿ 2.25 ಲಕ್ಷ ಗಿಡಗಳಿವೆ. ಹೀಗೆ ಒಟ್ಟು 10.5 ಲಕ್ಷ ಸಸಿಗಳು ಸಿದ್ದವಾಗಿವೆ.

ಕಳೆದ 2016-17ನೇ ವರ್ಷದಲ್ಲಿ ಒಟ್ಟು 1.17 ಲಕ್ಷ ಸಸಿ ನೆಡಲಾಗಿದೆ. ಇದೀಗ 10 ಲಕ್ಷ ಸಸಿ ನೆಡುವ ಗುರಿ ಹಾಕಿಕೊಳ್ಳಲಾಗಿದೆ.

 ನಿಮಗಿದೆ ಪ್ರಶಸ್ತಿ

ನಿಮಗಿದೆ ಪ್ರಶಸ್ತಿ

'ಬಿಬಿಎಂಪಿ ಗ್ರೀನ್' ಆ್ಯಪ್ ಮೂಲಕ ಗಿಡ ಪಡೆದು ನೆಟ್ಟವರಿಗೆ ಬಿಬಿಎಂಪಿ ಪ್ರಶಸ್ತಿಯೂ ನೀಡಲಿದೆ. ಆದರೆ ಎಲ್ಲರಿಗೂ ಅಲ್ಲ; ಹೆಚ್ಚಿನ ಗಿಡ ನೆಟ್ಟು ಉತ್ತಮವಾಗಿ ಪೋಷಿಸುವವರಿಗೆ ಮುಂದಿನ ಬಾರಿ ನಡೆಯುವ ವನಮಹೋತ್ವದಲ್ಲಿ 'ಗ್ರೀನ್ ವಾರಿಯರ್' ಎಂಬ ಬಿರುದು, ಪ್ರಮಾಣಪತ್ರ ನೀಡಿ ಸನ್ಮಾನಿಸಲಾಗುತ್ತದೆ.

ಅದಮ್ಯ ಚೇತನದಿಂದಲೂ ಗಿಡ ನೆಡುವ ಕಾರ್ಯಕ್ರಮ

ಅದಮ್ಯ ಚೇತನದಿಂದಲೂ ಗಿಡ ನೆಡುವ ಕಾರ್ಯಕ್ರಮ

ಇನ್ನು ಅದಮ್ಯ ಚೇತನ ಸಂಸ್ಥೆಯಿಂದ ಪ್ರತಿ ಭಾನುವಾರದಂತೆ ಇಂದೂ ಕೂಡ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಸಚಿವ ಅನಂತ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದು ನಡೆದ ಕಾರ್ಯಕ್ರಮದಲ್ಲಿ 4ನೇ ಮುಖ್ಯ ರಸ್ತೆ, ನಾಗೇಂದ್ರ ಬ್ಲಾಕ್, ಬೆಂಗಳೂರಿನಲ್ಲಿ 73 ಗಿಡಗಳನ್ನು ನೆಡಲಾಯಿತು.

{promotion-urls}

English summary
Bruhat Bengaluru Mahanagara Palike (BBMP) has developed an Android app, ‘BBMP Green’, which citizens can use to place orders for saplings to plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X