ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಜೀವಂತ ಹೃದಯ ಸಾಗುತ್ತಿದೆ ದಾರಿ ಬಿಡಿ

By Super Admin
|
Google Oneindia Kannada News

ಬೆಂಗಳೂರು, ಜುಲೈ 31 : ಬೆಂಗಳೂರು ಇಂದು ಮತ್ತೊಂದು ಜೀವಂತ ಹೃದಯ ಸಾಗಣೆಗೆ ಸಾಕ್ಷಿಯಾಗಲಿದೆ. ಯಶವಂತಪುರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಸಂಚಾರಿ ಪೊಲೀಸರು ಆಂಬ್ಯುಲೆನ್ಸ್ ಸಂಚಾರಕ್ಕಾಗಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದಾರೆ.

ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯ ಸಾಗಣೆ ಮಾಡಲಾಗುತ್ತದೆ. 17 ವರ್ಷದ ಯುವಕನ ಹೃದಯವನ್ನು 43 ವರ್ಷದ ವ್ಯಕ್ತಿಗೆ ಆಳವಡಿಸಲಾಗುತ್ತದೆ. [ಅಂಗಾಂಗ ದಾನ ಮಾಡಿ ನಾಲ್ವರಿಗೆ ಮರು ಜೀವ ನೀಡಿದರು]

heart

ಅಂದಹಾಗೆ ಕಳೆದ ಗುರುವಾರ ಮತ್ತು ಭಾನುವಾರ ಬೆಂಗಳೂರು ಎರಡು ಜೀವಂತ ಹೃದಯ ಸಾಗಣೆಗೆ ಸಾಕ್ಷಿಯಾಗಿತ್ತು. ಜುಲೈ 23ರ ಗುರುವಾರ ಮಂಡ್ಯ ಮೂಲದ 22 ವರ್ಷದ ಚೇತನ್ ಹೃದಯವನ್ನು ದಾನ ಮಾಡಿದ್ದರು. ಸಾಗರ್ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಲಾಗಿತ್ತು. [ಸಾವಿನ ಬಳಿಕ ಮತ್ತೊಂದು ಜೀವಕ್ಕೆ ಚೇತನ ತುಂಬಿದ ಚೇತನ್]

ಜುಲೈ 26 ಭಾನುವಾರ ಬನ್ನೇರುಘಟ್ಟ ರಸ್ತೆಯ ಸಾಗರ್ ಆಸ್ಪತ್ರೆಯಿಂದ ಹೊಸೂರು ರಸ್ತೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಲಾಗಿತ್ತು. ಚೆನ್ನೈ ಮೂಲದ ಇಳವರಸನ್ (32) ತಮ್ಮ ಹೃದಯ, ಕಿಡ್ನಿ, ಕಣ್ಣು, ಲೀವರ್‌ ದಾನ ಮಾಡಿದ್ದರು.

Dear Friends,BTP making another signal free Corridor to transport "LIVE HEART" today around 11AM. The LIVE HEART is...

Posted by Bengaluru Traffic Police onThursday, July 30, 2015

ಹೃದಯ ದಾನದ ಪ್ರಕರಣಗಳು

* 2014ರಲ್ಲಿ ಎರಡು ಬಾರಿ ಬೆಂಗಳೂರಿನಿಂದ ಚೆನ್ನೈಗೆ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು
* 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಬಿಜಿಎಸ್ ಆಸ್ಪತ್ರೆಗೆ ಹೃದಯ ಸಾಗಣೆ ಮಾಡಲಾಗಿತ್ತು
* 2015ರ ಫೆ. 28ರಂದು ಬೆಂಗಳೂರಿನಿಂದ ಹೈದರಾಬಾದ್‌ ಜೀವಂತ ಹೃದಯವನ್ನು ಸಾಗಣೆ ಮಾಡಲಾಗಿತ್ತು
* 2015ರ ಏ.13ರಂದು ಮಂಗಳೂರಿನಿಂದ ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿತ್ತು
* 2015ರ ಜುಲೈ 23ರಂದು ಚೇತನ್ ಹೃದಯವನ್ನು ದಾನ ಮಾಡಲಾಗಿತ್ತು
* 2015ರ ಜುಲೈ 26ರಂದು ಇಳವರಸನ್ ಹೃದಯ ದಾನ ಮಾಡಿದ್ದರು.

English summary
Bengaluru to witness for one more live heart transplant on Friday, July 31, 2015. Heart transported from Columbia Asia hospital Yeshwanthpur to Narayana Hrudayalaya at Hosuru road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X