ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ನಿಲ್ದಾಣಗಳಲ್ಲಿ ಇನ್ನು ಮುಂದೆ ಓಲಾ, ಉಬರ್ ಸೇವೆ

ಮೆಟ್ರೋ ಪ್ರಯಾಣಿಕರಿಗೆ ತಮ್ಮ ತಮ್ಮ ಪ್ರದೇಶಗಳಿಗೆ ಪ್ರಯಾಣಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಿಲ್ದಾಣಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಚಾಲನೆ ನೀಡಲಾಗಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 24: ಮೆಟ್ರೋ ಪ್ರಯಾಣಿಕರಿಗೆ ತಮ್ಮ ತಮ್ಮ ಪ್ರದೇಶಗಳಿಗೆ ಪ್ರಯಾಣಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಿಲ್ದಾಣಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಚಾಲನೆ ನೀಡಲಾಗಿದೆ.

'ಲಾಸ್ಟ್ ಮೈಲ್ ಕನೆಕ್ಟಿವಿಟಿ' ಹೆಸರಿನಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಉಬರ್ ಮತ್ತು ಓಲಾ ತಮ್ಮ ಸೇವೆ ಆರಂಭಿಸಿವೆ.

ಈಗಾಗಲೇ 7 ನಿಲ್ದಾಣಗಳಲ್ಲಿ ಓಲಾ ತನ್ನ ಸೇವೆ ಆರಂಭಿಸಿದೆ. ಇಂದು ಉಬರ್ ಕ್ಯಾಬ್ ಸೇವೆಗಳಿಗೆ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಚಾಲನೆ ನೀಡಿದ್ದಾರೆ.[ಓಲಾ, ಉಬರ್ ಗೆ ಸಡ್ಡು ಹೊಡೆಯಲು ಬರ್ತಿದೆ 'ಎಚ್.ಡಿ.ಕೆ ಕ್ಯಾಬ್ಸ್'!]

Ola, Uber service started in Metro stations

ಕಳೆದ ಡಿಸೆಂಬರಿನಲ್ಲಿ 30 ಮೆಟ್ರೋ ನಿಲ್ದಾಣಗಳಲ್ಲಿ ಕಿಯೋಸ್ಕ್ ಸೇವೆ ಸ್ಥಾಪನೆ ಮಾಡಲು ಬಿಎಂಆರ್'ಸಿಎಲ್ ಟೆಂಡರ್ ಕರೆದಿತ್ತು. ಅದರಂತೆ ಟೆಂಡರಿನಲ್ಲಿ ಭಾಗವಹಿಸಿದ್ದ ಓಲಾ ಮತ್ತು ಉಬರ್ ತಮಗೆ ಇಷ್ಟ ಬಂದ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡಿದ್ದವು. ಇದೀಗ ಈ ನಿಲ್ದಾಣಗಳಲ್ಲಿ ತಮ್ಮ ಸೇವೆಯನ್ನು ಆರಂಭಿಸಿವೆ.[ದೈತ್ಯ ಓಲಾ, ಉಬರ್ ಗೆ ಸಡ್ಡು ಹೊಡೆಯಲು ಚಾಲಕರಿಂದ ಮಾಸ್ಟರ್ ಪ್ಲಾನ್!]

ಇದರಿಂದ ಇನ್ನು ಮುಂದೆ ಆ್ಯಪ್ ಇಲ್ಲದಿದ್ದರೂ ಮೆಟ್ರೋ ನಿಲ್ದಾಣದಲ್ಲೇ ಟಾಕ್ಸಿ ಬುಕ್ ಮಾಡಬಹುದು. ಕಂಪೆನಿಗಳ ಕಿಯೋಸ್ಕ್ ಗೆ ಹೋಗಿ ಅಲ್ಲಿ ಬುಕ್ ಮಾಡಿ ಟ್ಯಾಕ್ಸಿಗಳನ್ನು ಪಡೆಯಬಹುದು.

English summary
App based cab aggregates Ola and Uber started their service in all Metro station in Bengaluru. Which will help to the travelers to reach their destination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X