ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗ್ಳೂರು ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಬಸ್ ಪಲ್ಟಿ

ಭಾರೀ ಟ್ರಾಫಿಕ್ ಇದ್ದ ಕಾರಣ ಗೊಂದಲಕ್ಕೊಳಗಾದ ಡ್ರೈವರ್ ನಿಂದಾಗಿ ಆಯ ತಪ್ಪಿದ ಬಸ್, ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ.

|
Google Oneindia Kannada News

ಬೆಂಗಳೂರು, ಫೆಬ್ರವರಿ 2: ನಗರದ ಕೆಪಿ ಅಗ್ರಹಾರದಲ್ಲಿರುವ ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿನಿಯರನ್ನು ಅವರ ಹಾಸ್ಟೆಲ್ ಗೆ ಬಿಡಲು ಹೋಗುತ್ತಿದ್ದ ಅದೇ ಕಾಲೇಜಿನ ಬಸ್, ವೆಸ್ಟ್ ಆಫ್ ಕಾರ್ಡ್ ರೇಡಿನಲ್ಲಿ ಪಲ್ಟಿ ಹೊಡೆದ ಘಟನೆ ಗುರುವಾರ ಮಧ್ಯಾಹ್ನ ಜರುಗಿದೆ.

ಘಟನೆಯಲ್ಲಿ ನಾಲ್ವರು ನರ್ಸಿಂಗ್ ವಿದ್ಯಾರ್ಥಿಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಬಸ್ ನ ಅಕ್ಕಪಕ್ಕದಲ್ಲಿ ಸಾಗುತ್ತಿದ್ದ ವಾಹನ ಸವಾರರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Nursing college bus overturns in Bengaluru west of chord road

ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿನಿಯರು ಇತ್ತೀಚೆಗೆ ಗುಜರಾತ್ ರಾಜ್ಯಕ್ಕೆ ಪ್ರವಾಸಕ್ಕೆಂದು ತೆರಳಿದ್ದರು. ಇಂದು ಮಧ್ಯಾಹ್ನ ಸುಮಾರಿಗೆ ನಗರದ ಮೆಜೆಸ್ಟಿಕ್ ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದರು. ಅವರನ್ನು ಅವರಿದ್ದ ಹಾಸ್ಟೆಲ್ ಗೆ ಡ್ರಾಪ್ ಮಾಡಲು ಅವರು ವ್ಯಾಸಂಗ ಮಾಡುತ್ತಿರುವ ನರ್ಸಿಂಗ್ ಕಾಲೇಜಿನ ಬಸ್ ಬಂದಿತ್ತು.

ನರ್ಸಿಂಗ್ ವಿದ್ಯಾರ್ಥಿನಿಯರನ್ನು ಹತ್ತಿಸಿಕೊಂಡ ನಂತರ, ಬಸ್, ಮಾಗಡಿ ರಸ್ತೆಯ ಕಡೆಯಿಂದ ವೆಸ್ಟ್ ಆಫ್ ಕಾರ್ಡ್ ರೋಡಿಗೆ ಹೊರಳಿತ್ತು. ಆ ವೇಳೆ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಇದ್ದ ಕಾರಣ ಗೊಂದಲಕ್ಕೊಳಗಾದ ಡ್ರೈವರ್ ನಿಂದ ನಿಯಂತ್ರಣ ತಪ್ಪಿದ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಆನಂತರ ಪಲ್ಟಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಡರ್ ಗೆ ಡಿಕ್ಕಿ ಹೊಡೆದು ಉರುಳಿತು.

English summary
Four students of a nursing college were injured and 40 others had a narrow escape when a moving bus overturned in west of chord road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X