ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ನಾಗಾಲ್ಯಾಂಡ್ ಬಂಡುಕೋರನ ಬಂಧನ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 26 : ಬೆಂಗಳೂರಿನಲ್ಲಿ ನಿಷೇಧಿತ ಎನ್‌ಎಸ್‌ಸಿಎನ್‌ಕೆ ಸಂಘಟನೆಯ ಕಮಾಂಡರ್ ಆಟೋಷೆ ಚೋಪೆಯನ್ನು ಬಂಧಿಸಲಾಗಿದೆ. 12 ವರ್ಷಗಳ ಹಿಂದೆ ಈ ಸಂಘಟನೆಯನ್ನು ನಿಷೇಧಿಸಲಾಗಿದ್ದು, ಚೋಪೆ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದ.

ರಾಷ್ಟ್ರೀಯ ತನಿಖಾದಳ ಮತ್ತು ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಎಂ.ಜಿ.ರಸ್ತೆಯ ಸಮೀಪದ ಲಾಡ್ಜ್‌ನಲ್ಲಿ ಆಟೋಷೆ ಚೋಪೆಯನ್ನು (57) ಬಂಧಿಸಿದ್ದಾರೆ. ಚೋಪೆ ನಿಷೇಧಿತ ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಸಂಘಟನೆಗೆ ಸೇರಿದವನಾಗಿದ್ದಾನೆ. [ಬೆಂಗಳೂರಿನಲ್ಲಿ ಶಂಕಿತ ಬೋಡೋ ಉಗ್ರನ ಬಂಧನ]

nia

ಚೋಪೆ 2015ರ ಮಾರ್ಚ್ 26ರಂದು ಕೋಹಿಮಾದ ಇಂದಿರಾಗಾಂಧಿ ಸ್ಟೇಡಿಯಂ ಬಳಿ ಅಸ್ಸಾಂ ರೈಫಲ್ಸ್ ಸೇನಾ ಯೋಧರ ಮೇಲೆ ನಡೆದ ದಾಳಿಯ ಪ್ರಮುಖ ಆರೋಪಿಯಾಗಿದ್ದಾನೆ. ನಾಗಾಲ್ಯಾಂಡ್‌ನ ಜುಹೆಬೋಟೋ ಜಿಲ್ಲೆಯ ನಿವಾಸಿಯಾದ ಚೋಪೆ ಎನ್‌ಎಸ್‌ಸಿಎನ್‌ಕೆ ಸಂಘಟನೆಯ ಕಮಾಂಡರ್ ಆಗಿದ್ದ ಎಂದು ತಿಳಿದುಬಂದಿದೆ. [ಬೆಂಗ್ಳೂರಲ್ಲಿ ಸಿಕ್ತು ಮಣಿಪುರ ಉಗ್ರನ 1 ಕೋಟಿ ಹಣ]

ಈ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಲೆಮರೆಸಿಕೊಂಡಿರುವ ನಾಲ್ವರಿಗಾಗಿ ಶೋಧ ನಡೆಸುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಬೆಂಗಳೂರು ಪೊಲೀಸರ ಸಹಕಾರದಿಂದ ದಾಳಿ ನಡೆಸಿ, ಎಂ.ಜಿ.ರಸ್ತೆ ಬಳಿಯ ಲಾಡ್ಜ್‌ನಲ್ಲಿ ಚೋಪೆಯನ್ನು ಬಂಧಿಸಲಾಗಿದೆ.

ಶುಕ್ರವಾರ ಚೋಪೆಯನ್ನು ಮೊದಲು ವಶಕ್ಕೆ ಪಡೆದುಕೊಂಡ ಎನ್‌ಐಎ ವಿಚಾರಣೆ ನಂತರ ಬಂಧಿಸಿದೆ. ಪ್ರಾಥಮಿಕ ವಿಚಾರಣೆ ವೇಳೆಯೇ ಇಂದಿರಾಗಾಂಧಿ ಸ್ಟೇಡಿಯಂ ಬಳಿ ನಡೆದ ದಾಳಿಯಲ್ಲಿ ತಾನು ಭಾಗಿಯಾಗಿದ್ದೆ ಎಂದು ಚೋಪೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರತ್ಯೇಕ ನಾಗಾಲ್ಯಾಂಡ್‌ ರಾಜ್ಯಕ್ಕಾಗಿ ಬೇಡಿಕೆ ಇಟ್ಟುಕೊಂಡು ಎನ್‌ಎಸ್‌ಸಿಎನ್‌ಕೆ ಸಂಘಟನೆ ಹೋರಾಟ ನಡೆಸುತ್ತಿತ್ತು. ನಂತರ ಸಂಘಟನೆಯನ್ನು ನಿಷೇಧಿಸಲಾಗಿತ್ತು. ಮಾ.26ರಂದು ಇಂದಿರಾಗಾಂಧಿ ಸ್ಟೇಡಿಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಅಸ್ಸಾಂ ರೈಫಲ್ಸ್ ಸೇನೆಯ ಆರು ಮಂದಿ ಯೋಧರ ಮೇಲೆ ದಾಳಿ ನಡೆದಿತ್ತು. ಒಬ್ಬ ಯೋಧ ದಾಳಿಯಲ್ಲಿ ಮೃತಪಟ್ಟಿದ್ದರು.

English summary
In a major breakthrough, based on a secret information the National Investigating Agency arrested one Atoshe Chopey (27 yrs.) a cadre of NSCN(K), who is the prime accused in the terrorist attack on Assam Rifles personnel at Indira Gandhi Stadium, Kohima, Nagaland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X