ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ.20: ಇತಿಹಾಸದಲ್ಲಿ ಈ ದಿನದ ವಿಶೇಷವೇನು?

By Mahesh
|
Google Oneindia Kannada News

ಬೆಂಗಳೂರು, ನ.20: ಗಣ್ಯರ ಹುಟ್ಟುಹಬ್ಬ,ಸಂಸ್ಮರಣಾ ದಿನ, ವಾರ್ಷಿಕೋತ್ಸವ, ಸರ್ಕಾರಿ ಘೋಷಣೆ, ವಿಜಯೋತ್ಸವ ದಿನ ಅಥವಾ ಅತ್ಯಂತ ಘೋರ ದುರಂತ ದಾಖಲಾದ ದಿನ ಹೀಗೆ ಪ್ರತಿ ದಿನಕ್ಕೂ ಅದರದ್ದೇ ಮಹತ್ವವಿರುತ್ತದೆ.

ವಿಶ್ವದ ಇತಿಹಾಸದಲ್ಲಿ ನ.20ರಂದು ನಡೆದಿರುವ ಪ್ರಮುಖ ಘಟನಾವಳಿಗಳತ್ತ ಒಂದು ಸಿಂಹಾವಲೋಕನ ಇಲ್ಲಿದೆ. ಇತಿಹಾಸ ಪುಟಗಳನ್ನು ತಿರುವಿದಾಗ ಕಂಡ ಪ್ರಮುಖ ಅಂಶಗಳನ್ನು ನಿಮ್ಮತ್ತ ನೀಡುವ ಪ್ರಯತ್ನ ಒನ್ ಇಂಡಿಯಾ ತಂಡ ಮಾಡುತ್ತಿದೆ. [ನ.19: ಇತಿಹಾಸದಲ್ಲಿ ಈ ದಿನದ ವಿಶೇಷ?]

1700: ಸ್ವೀಡನ್ನಿನ 17 ವರ್ಷ ವಯಸ್ಸಿನ ರಾಜ ಚಾರ್ಲ್ಸ್ XII ರಷ್ಯನ್ನರ ಮೇಲೆ ನಾರ್ವಾದಲ್ಲಿ ದಿಗ್ವಿಜಯ ಸಾಧಿಸಿದ ದಿನ.

1750:
ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಜನನ.

Tipu Sultan

1789: ಹಕ್ಕಿನ ಕಾಯಿದೆ ಬಗ್ಗೆ ನಿರ್ಣಯ ತೆಗೆದುಕೊಂಡ ಯುಎಸ್ ನ ಮೊದಲ ರಾಜ್ಯ ನ್ಯೂಜೆರ್ಸಿ.

1903:
14 ವರ್ಷ ವಯಸ್ಸಿನ ವಿಲ್ಲಿ ನಿಕೆಲ್ ಹತ್ಯೆಗೈದಿದ್ದ ಬಾಡಿಗೆ ಹಂತಕ ಟಾಮ್ ಹರ್ನ್ ಗಲ್ಲಿಗೇರಿಸಲಾಯಿತು.

1910
: ರಷ್ಯಾದಲ್ಲಿ ಸಾಹಿತಿ ಲಿಯೋ ಟಾಲ್ ಸ್ಟಾಯ್ ಮರಣ ಹೊಂದಿದರು.

1931:
ಜಿನಿವಾದಲ್ಲಿ ಪಾನ್ ಹಾಗೂ ಚೀನಾ ದೇಶಗಳು ಲೀಗ್ ಆಫ್ ಕೌನ್ಸಿಲ್ ನ ನಿರ್ಣಯಗಳನ್ನು ತಿರಸ್ಕರಿಸಿದವು.

1945: ನಾಜಿ ಯುದ್ಧ ಕ್ರೈಂ ವಿಚಾರಣೆ ಜರ್ಮನಿಯ ನ್ಯೂರೆಂಬರ್ಗ್ ನಲ್ಲಿ ಆರಂಭ

1955:
ಭಾರತದ ಕ್ರಿಕೆಟರ್ ಪಾಲಿ ಉಮ್ರಿಗಾರ್ ಭಾರತದ ಪರ ಪ್ರಪ್ರಥಮ ದ್ವಿಶತಕ ಬಾರಿಸಿದರು. ಹೈದರಾಬಾದಿನಲ್ಲಿ ನ್ಯೂಜಿಲೆಂಡ್ ವಿರುದ್ಧ 223 ರನ್ ಚೆಚ್ಚಿದರು.

Today is Thursday, November 20, 2014

1962: ಕ್ಯೂಬಾ ಮೇಲಿದ್ದ ಕ್ಷಿಪಣಿ ನಿರ್ಬಂಧವನ್ನು ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ತೆರವುಗೊಳಿಸಿದರು.

1971:
ಮಾದಕ ದ್ರವ್ಯ ಬೆಳೆಯದಂತೆ ತಡೆಯಲು ಟರ್ಕಿ ದೇಶದ ರೈತರಿಗೆ ಅಮೆರಿಕದಿಂದ 35 ಮಿಲಿಯನ್ ಡಾಲರ್ ನೆರವು.

1975:
ಸ್ಪೇನಿನ ಜನರಲ್ ಫ್ರಾನ್ಸಿಸ್ಕೋ ಫ್ರಾಂಕೋ ನಿಧನ.

1992:
ಇಂಗ್ಲೆಂಡಿನ ವಿಂಡ್ಸರ್ ಕ್ಯಾಸಲ್ ನಲ್ಲಿ ಬೆಂಕಿ ಕಾಣಿಸಿಕೊಂಡು 50 ಮಿಲಿಯನ್ ಪೌಂಡ್ ನಷ್ಟು ಹಾನಿ ಉಂಟಾಯಿತು.

2000:
ಪೆರು ಅಧ್ಯಕ್ಷ ಅಲ್ಬರ್ಟೋ ಫುಜಿಮೋರಿ ರಾಜೀನಾಮೆ ಸಲ್ಲಿಕೆ.

2008:
ಯುಎಸ್ಎ ಆರ್ಥಿಕ ಪರಿಸ್ಥಿತಿ ಕುಸಿತ ಡಾನ್ ಜೋನ್ಸ್ ನಿಂದ ಕೈಗಾರಿಕಾ ಸರಾಸರಿ 11 ವರ್ಷಗಳಲ್ಲೇ ಕುಸಿತ ಕ್ರಮಾಂಕ ಕಂಡಿತು.

English summary
Today is Thursday, November 20, 2014. What happened on this day in history? Oneindia takes a look at the past. Ruler of Mysore Tipu Sultan was born in Devanahalli near modern-day Bangalore and many more interesting facts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X