ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

500 ರು ನೋಟಿನ ಕೊರತೆಗೆ ಕಾರಣವೇನು?

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 26: ರಾಜ್ಯದಲ್ಲಿ 2000 ರು ನೋಟು ಬೇಗನೇ ಬಂತು ಆದರೆ ರು 500
ನೋಟು ಇನ್ನೂ ಯಾಕೆ ಜನರ ಕೈಗೆ ಸರಿಯಾಗಿ ತಲುಪಿಲ್ಲ ಎಂಬುದಕ್ಕೆ ಕಾರಣ ಏನಾದ್ರೂ ಇದಿಯಾ ?

ಖಂಡಿತ ಇದೆ ಅದೇನೆಂದರೆ ಆರ್ ಬಿಐ ನೋಟುಗಳ ಮುದ್ರಣಕ್ಕೆ ದೇಶದಲ್ಲಿ ಇರುವುದು ಎರಡೇ
ಮುದ್ರಣಾಲಯ, ನೋಟುಗಳು ಮುದ್ರಿಸಲು ಸಮಯಬೇಕು ಎಂದು ಹೇಳಿದೆ.[ಇಂದಿನಿಂದ 1000 ರು ನೋಟು ಬಳಕೆಯಿಲ್ಲ, 500ರು ಎಲ್ಲಿ ಬಳಸಬಹುದು?]

Note ban: rs 500 notes not circulating properly

ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್‌ (ಬಿಆರ್ ಬಿಎನ್
ಎಂಪಿಎಲ್) ಅಡಿಯಲ್ಲಿ ಮೈಸೂರು ಮತ್ತು ಪಶ್ಚಿಮ ಬಂಗಾಳದ ಶಾಲಬನಿಯಲ್ಲಿರುವ ನೋಟು
ಮುದ್ರಣಾಲಯಗಳು ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ಬಿಟ್ಟರೆ ಆರ್‌ಬಿಐ ಇತರೆ ನೋಟು
ಮುದ್ರಣಾಲಯಗಳನ್ನು ಹೊಂದಿಲ್ಲ.

ಮೈಸೂರಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ರು 2000 ನೋಟುಗಳ ಮುದ್ರಣದ ಒತ್ತಡ ಹೆಚ್ಚಿದೆ.
ಇನ್ನು ಶಾಲಬನಿಯಲ್ಲಿ 100 ನೋಟುಗಳ ಮುದ್ರಣ ಮಾತ್ರ ಸಾಧ್ಯ. ಈಗ ಮಹಾರಾಷ್ಟ್ರದ ನಾಸಿಕ್
ಮತ್ತು ಮಧ್ಯಪ್ರದೇಶದ ದೇವಾಸ್ ನಲ್ಲಿರುವ ಸರ್ಕಾರಿ ಒಡೆತನದ ಮುದ್ರಣಾಲಯದಲ್ಲಿ ರು 500
ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂದು ಆರ್ ಬಿಐ ತಿಳಿಸಿದೆ.

ಆದರೆ ಇಲ್ಲಿ ಮುದ್ರಣವಾಗುತ್ತಿರುವ ನೋಟಿನ ಪ್ರಮಾಣ ಕಡಿಮೆ ಹೀಗಾಗಿ ದೇಶದೆಲ್ಲೆಡೆ
ಅಲ್ಲಿಂದಲೆ ಸಾಗಿಸಬೇಕಾಗಿರುವುದರಿಂದ ರಾಜ್ಯಕ್ಕೂ ಪೂರೈಕೆಯಾಗುವುದು ಕಡಿಮೆ. ಜೊತೆಗೆ
ಮಹಾರಾಷ್ಟ, ಮಧ್ಯಪ್ರದೇಶದ ಮುದ್ರಣಾಲಯಗಳಲ್ಲಿ ಸಿಬ್ಬಂದಿಯ ಕೊರತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂಕ್ತ ಭದ್ರತೆಯಲ್ಲಿ ಕೆಟ್ಟರಸ್ತೆಗಳಲ್ಲಿ ನೋಟಿನ ಸಾಗಾಟ ಮಾಡುವುದರಿಂದ ಎಲ್ಲ
ರಾಜ್ಯಗಳಿಗೂ ಸಾಗಿಸುವುದು ನಿಧಾನವಾಗುತ್ತಿದೆ ಎಂದು ಆರ್ ಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

English summary
Note ban: rs 500 notes not circulating properly in karnataka, rbi said only two place in india 500 note are printing and some problem in transpotaing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X