ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಕಿ ಹೊತ್ತಿ ಚೀರಾಡುತ್ತಿದ್ದರೂ ಜನರು ನೆರವಿಗೆ ಬರಲಿಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 11 : ಬೆಂಗಳೂರಿನಲ್ಲಿ ಮಾನವೀಯತೆ ಮರೆತ ಪ್ರಸಂಗ ಮತ್ತೊಮ್ಮೆ ನಡೆದಿದೆ. ಬೆಂಕಿ ಹೊತ್ತಿಕೊಂಡ ವ್ಯಕ್ತಿಯೊಬ್ಬ 15 ನಿಮಿಷಗಳ ಕಾಲ ರಸ್ತೆಯಲ್ಲಿ ಸಹಾಯಕ್ಕಾಗಿ ಅಂಗಲಾಚಿದರೂ, ಜನರು ಮೂಕ ಪ್ರೇಕ್ಷಕರಾಗಿದ್ದರು.

ಹೊಸೂರು ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆರ್‌ಇಝಡ್ ಕಂಪನಿಯ ನೌಕರ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ಸಂದರ್ಭದಲ್ಲಿ ಆತನಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅವನು ಜನರ ಸಹಾಯ ಕೇಳಿದರೂ ಆತನಿಗೆ ನೆರವು ಸಿಗಲಿಲ್ಲ. [ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ]

bengaluru

ಸುಮಾರು 15 ನಿಮಿಷ ರಸ್ತೆ ಪಕ್ಕದಲ್ಲಿ ಸಹಾಯಕ್ಕಾಗಿ ವ್ಯಕ್ತ ಕೂಗಿಕೊಳ್ಳುತ್ತಿದ್ದರೂ ಜನರು ಕೈ ಕಟ್ಟಿ ನಿಂತಿದ್ದರು. ನಂತರ ಪಕ್ಕದ ಹೋಟೆಲ್‌ನ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲು ಪ್ರಯತ್ನ ನಡೆಸಿದರೂ, ಆಟೋ ಚಾಲಕರು ಕರೆದುಕೊಂಡು ಹೋಗಲು ನಿರಾಕರಿಸಿದರು.

ಕೊನೆಗೆ ಹರಸಾಹಸ ಪಟ್ಟು ಆತನನ್ನು ರಕ್ಷಣೆ ಮಾಡಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹರೀಶ್ ಮೃತಪಟ್ಟಿದ್ದರು : 2016ರ ಫೆ.16ರಂದು ನೆಲಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿ 4ರ ತಿಪ್ಪಗೊಂಡನಹಳ್ಳಿ ಬಳಿ ನಡೆದ ಅಪಘಾತದಲ್ಲಿ ಎನ್.ಹರೀಶ್ ಎಂಬ ಯುವಕನ ದೇಹ ಎರಡು ಭಾಗವಾಗಿತ್ತು. ಸುಮಾರು 8 ನಿಮಿಷಗಳ ಕಾಲ ರಸ್ತೆಯಲ್ಲಿಯೇ ಒದ್ದಾಡಿ ಅವರು ಮೃತಪಟ್ಟಿದ್ದರು. ಆಗಲೂ ಜನರು ಅವರ ಸಹಾಯಕ್ಕೆ ಬಂದಿರಲಿಲ್ಲ. [ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿದರು]

(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ)

English summary
A man almost died on the street screaming for help in Bengaluru on Monday evening. The incident took place on Hosur road where a man was screaming for help for 15 minutes. The victim was repairing a transformer when it caught fire due to a short circuit, he was soon completely engulfed in flames.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X