ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪ್ರವೇಶಿಸಲು ಬಸ್ಸಿಗೆ ವಿನಾಯಿತಿ?, ಲಾರಿಗೆ ನಿರ್ಬಂಧ

|
Google Oneindia Kannada News

ಬೆಂಗಳೂರು, ಜನವರಿ 30 : ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ 5 ದಿನಗಳ ಕಾಲ ಮಾತ್ರ ಬೆಂಗಳೂರು ನಗರದೊಳಗೆ ಖಾಸಗಿ ಬಸ್, ಲಾರಿಗಳ ಸಂಚಾರಕ್ಕೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಸರ್ಕಾರಿ ಬಸ್ಸುಗಳಿಗೆ ವಿನಾಯಿತಿ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ.

ಮೊದಲು ಫೆ.1 ರಿಂದ 10ರ ತನಕ ಸರ್ಕಾರಿ ಮತ್ತು ಖಾಸಗಿ ಬಸ್, ಲಾರಿಗಳ ಸಂಚಾರ ನಿರ್ಬಂಧಿಸಲು ತೀರ್ಮಾನಿಸಿತ್ತು. ಆದರೆ, ಖಾಸಗಿ ಬಸ್ ಮತ್ತು ಲಾರಿ ಮಾಲೀಕರ ವಿರೋಧದ ಕಾರಣದಿಂದಾಗಿ ನಿಯಮವನ್ನು ಸಡಿಲಿಸಲು ಸಾರಿಗೆ ಇಲಾಖೆ ತೀರ್ಮಾನಿಸಿದೆ. [ಬಸ್ಸುಗಳು ಬೆಂಗಳೂರು ಪ್ರವೇಶಿಸುವಂತಿಲ್ಲ]

ns megharikh

ಕೆಎಸ್ಆರ್‌ಟಿಸಿ ಬಸ್ಸುಗಳ ಸಂಚಾರಕ್ಕೆ ನಿರ್ಬಂಧದಿಂದ ವಿನಾಯಿತಿ ನೀಡುವ ಸಾಧ್ಯತೆ ಇದ್ದು, ಉಳಿದಂತೆ ಖಾಸಗಿ ಬಸ್‌ ಸಂಚಾರ ನಿರ್ಬಂಧಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸ್‌ ಆಯುಕ್ತರು ಮತ್ತು ಸಂಚಾರ ಪೊಲೀಸ್‌ ಆಯುಕ್ತರು ತೀರ್ಮಾನ ಕೈಗೊಳ್ಳಬೇಕಾಗಿದೆ.

ಆಯುಕ್ತ ಆದೇಶ : ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ಫೆಬ್ರವರಿ 1ರಿಂದ 5ರ ತನಕ ಬೆಳಗ್ಗೆ 6 ರಿಂದ ರಾತ್ರಿ 10ಗಂಟೆಯ ತನಕ ನಗರದಲ್ಲಿ ಲಾರಿ ಮತ್ತು ಎಲ್ಲಾ ಬಗೆಯ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ತುಮಕೂರು ಕಡೆಯಿಂದ ಯಶವಂತಪುರ ಆರ್‌ಎಂಸಿಗೆ ಬರುವ ಲಾರಿಗಳನ್ನು ಹೊರತುಪಡಿಸಿ, ಬೆಂಗಳೂರು ನಗರಕ್ಕೆ ಇತರ ಕಡೆಯಿಂದ ಬರುವ ಲಾರಿಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಏರ್‌ಪೋರ್ಟ್‌ ರಸ್ತೆ ಮತ್ತು ಅರಮನೆ ಮೈದಾನದಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಫೆ.1ರಿಂದ 5ರ ತನಕ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯ ತನಕ ಸಣ್ಣ ಮತ್ತು ಮಧ್ಯಮ ಗಾತ್ರದ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಅರಮನೆ ಮೈದಾನದಲ್ಲಿ ಫೆಬ್ರವರಿ 3 ರಿಂದ 5ರವರೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಸಮಾವೇಶದ ವೇಳೆ ನಗರದಲ್ಲಿ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯ ನಿಯಂತ್ರಿಸಲು ಬಸ್ಸು, ಲಾರಿಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. [ಜಿಮ್ ಸಿದ್ಧತೆ ಪರಿಶೀಲಿಸಿದ ಸಿದ್ದರಾಮಯ್ಯ]

ಎಲ್ಲೆಲ್ಲಿ ಸಂಚಾರ ನಿರ್ಬಂಧ

* ಬಳ್ಳಾರಿ ರಸ್ತೆ - ಯಲಹಂಕದಿಂದ ಮೇಖ್ರಿ ವೃತ್ತ
* ರಮಣಮಹರ್ಷಿ ರಸ್ತೆ - ಮೇಖ್ರಿವೃತ್ತದಿಂದ ಕಾವೇರಿ ಜಂಕ್ಷನ್
* ಸ್ಯಾಂಕಿ ರಸ್ತೆ - ರಾಜಭವನದಿಂದ ಯಶವಂತಪುರ ಜಂಕ್ಷನ್
* ಸಿ.ವಿ.ರಾಮನ್ ರಸ್ತೆ - ಐಐಎಸ್‌ಸಿಯಿಂದ ಮೇಖ್ರಿ ವೃತ್ತದ ತನಕ
* ಜಯಮಹಲ್ ರಸ್ತೆ - ಮೇಖ್ರಿವೃತ್ತದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣದ ತನಕ
* ಕನ್ನಿಂಗ್ ಹ್ಯಾಮ್ ರಸ್ತೆ - ಬಾಳೇಕುಂದ್ರಿ ವೃತ್ತದಿಂದ ಲೀ ಮೆರಿಡಿಯನ್ ಹೋಟೆಲ್ ತನಕ
* ಇನ್‌ಫೆಂಟ್ರಿ ರಸ್ತೆ - ಅಲಿ ಆಸ್ಕರ್ ರಸ್ತೆಯಿಂದ ಸಂಚಾರ ಕೇಂದ್ರ ಕಚೇರಿ ತನಕ
* ರಾಜಭವನ ರಸ್ತೆ - ಸಿಟಿಓಯಿಂದ ಬಸವೇಶ್ವರ ವೃತ್ತದ ತನಕ
* ರೇಸ್‌ಕೋರ್ಸ್‌ ರಸ್ತೆ - ಬಸವೇಶ್ವರ ವೃತ್ತದಿಂದ ಆನಂದರಾವ್ ವೃತ್ತದ ತನಕ
* ಕುಮಾರಕೃಪಾ ರಸ್ತೆ - ವಿಂಡ್ಸರ್ ಮ್ಯಾನರ್ ಜಂಕ್ಷನ್‌ನಿಂದ ಶಿವಾನಂದ ವೃತ್ತದ ತನಕ

English summary
Bengaluru police commissioner N.S.Megarik banned entry of truck inside the Bengaluru city from February 1 to 5, 2016, In the light of Invest Karnataka global business meet 2016 to be held at the palace grounds from February 3 to 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X