{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/nilume-website-5th-year-celebration-kannada-book-release-092158.html" }, "headline": "ನಿಲುಮೆಗೆ 5: ಬೌದ್ಧಿಕ ದಾಸ್ಯದಲ್ಲಿ ಭಾರತ ಕೃತಿ ಲೋಕಾರ್ಪಣೆ", "url":"https://kannada.oneindia.com/news/bengaluru/nilume-website-5th-year-celebration-kannada-book-release-092158.html", "image": { "@type": "ImageObject", "url": "http://kannada.oneindia.com/img/1200x60x675/2015/02/28-1425124989-nilume-602.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/02/28-1425124989-nilume-602.jpg", "datePublished": "2015-02-28T17:40:19+05:30", "dateModified": "2015-02-28T17:42:56+05:30", "author": { "@type": "Person", "name": "Mahesh" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "Nilume website is venturing into book publishing world with 5th year annual celebration. The event will be held March 1, Sunday at Mythic Society, Nrupatunga Road, Bengaluru.", "keywords": "Nilume group kannada book release and 5th year celebration, ನಿಲುಮೆಗೆ 5: ಬೌದ್ಧಿಕ ದಾಸ್ಯದಲ್ಲಿ ಭಾರತ ಕೃತಿ ಲೋಕಾರ್ಪಣೆ", "articleBody":"ಬೆಂಗಳೂರು, ಫೆ.28: ನಿಲುಮೆ ವೆಬ್ ತಾಣವು (nilume.net) ಕಳೆದ 5 ವರ್ಷಗಳಿಂದ ಕನ್ನಡ ಅಂತರ್ಜಾಲ ತಾಣದ ಮುಖ್ಯ ವೆಬ್ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಪುಸ್ತಕ ಪ್ರಕಾಶನ ಲೋಕಕ್ಕೆ ಕಾಲಿರಿಸುತ್ತಿದ್ದು, ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಕೃತಿಯನ್ನು ಜನರ ಮುಂದಿಡುತ್ತಿದೆ.ನಿಲುಮೆ ತಾಣವು ಸಮಾಜ ವಿಜ್ಞಾನ, ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕೀಯ, ಕ್ರೀಡೆ, ವಾಣಿಜ್ಯ, ಮನೋರಂಜನೆ,ಪ್ರಚಲಿತ ವಿದ್ಯಾಮಾನಗಳು ಹೀಗೆ ಎಲ್ಲಾ ರೀತಿಯ ಬರಹಗಳಿಗೂ ಮತ್ತು ಮುಖ್ಯವಾಗಿ ನವ ಬರಹಗಾರರಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.ನಾವು ಪ್ರತಿನಿತ್ಯ ನಮ್ಮ ವೆಬ್ ತಾಣದಿಂದ 8 ಸಾವಿರಕ್ಕೂ ಹೆಚ್ಚಿನ ಓದುಗರಿಗೂ ಹಾಗೂ ನಿಲುಮೆ ಫೇಸ್ಬುಕ್ ಗುಂಪಿನ ಮೂಲಕ 20 ಸಾವಿರ ಜನರನ್ನು ತಲುಪುತ್ತಿದೆ. ಇತ್ತೀಚೆಗಷ್ಟೇ ನಿಲುಮೆ ಗುಂಪಿನ ಮೇಲೆ ನಡೆದ ದಾಳಿ ಬಗ್ಗೆ ಓದುಗರಿಗೆ ವಿವರಿಸಿ ಹೇಳಬೇಕಾಗಿಲ್ಲ.ನಿಲುಮೆಯ ಓದುಗರು,ಗೆಳೆಯರು,ಹಿತೈಷಿಗಳ ಒತ್ತಾಸೆಯ ಮೇರೆಗೆ, 5ನೇ ವರ್ಷದ ಸಂಭ್ರಮಾಚರಣೆಯ ಶುಭ ಸಂದರ್ಭದಲ್ಲಿ ನಿಲುಮೆ ಪ್ರಕಾಶನವನ್ನು ಪ್ರಾರಂಭಿಸುತ್ತಿದೆ.ನಿಲುಮೆ ಪ್ರಕಾಶನದ ಮೊದಲ ಪ್ರಕಟಣೆಯಾಗಿ,ಕುವೆಂಪು ವಿವಿಯ ಪ್ರೊ.ರಾಜಾರಾಮ್ ಹೆಗಡೆಯವರ ಬೌದ್ಧಿಕ ದಾಸ್ಯದಲ್ಲಿ ಭಾರತ ಪುಸ್ತಕವು,ಮಾರ್ಚ್ 1 ರ ಭಾನುವಾರ,ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಯಾಗಲಿದೆ.ಅಂದು ಈ ಪುಸ್ತಕದ ಮೂಲ ಲೇಖಕರಾದ ಬೆಲ್ಜಿಯಂ ಗೆಂಟ್ ವಿವಿಯ ಪ್ರಾಧ್ಯಾಪಕರೂ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಮಾಜ ವಿಜ್ಞಾನಿಗಳಲ್ಲಿ ಗುರುತಿಸಲ್ಪಡುವ ಪ್ರೊ.ಬಾಲಗಂಗಾಧರ,ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ|| ರಾ.ಗಣೇಶ್ ಹಾಗೂ,ಮೈಸೂರು ವಿವಿಯ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ ಪ್ರಧಾನ್ ಗುರುದತ್ತ ಅವರು ಅತಿಥಿಗಳಾಗಿ ಇರಲಿದ್ದಾರೆ.ಪುಸ್ತಕ ಪರಿಚಯ : ಬೌದ್ಧಿಕ ದಾಸ್ಯದಲ್ಲಿ ಭಾರತ ಪುಸ್ತಕದ ಮೂಲ, 1994ರಲ್ಲಿ ಪ್ರಕಟವಾಗಿ ಅಂತರಾಷ್ಟ್ರೀಯ ಸಮಾಜ ವಿಜ್ಞಾನಿಗಳ ಮಟ್ಟದಲ್ಲಿ ಬಹು ಚರ್ಚೆಗೊಳಗಾದ ಇಂದಿಗೂ ಚರ್ಚಿಸಲ್ಪಡುತ್ತಿರುವ,The Heathen in His Blindness ಪುಸ್ತಕ.ಮೂಲ ಲೇಖಕರು ಪ್ರೊ.ಬಾಲಗಂಗಾಧರ.ಕನ್ನಡಕ್ಕೆ ಪ್ರೊ.ರಾಜಾರಾಮ್ ಹೆಗಡೆ.ಬ್ರಿಟಿಷರು ಭೌತಿಕವಾಗಿ ಇವತ್ತು ನಮ್ಮನ್ನು ಆಳುತ್ತಿಲ್ಲವಾದರೂ ಬೌದ್ಧಿಕವಾಗಿ ಅವರು ಇಂದಿಗೂ ನಮ್ಮಲ್ಲಿ ಉಳಿದುಹೋಗಿದ್ದಾರೆ.ಈ ಪುಸ್ತಕದಲ್ಲಿ ವಸಾಹತುಶಹಿಯೂ ಹೇಗೆ ನಮ್ಮನ್ನು ಬೌದ್ಧಿಕವಾಗಿ ಬಂಧಿಸಿದೆ ಎಂಬುದನ್ನು ಅತ್ಯಂತ ಸರಳಭಾಷೆಯಲ್ಲಿ ಸಾಮಾನ್ಯ ಓದುಗರಿಗೂ ಮುಟ್ಟುವಂತೆ ಬರೆಯಲಾಗಿದೆ.ನಮ್ಮ ದೈನಂದಿನ ಅನುಭವಕ್ಕೂ ಮತ್ತು ಶಿಕ್ಷಣದಿಂದ ನಮ್ಮ ಸಮಾಜದ ಕುರಿತು ಪಡೆಯುವ ಜ್ಞಾನಕ್ಕೂ ಇರುವ ವ್ಯತ್ಯಾಸಗಳಿರುವುದು ಸಹ ನಮಗೆ ಒಂದಿಗೆ ಅರಿವಿಗೆ ಬರುತ್ತಿಲ್ಲ.ಬಂದರೂ ಅದರಿಂದ ಹೊರಬರುವುದು ಹೇಗೆ ಎಂಬ ಪ್ರಶ್ನೆಗಳು ಕಾಡುತ್ತವೆ. ಈ ಪುಸ್ತಕವು ನಮಗೆ ಆ ನಿಟ್ಟಿನಲ್ಲಿ ಸಹಾಯ ಮಾಡಬಲ್ಲದು.ನಿಲುಮೆ ಬಳಗದ ಪರವಾಗಿ ರಾಕೇಶ್ ಶೆಟ್ಟಿ ಅವರು ಸಹೃದಯ ಓದುಗರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ." }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಲುಮೆಗೆ 5: ಬೌದ್ಧಿಕ ದಾಸ್ಯದಲ್ಲಿ ಭಾರತ ಕೃತಿ ಲೋಕಾರ್ಪಣೆ

By Mahesh
|
Google Oneindia Kannada News

ಬೆಂಗಳೂರು, ಫೆ.28: ನಿಲುಮೆ ವೆಬ್ ತಾಣವು (nilume.net) ಕಳೆದ 5 ವರ್ಷಗಳಿಂದ ಕನ್ನಡ ಅಂತರ್ಜಾಲ ತಾಣದ ಮುಖ್ಯ ವೆಬ್ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಪುಸ್ತಕ ಪ್ರಕಾಶನ ಲೋಕಕ್ಕೆ ಕಾಲಿರಿಸುತ್ತಿದ್ದು, ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಕೃತಿಯನ್ನು ಜನರ ಮುಂದಿಡುತ್ತಿದೆ.

ನಿಲುಮೆ ತಾಣವು ಸಮಾಜ ವಿಜ್ಞಾನ, ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕೀಯ, ಕ್ರೀಡೆ, ವಾಣಿಜ್ಯ, ಮನೋರಂಜನೆ,ಪ್ರಚಲಿತ ವಿದ್ಯಾಮಾನಗಳು ಹೀಗೆ ಎಲ್ಲಾ ರೀತಿಯ ಬರಹಗಳಿಗೂ ಮತ್ತು ಮುಖ್ಯವಾಗಿ ನವ ಬರಹಗಾರರಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.

ನಾವು ಪ್ರತಿನಿತ್ಯ ನಮ್ಮ ವೆಬ್ ತಾಣದಿಂದ 8 ಸಾವಿರಕ್ಕೂ ಹೆಚ್ಚಿನ ಓದುಗರಿಗೂ ಹಾಗೂ ನಿಲುಮೆ ಫೇಸ್ಬುಕ್ ಗುಂಪಿನ ಮೂಲಕ 20 ಸಾವಿರ ಜನರನ್ನು ತಲುಪುತ್ತಿದೆ. ಇತ್ತೀಚೆಗಷ್ಟೇ ನಿಲುಮೆ ಗುಂಪಿನ ಮೇಲೆ ನಡೆದ ದಾಳಿ ಬಗ್ಗೆ ಓದುಗರಿಗೆ ವಿವರಿಸಿ ಹೇಳಬೇಕಾಗಿಲ್ಲ.

ನಿಲುಮೆಯ ಓದುಗರು,ಗೆಳೆಯರು,ಹಿತೈಷಿಗಳ ಒತ್ತಾಸೆಯ ಮೇರೆಗೆ, 5ನೇ ವರ್ಷದ ಸಂಭ್ರಮಾಚರಣೆಯ ಶುಭ ಸಂದರ್ಭದಲ್ಲಿ "ನಿಲುಮೆ ಪ್ರಕಾಶನ"ವನ್ನು ಪ್ರಾರಂಭಿಸುತ್ತಿದೆ.

Nilume group kannada book release and 5th year celebration

ನಿಲುಮೆ ಪ್ರಕಾಶನದ ಮೊದಲ ಪ್ರಕಟಣೆಯಾಗಿ,ಕುವೆಂಪು ವಿವಿಯ ಪ್ರೊ.ರಾಜಾರಾಮ್ ಹೆಗಡೆಯವರ "ಬೌದ್ಧಿಕ ದಾಸ್ಯದಲ್ಲಿ ಭಾರತ" ಪುಸ್ತಕವು,ಮಾರ್ಚ್ 1 ರ ಭಾನುವಾರ,ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ "ಮಿಥಿಕ್ ಸೊಸೈಟಿ"ಯಲ್ಲಿ ಬಿಡುಗಡೆಯಾಗಲಿದೆ.

ಅಂದು ಈ ಪುಸ್ತಕದ ಮೂಲ ಲೇಖಕರಾದ ಬೆಲ್ಜಿಯಂ ಗೆಂಟ್ ವಿವಿಯ ಪ್ರಾಧ್ಯಾಪಕರೂ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಮಾಜ ವಿಜ್ಞಾನಿಗಳಲ್ಲಿ ಗುರುತಿಸಲ್ಪಡುವ "ಪ್ರೊ.ಬಾಲಗಂಗಾಧರ",ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ|| ರಾ.ಗಣೇಶ್ ಹಾಗೂ,ಮೈಸೂರು ವಿವಿಯ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ ಪ್ರಧಾನ್ ಗುರುದತ್ತ ಅವರು ಅತಿಥಿಗಳಾಗಿ ಇರಲಿದ್ದಾರೆ.

Nilume group kannada book release and 5th year celebration
ಪುಸ್ತಕ ಪರಿಚಯ : "ಬೌದ್ಧಿಕ ದಾಸ್ಯದಲ್ಲಿ ಭಾರತ" ಪುಸ್ತಕದ ಮೂಲ, 1994ರಲ್ಲಿ ಪ್ರಕಟವಾಗಿ ಅಂತರಾಷ್ಟ್ರೀಯ ಸಮಾಜ ವಿಜ್ಞಾನಿಗಳ ಮಟ್ಟದಲ್ಲಿ ಬಹು ಚರ್ಚೆಗೊಳಗಾದ ಇಂದಿಗೂ ಚರ್ಚಿಸಲ್ಪಡುತ್ತಿರುವ,"The Heathen in His Blindness" ಪುಸ್ತಕ.ಮೂಲ ಲೇಖಕರು ಪ್ರೊ.ಬಾಲಗಂಗಾಧರ.ಕನ್ನಡಕ್ಕೆ ಪ್ರೊ.ರಾಜಾರಾಮ್ ಹೆಗಡೆ.ಬ್ರಿಟಿಷರು ಭೌತಿಕವಾಗಿ ಇವತ್ತು ನಮ್ಮನ್ನು ಆಳುತ್ತಿಲ್ಲವಾದರೂ ಬೌದ್ಧಿಕವಾಗಿ ಅವರು ಇಂದಿಗೂ ನಮ್ಮಲ್ಲಿ ಉಳಿದುಹೋಗಿದ್ದಾರೆ.

ಈ ಪುಸ್ತಕದಲ್ಲಿ ವಸಾಹತುಶಹಿಯೂ ಹೇಗೆ ನಮ್ಮನ್ನು ಬೌದ್ಧಿಕವಾಗಿ ಬಂಧಿಸಿದೆ ಎಂಬುದನ್ನು ಅತ್ಯಂತ ಸರಳಭಾಷೆಯಲ್ಲಿ ಸಾಮಾನ್ಯ ಓದುಗರಿಗೂ ಮುಟ್ಟುವಂತೆ ಬರೆಯಲಾಗಿದೆ.ನಮ್ಮ ದೈನಂದಿನ ಅನುಭವಕ್ಕೂ ಮತ್ತು ಶಿಕ್ಷಣದಿಂದ ನಮ್ಮ ಸಮಾಜದ ಕುರಿತು ಪಡೆಯುವ ಜ್ಞಾನಕ್ಕೂ ಇರುವ ವ್ಯತ್ಯಾಸಗಳಿರುವುದು ಸಹ ನಮಗೆ ಒಂದಿಗೆ ಅರಿವಿಗೆ ಬರುತ್ತಿಲ್ಲ.ಬಂದರೂ ಅದರಿಂದ ಹೊರಬರುವುದು ಹೇಗೆ ಎಂಬ ಪ್ರಶ್ನೆಗಳು ಕಾಡುತ್ತವೆ. ಈ ಪುಸ್ತಕವು ನಮಗೆ ಆ ನಿಟ್ಟಿನಲ್ಲಿ ಸಹಾಯ ಮಾಡಬಲ್ಲದು.

ನಿಲುಮೆ ಬಳಗದ ಪರವಾಗಿ ರಾಕೇಶ್ ಶೆಟ್ಟಿ ಅವರು ಸಹೃದಯ ಓದುಗರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

English summary
Nilume website is venturing into book publishing world with 5th year annual celebration. The event will be held March 1, Sunday at Mythic Society, Nrupatunga Road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X