ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ನಿಕಾನ್ ಹೊಸ ಅಡ್ರೆಸ್, ಹೊಸ ಕೂಲ್ ಪಿಕ್ಸ್

By Mahesh
|
Google Oneindia Kannada News

ಬೆಂಗಳೂರು,ಏ.21,2015: ನಿಕಾನ್ ಕಾರ್ಪೊರೇಷನ್ ನ ಶೇ.100ರಷ್ಟು ಅಂಗಸಂಸ್ಥೆಯಾಗಿರುವ ನಿಕಾನ್ ಇಂಡಿಯಾ, ಬೆಂಗಳೂರಿನ ಶಾಖಾ ಕಚೇರಿ ಸ್ಥಳಾಂತರ ಮಾಡಿದೆ. ಹೊಸ ಕಚೇರಿಯನ್ನು ನಿಕಾನ್ ಇಂಡಿಯಾ ಪ್ರೈ ಲಿ.ನ ವ್ಯವಸ್ಥಾಪಕ ನಿರ್ದೇಶಕ ಹಿರೋಶಿ ತಕಶಿನ ಉದ್ಘಾಟಿಸಿದರು. ನಿಕಾನ್ ಕೂಲ್ ಪಿಕ್ಸ್ ನ 83X ಆಪ್ಟಿಕಲ್ ಜೂಮ್ ಇರುವ ಬಹು ನಿರೀಕ್ಷಿತ ಕ್ಯಾಮೆರಾ ಕೂಡಾ ಇದೇ ಸಂದರ್ಭದಲ್ಲಿ ಮಾರಾಟಕ್ಕೆ ಬಿಡಲಾಗಿದೆ.

ನಿಕಾನ್ ದೇಶದಲ್ಲಿ ತನ್ನ ಅಸ್ತಿತ್ವ ಬಲವರ್ಧನೆಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದು ಇಂದು ದೇಶದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿಕೊಂಡಿದೆ.
* ಗುರ್ಗಾಂವ್, ದಿಲ್ಲಿ, ಮುಂಬೈ, ಕೋಲ್ಕತಾ ನಂತರ ನಿಕಾನ್‍ನ ದಕ್ಷಿಣ ಬ್ರ್ಯಾಂಚ್ ಕಚೇರಿ ಆಗಿದೆ.
* ದೇಶದಾದ್ಯಂತ 5 ಶಾಖೆಗಳು, 120 ಕೂಲ್‍ಫಿಕ್ಸ್&ಡಿ-ಎಸ್‍ಎಲ್‍ಆರ್ ವಲಯ, 32 ಅಧಿಕೃತ ಸೇವಾಕೇಂದ್ರಗಳು, 64 ನಿಕಾನ್ ಸಂಗ್ರಹ ಕೇಂದ್ರಗಳನ್ನು ಹೊಂದಿದೆ.
* ಬೆಂಗಳೂರಿನ ಶಾಖಾ ಕಚೇರಿ 6000 ಚದರ ಅಡಿಯಲ್ಲಿ ವ್ಯಾಪಿಸಿದ್ದು ಮಾರಾಟ, ಸೇವೆ, ಗ್ರಾಹಕ ಬೆಂಬಲ ಮತ್ತು ತಾಂತ್ರಿಕ ತಂಡಗಳು ಒಂದೇ ಸೂರಿನಡಿಯಲ್ಲಿವೆ.
* ಬೆಂಗಳೂರಿನ ಹೊಸ ಕಚೇರಿ ವಿಳಾಸ: ಜೆಎನ್‍ಆರ್ ಸಿಟಿ ಕೇಂದ್ರ, ಮೊದಲನೆ ಮಹಡಿ,#30, ರಾಜಾರಾಮ್ ಮೋಹನ್‍ರಾಯ್ ರಸ್ತೆ, ಸಂಪಂಗಿ ರಾಮನಗರದಲ್ಲಿದೆ.

Nikon Brings in COOLPIX Spring Series 2015

ನಿಕಾನ್ ಇಂಡಿಯಾ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಹಿರೋಶಿ ತಕಶಿನಿ: ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ನಾವು ನಮ್ಮ ಶಾಖಾ ಕಚೇರಿಯನ್ನು ಸ್ಥಳಾಂತರಿಸಲು ಸಂತೋಷಪಡುತ್ತಿದ್ದೇವೆ. ಇದು ನಮಗೆ ಭರವಸೆಯ ಮಾರುಕಟ್ಟೆಯಾಗಿದೆ. ಸಾಂಸ್ಕøತಿಕವಾಗಿ ಶ್ರೀಮಂತವಾಗಿರುವ ದಕ್ಷಿಣ ಭಾರತ ಹವ್ಯಾಸಿ ಮತ್ತು ವೃತ್ತಿಪರ ಛಾಯಾಗ್ರಾಹಕರಿಗೆ ತಮ್ಮ ಕೌಶಲ್ಯ ತೋರಿಸಲು ಅತ್ಯುತ್ತಮ ವೇದಿಕೆ ಒದಗಿಸುತ್ತದೆ ಎಂದರು.

ನಿಕಾನ್ ಇಂಡಿಯಾ ಕುರಿತು:
ನಿಕಾನ್ ಇಂಡಿಯಾ, ನಿಕಾನ್ ಇಮ್ಯಾಜಿಂಗ್ ಉತ್ಪನ್ನಗಳ ಮಾರುಕಟ್ಟೆ ಮತ್ತು ವಿತರಣೆ ನಿರ್ವಹಿಸುತ್ತಿದೆ. ಹೊಸತಾಗಿ ಬಿಡುಗಡೆಗೊಂಡ ನಿಕಾನ್ ಸ್ಪೋರ್ಟ್ ಆಪ್ಟಿಕ್ಸ್ ಮತ್ತು ನಿಕಾನ್ ಇನ್ಸ್‍ಟ್ರುಮೆಂಟ್ಸ್‍ಗಳನ್ನು ಹೊಂದಿದೆ. ನಿಕಾನ್ 1 ಸರಣಿ, ಆಯ್ದ ಡಿ-ಎಸ್‍ಎಲ್‍ಆರ್ ಕ್ಯಾಮೆರಾ ಮತ್ತು ಇತರೆ ಉತ್ಪನ್ನಗಳು ಲಭ್ಯವಿದೆ.

ಮುಂಬೈ, ಕೋಲ್ಕತಾ, ಬೆಂಗಳೂರು, ದಿಲ್ಲಿ, ಗುರ್ಗಾಂವ್‍ಗಳಲ್ಲಿ ಕಛೇರಿ ಹೊಂದಿದೆ. 5 ಸ್ವಂತ ನಿಕಾನ್ ಕೇಂದ್ರಗಳನ್ನು ಹೊಂದಿದೆ. 32 ಅಧಿಕೃತತೆ ಪಡೆದ ಕೇಂದ್ರ, 64 ನಿಕಾನ್ ಕಲೆಕ್ಷನ್ ಕೇಂದ್ರಗಳನ್ನು ಹೊಂದಿದೆ. 3000 ವಿತರಕ ಮಾದರಿ ಕೇಂದ್ರಗಳನ್ನು ಹೊಂದಿದೆ. ಭಾರತಾದ್ಯಂತ 120ಕ್ಕೂ ಅಧಿಕ ಕೂಲ್‍ಫಿಕ್ಸ್ ಮತ್ತು ಡಿ-ಎಸ್‍ಎಲ್‍ಆರ್ ವಲಯಗಳನ್ನು ಅಭಿವೃದ್ಧಿಗೊಳಿಸಿದೆ.

Nikon

ನಿಕಾನ್ ಕಾರ್ಪೊರೇಷನ್ ಕುರಿತು:
1917ರಲ್ಲಿ ಸ್ಥಾಪನೆಗೊಂಡ ನಿಪ್ಪೊನ್ ಕೊಗಕು 1988ರಲ್ಲಿ ನಿಕಾನ್ ಕಾರ್ಪೊರೇಷನ್ ಎಂದು ಮರು ನಾಮಕರಣಗೊಂಡಿತು. ಕ್ರಿಯಾಶೀಲ ಇಮೇಜಿಂಗ್ ವಲಯದಲ್ಲಿ ನಿಕಾನ್ ಗುರುತಿಸಿಕೊಂಡಿದೆ. ನಿಕಾನ್ ತಂತ್ರಜ್ಞಾನ ಎಲ್ಲ ವಲಯದಲ್ಲೂ ಅಭಿವೃದ್ಧಿಗೊಂಡಿದೆ.

* COOLPIX P900, available in Black color at an MRP of INR 29,950
* COOLPIX P610, available in Black and Red Color at an MRP of INR 23,950

Nikon Website: www.nikon.co.in
Nikon India Facebook: www.facebook.com/nikonIndia
Service id: [email protected]
Sales & Support enquiries id: [email protected]

English summary
Nikon India, a 100% subsidiary of Nikon Corporation, leaders in imaging technology, today announced the COOLPIX Spring Series 2015. The new additions to Nikon’s comprehensive line-up of compact cameras offers pure photography pleasure and are designed to impress and inspire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X