ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್ ಬೆಂಕಿ ದುರಂತ, ಸಾವನ್ನಪ್ಪಿದ ಭಾಗ್ಯಮ್ಮ ಕುಟುಂಬಕ್ಕೆ ರು.3ಲಕ್ಷ

ನೆಲಮಂಗಲದ ಬಳಿ ಸೋಮವಾರ ಮಧ್ಯ ರಾತ್ರಿ ಸಂಭವಿಸಿದ ಬಸ್ ಬೆಂಕಿ ದುರಂತದಲ್ಲಿ ಸಜೀವ ದಹನವಾಗಿದ್ದ ಭಾಗ್ಯಮ್ಮ ಕುಟುಂಬಕ್ಕೆ 3 ಲಕ್ಷ ರು, ಪರಿಹಾರ ನೀಡುವುದಾಗಿ ರಾಜ್ಯ ಸಾರಿಗೆ ನಿರ್ದೆಶಕ ಹೇಳಿದ್ದಾರೆ.

By Ramesh
|
Google Oneindia Kannada News

ಬೆಂಗಳೂರು, ಫೆಬ್ರವರಿ. 21 : ಸೋಮವಾರ ತಡರಾತ್ರಿ ನೆಲಂಗಲದ ಅರಿಶೀನಕುಂಟೆ ಬಳಿ ಕೆಎಸ್ ಆರ್ ಟಿಸಿ ಬಸ್‍ ಗೆ ಬೆಂಕಿ ಬಿದ್ದ ದುರಂತದಲ್ಲಿ ಸಾವನ್ನಪ್ಪಿದ ಭಾಗ್ಯಮ್ಮ ಕುಟುಂಬಕ್ಕೆ ಮೂರು ಲಕ್ಷ ರು. ಪರಿಹಾರ ನೀಡುವುದಾಗಿ ರಾಜ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರಕುಮಾರ್ ಕಠಾರಿಯ ತಿಳಿಸಿದ್ದಾರೆ.

ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ದುರ್ಘಟನೆಯಲ್ಲಿ ಸಜೀವವಾಗಿ ದಹನವಾದ ಭಾಗ್ಯಮ್ಮ ಅವರ ಕುಟುಂಬಕ್ಕೆ ಪರಿಹಾರ ಘೋಷಿಸಿದರು. [ನೆಲಮಂಗಲ:ಕೆಎಸ್ ಆರ್ ಟಿಸಿ ಬಸ್ ಗೆ ಬೆಂಕಿ,1 ಸಾವು,10 ಜನರಿಗೆ ಗಾಯ]

Nelamangala KSRTC Bus Fire: 3 Lakhs Compensation For Victim announced by ksrtc md

ಈ ಘಟನೆ ಶಾರ್ಟ್ ಸಕ್ರ್ಯೂಟ್ ನಿಂದ ಆಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ, ನಿಖರವಾಗಿ ಏನನ್ನು ಹೇಳಲು ಸಾಧ್ಯವಾಗುತ್ತಿಲ್ಲ.

ವಿಧಿವಿಜ್ಞಾನ ತಜ್ಞರು ಪರಿಶೀಲಿಸಿ ವರದಿ ನೀಡಿದ ನಂತರ ಕಾರಣ ತಿಳಿದುಬರಲಿದೆ ಎಂದು ಹೇಳಿದರು. ಅಗ್ನಿಶಾಮಕ ದಳದ ಡಿಜಿಪಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಗೋಪಾಲ್ ಪೂಜಾರಿ ಈ ಸಂದರ್ಭದಲ್ಲಿ ಇದ್ದರು.

ಈ ಅಗ್ನಿ ದುರಂತದಲ್ಲಿ 10 ಜನರು ಗಾಯಗೊಂಡಿದ್ದು ಮಮತಾ ಎನ್ನಯ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಸಧ್ಯ ಮಮತಾ ವಿಕ್ಟೋರಿಯಾ ಆಸ್ಪತ್ರೆಯಲ್ಲು ಚಿಕಿತ್ಸೆ ಪಡೆಯುದ್ದಾರೆ.

ಆದರೆ, ಮಮತಾಳ ದೇಹ ಶೇ.70ರಷ್ಟು ಸುಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

English summary
Nelamangala KSRTC Bus Fire: 3 Lakhs Compensation For Victim announced by KSRTC Managing Director Rajender Kumar Kataria on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X